Thursday, October 29, 2009

Thursday, October 15, 2009

Wednesday, October 14, 2009

ವೆಚ್ಚ ಕಡಿತವೆಂಬ ಭ್ರಮೆ ಮತ್ತು ವಾಸ್ತವ

ಸರಕಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಸಂಬಂಧ ಹಲವು ರೀತಿಯ ಚರ್ಚೆ, ತರ್ಕ, ಕುತರ್ಕಗಳು ನಡೆಯುತ್ತಿವೆ. ಇದರ ಫಲಿತಾಂಶ ಧನಾತ್ಮಕವಾಗಿ ಇಲ್ಲವೆ ಋಣಾತ್ಮಕವಾಗಿಯೂ ಬರಬಹುದು ಆದರೆ ಒಂದೇ ಒಂದು ಸಂತೋಷದ ವಿಚಾರವೆಂದರೆ ರಾಜಕೀಯ ನಾಯಕರು ದುಂದು ವೆಚ್ಚ ಮಾಡುತ್ತಿದ್ದಾರೆ ಎನ್ನುವ ಅರಿವು ಮೂಡಿರುವುದು.
ಬಹುಶಃ ಜಗತ್ತಿನ ಯಾವ ದೇಶದ ನಾಯಕರೂ ಖರ್ಚು ಮಾಡಲಾರದಷ್ಟು ಹಣವನ್ನು ನಮ್ಮ ದೇಶದ ನಾಯಕರು ದುಂದುವೆಚ್ಚ ಮಾಡುತ್ತಿದ್ದಾರೆ. ಒಟ್ಟು ಆಡಳಿತ ಯಂತ್ರದ ಖರ್ಚು ಸರಿಸುಮಾರು ಆದಾಯದ ಶೇ. ೨೦ ತಲುಪುತ್ತದೆ. ಅವರ ಮನೆ, ಭದ್ರತೆ, ಸಾರಿಗೆ ಕಾಲಾಳುಗಳು... ಹೀಗೆ ಲೆಕ್ಕ ಮಾಡುತ್ತ ಹೋದರೆ ನಾಯಕರೆನಿಸಿಕೊಂಡವರ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದೇಶ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದರೂ ಖರ್ಚಿನ ಮೇಲೆ ಹಿಡಿತಕ್ಕೆ ಮುಂದಾಗಲಿಲ್ಲ ಆದ್ದರಿಂದ ವೆಚ್ಚ ಲೆಕ್ಕಕ್ಕೆ ಸಿಗದೆ ಬೆಳೆಯುತ್ತ ಹೋಯಿತು. ಒಂದು ವರ್ಷದ ಅವಯಲ್ಲಿ ನಮ್ಮ ನಾಯಕರು ಮಾಡಿದ ಖರ್ಚು ೧೦ ಲಕ್ಷ ಕೋಟಿರೂಪಾಯಿ. ಅದರಲ್ಲಿ ೫.೭೫ ಲಕ್ಷ ಕೋಟಿ ದುಂದುವೆಚ್ಚವಾಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ ದೇಶದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರೇ ಬಹಿರಂಗಪಡಿಸಿದ್ದಾರೆ. ಇಂಥ ವೆಚ್ಚಗಳನ್ನು ಬರೀ ತಡೆದರೆ ಸಾಲದು ಸಂಪೂರ್ಣವಾಗಿ ನಿರ್ಬಂದಿಸುವಂಥ ಕಾನೂನುಗಳು ಜಾರಿಯಾಗಬೇಕು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ದೇಶದ ಜನರ ತೆರಿಗೆಹಣ ಕೆಲವರ ಮೋಜಿಗೆ ಖರ್ಚಾಗಿಬಿಡುವ ಸಾಧ್ಯತೆ ಹೆಚ್ಚು.
ಕೋಟೆ ಲೂಟಿಯಾದಮೇಲೆ ದಿಡ್ಡಿಬಾಗಿಲು ಹಾಕಿದಂತೆ ಹತ್ತಾರುವರ್ಷಗಳಿಂದ ಸಾರ್ವಜನಿಕರ ಹಣ ತಿಂದು ಈಗ ಎಚ್ಚರ ಗೊಂಡವರಂತೆ ಎಲ್ಲರೂ ಬಡಬಡಿಸುತ್ತಿದ್ದಾರೆ ಅದಕ್ಕಾಗಿ ವಿಮಾನಗಳಲ್ಲಿ ಬಿಸಿನೆಸ್‌ಕ್ಲಾಸ್‌ಗಳನ್ನು ಬಿಟ್ಟು ಎಕಾನಮಿ ಕ್ಲಾಸ್‌ಗಳಲ್ಲಿ ಓಡಾಡುವ ತಾಲೀಮು ಮಾಡುತ್ತಿದ್ದಾರೆ. ಈ ತಾಲೀಮು ನಿರಾಕರಿಸಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಶಶಿ ಥರೂರಂಥವರು ಸಾಮಾನ್ಯ ದರ್ಜೆಯ ವಿಮಾನಯಾನವನ್ನು ಜಾನುವಾರು ದರ್ಜೆ (ಕ್ಯಾಟ್ಲ್ ಕ್ಲಾಸ್) ಎಂದು ಇಡೀ ದೇಶದ ಮದ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನು ಅವಮಾನಿಸಿದ್ದರು. ಅದೇ ಹೊತ್ತಿನಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಸೋನಿಯಾ ಗಾಂ, ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮುಂತಾದವರು ಸಾಮಾನ್ಯ ದರ್ಜೆಯಲ್ಲಿ ಓಡಾಡಿ ಸುದ್ದಿ ಮಾಡಿದ್ದರು. ರಾಹುಲ್‌ಗಾಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಘರೌಂಡಬಳಿ ರಾಹುಲ್ ಇದ್ದ ರೈಲಿನ ಮೇಲೆ ಕೆಲವು ಯುವಕರು ಕಲ್ಲು ತೂರಿ ಗಲಾಟೆಯನ್ನೂ ಮಾಡಿದ್ದರು ಇದರಿಂದ ರಾಹುಲ್‌ಗೆ ಪ್ರಚಾರವೂ ಸಿಕ್ಕಿತು. ವಿಮಾನ ಯಾನಕ್ಕಿಂತ ಖರ್ಚೂ ಹೆಚ್ಚಾಯಿತು. ಒಟ್ಟಾರೆಯಾಗಿ ಭಾರೀ ಸುದ್ದಿಯನ್ನಂತೂ ಮಾಡಿದ್ದರು.
ಇವೆಲ್ಲ ಒಂದು ಹಂತದಲ್ಲಿ ಪ್ರಚಾರವನ್ನೂ ಮತ್ತೆ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ತಂತ್ರಗಳಾಗಿ ಕಾಣುತ್ತಿವೆಯೇ ಹೊರತು ದುಂದುವೆಚ್ಚ ತಡೆಯಲು ಮಾಡಿದ ಶಾಶ್ವತ ಪರಿಹಾರಗಳಾಗಿ ಅಲ್ಲ. ಕಾರಣ, ಇಲ್ಲಿ ಕೆಲವೇ ಸಾವಿರ ರೂಪಾಯಿಗಳ ಖರ್ಚು ತಡೆಯುವ ನಾಟಕವಾಡುವ ರಾಜಕೀಯ ನಾಯಕರು ತಮ್ಮ ನಿವಾಸಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಅಂಶಗಳು ಬೆಳಕಿಗೆ ಬರುತ್ತವೆ. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಬಯಲಾಗುತ್ತದೆ. ಇವೆಲ್ಲವನ್ನು ಗಮನಿಸಿದರೆ ವೆಚ್ಚ ತಡೆಯುವ ಪ್ರಯತ್ನ ಎನ್ನುವುದರ ಸಾಮಾಜಿಕ ಜೀವನದಲ್ಲಿರುವವರು ಆಡಿದ ಬಣ್ಣವಿಲ್ಲದ ನಾಟಕದಂತೆ ಕಾಣುತ್ತದೆ. ಪತ್ರಿಕಾ ಹುಲಿಗಳಾಗಿರುವ ನಮ್ಮ ಕೆಲ ನಾಯಕರು ಒಂದು ತಿಂಗಳ ಸಂಬಳವನ್ನು ಬಿಟ್ಟು ಬಿಡುವುದಾಗಿ ತಿಳಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ನಮ್ಮ ಮಾಜಿ ಪ್ರಧಾನಿ ತಮ್ಮ ವೇತನದ ಶೇ. ೨೦ರಷ್ಟು ಹಣವನ್ನು ವಾಪಸ್ ನೀಡುವುದಾಗಿ ಘೋಷಣೆ ಮಾಡಿಕೊಂಡರು. ಇಂಥ ಅಗ್ಗದ ಪ್ರಚಾರಗಳಿಗೆ ಮುಂದಾಗುವುದನ್ನು ನೋಡಿದರೆ ಒಂದು ಕಡೆ ನಾಚಿಕೆ ಮತ್ತೊಂದು ಕಡೆ ಮರುಕವುಂಟಾಗುತ್ತದೆ.
ಚುನಾವಣೆಯಲ್ಲಿ ಗೆಲುವೊಂದನ್ನು ಗಮನದಲ್ಲಿಟ್ಟುಕೊಂಡು ವಾಮ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ಚೆಲ್ಲುವವರು ಇಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ತಮ್ಮ ಜನ್ಮಾಂತರದ ಆಸ್ತಿಯನ್ನು ಬಿಟ್ಟುಕೊಡುವವರಂತೆ ಹೇಳಿಕೆಗಳನ್ನು ಕೊಡುವುದನ್ನು ನೋಡಿದರೆ ನಾಚಿಕೆಯಾಗುತ್ತದೆ. ಉನ್ನತ ನಾಯಕರೆನಿಸಿಕೊಂಡವರು ಸಣ್ಣ ಸಣ್ಣ ಹೇಳಿಕೆಗಳಿಂದ ಮಹಾತ್ಮರಾಗಲು ಯತ್ನಿಸುವುದನ್ನು ನೋಡಿದರೆ ವಿಷಾದವೆನಿಸುತ್ತದೆ.
ದೇಶ ಎಂಥ ಆರ್ಥಿಕ ಸ್ಥಿತಿಯಲ್ಲಿದ್ದರೂ ಶಾಸಕರು, ಸಚಿವರು, ಲೋಕಸಭೆ ಸದಸ್ಯರ ವೇತನ ಹೆಚ್ಚಳಗಳು ನಿಂತಿಲ್ಲ. ಅವು ಕಾಲಕ್ಕೆ ಸರಿಯಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಹೆಚ್ಚುತ್ತಲೇ ಇವೆ. ಅವು ಕಡಿಮೆಯಾದ ಉದಾಹರಣೆಳು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ತೀರಾ ತೀರಾ ವಿರಳ. ಈ ವರ್ಷ ದೇಶ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ನನ್ನ ಸಂಬಳ ಹೆಚ್ಚಳ ಬೇಡ ಎಂದು ಯಾರಾದರೂ ಹೇಳಿದ್ದರೆ ಪವಾಡವೇ ನಡೆದುಹೋಗುತ್ತಿತ್ತೇನೊ. ದೃಷ್ಟವಶಾತ್ ಯಾರೊಬ್ಬರೂ ಅಂಥ ಪವಾಡಕ್ಕೆ ಮುಂದಾಗಿಲ್ಲ ಎನ್ನುವುದೇ ‘ಸಂತೋಷ’ದ ಸಂಗತಿ.
ನಮ್ಮ ದೇಶದ ನಾಯಕರು ಅನೇಕ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸಲು ಯತ್ನಿಸುತ್ತಾರೆ. ಅವರ ಆಡಳಿತದಂತೆ ನಾವೂ ಇರಬೇಕು ಎಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತದ್ವಿರುದ್ಧ ನಡೆಯುತ್ತಾರೆ. ಕೃಷಿಯಲ್ಲಿ ಅಮೆರಿಕದ ರೈತರ ಸಾಲಿನಲ್ಲಿ ಭಾರತೀಯ ರೈತರನ್ನು ನಿಲ್ಲಿಸಿ ನೋಡುವ ಮೊಂಡು, ಹುಂಬು ಪ್ರಯತ್ನಗಳು ಅನೇಕ ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಅವರ ನಾಯಕತ್ವದ ಸಾಲಿನಲ್ಲಿ ನಾವು ನಿಂತರೆ ಏನಾಗಬಹುದು ಎಂದು ಯಾರೂ ಯೋಚಿಸುತ್ತಿಲ್ಲ.
ಕೆಲಸಕ್ಕೆ ಬಾರದ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸುವ ಬದಲು ಚುನಾವಣೆಯಂಥ ಅತಿ ದುಂದು ವೆಚ್ಚದ ಕ್ರಿಯೆಗಳಲ್ಲಿ ಅನುಕರಿಸಬೇಕಾಗಿದೆ. ನಾಯಕನ ಸಾಮರ್ಥ್ಯವನ್ನು ಹಣದಿಂದ ಒರೆಗೆ ಹಚ್ಚದೆ ಜನಮಾನಸದ ಪ್ರತಿಕ್ರಿಯೆಗಳಿಂದ ನೋಡುವಂಥ ಕ್ರಿಯೆಗಳಿಗೆ ಭಾರತದಲ್ಲಿ ಅವಕಾಶ ನೀಡಬೇಕಾಗಿದೆ.
ದುಂದು ವೆಚ್ಚಕ್ಕೆ ಕಡಿವಾಣ ಎನ್ನುವ ಬದಲು ಅದಕ್ಕೆ ಅವಕಾಶವೇ ಇಲ್ಲದಂಥ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಇದು ಅಸಾಧ್ಯದ ಮಾತಲ್ಲ ಆದರೆ ಆಳುವವರು ಇದನ್ನು ಒಪ್ಪುತ್ತಿಲ್ಲ. ಬ್ರೆಜಿಲ್‌ನಂಥ ದೇಶ ಇವತ್ತು ಕೃಷಿಯಲ್ಲಿ ಏನೆಲ್ಲಾ ಸಾಧನೆ ಮಾಡಿ ತೋರಿಸಿದೆ ಎಂದರೆ ಅದು ಅಲ್ಲಿನ ನಾಯಕರ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ. ವೆನಿಜುಯೆಲಾದಂಥ ಚಿಕ್ಕ ದೇಶ ಇವತ್ತು ಜಗತ್ತಿಗೆ ತನ್ನನ್ನು ತಾನು ಬಿಂಬಿಸಿಕೊಳ್ಳಲು ಹವಣಿಸುತ್ತಿದೆ. ಬೊಲಿವಿಯಾದಂಥ ಸಣ್ಣ ದೇಶ ಶ್ರೀಮಂತ ದೇಶಗಳ ಆರ್ಥಿಕ ದಿಗ್ಬಂಧನದಂಥ ದಬ್ಬಾಳಿಕೆಗಳಿಂದ ಹೊರಬಂದು ಸ್ವಾಭಿಮಾನದಿಂದ ತಲೆ ಎತ್ತುತ್ತಿದೆ. ಅದೇರೀತಿ ಸಣ್ಣಪುಟ್ಟ ದೇಶಗಳು ತಮ್ಮನ್ನು ಹಾಗೇ ಬಿಂಬಿಸಿಕೊಳ್ಳುತ್ತವೆ. ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದರೆ ನಾಚಿಕೆಪಡುವಂಥ ವಿಚಾರ.
ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಡಿ-ಸಿಲ್ವಾ ಅಕಾರಕ್ಕೆ ಬರುತ್ತಿದ್ದಂತೆಯೇ ಮೊದಲು ಮಾಡಿದ್ದು ಅನಗತ್ಯ ಖರ್ಚುಗಳ ತಡೆ. ಹಾಗೆಯೇ ಅಧ್ಯಕ್ಷರ ಹೆಸರಿನಲ್ಲಿ ಸರಕಾರದ ಖಜಾನೆಯಿಂದ ಸಂದಾಯವಾಗುತ್ತಿದ್ದ ಭಾರಿ ವೇತನ ಮೊಟಕು. ಇದು ಅಧ್ಯಕ್ಷರಿಗೆ ಅನ್ವಯವಾದ ಮೇಲೆ ಎಲ್ಲರಿಗೂ ಅನ್ವಯ ಎಂದು ಬಹುತೇಕರು ತಮ್ಮ ವೇತನವನ್ನು ತಾವೇ ಕಡಿತಗೊಳಿಸಿಕೊಂಡರು. ವೆನಿಜುಯೆಲಾ ದೇಶದ ಅಧ್ಯಕ್ಷರಾಗಿರುವ ಹ್ಯೂಗೊ ಚಾವೆಜ್ ಕೂಡಾ ಅಂಥ ನಿರ್ಧಾರಗಳನ್ನು ಕೈಗೊಂಡರು. ಬೊಲಿವಿಯಾ ದೇಶದ ಅಧ್ಯಕ್ಷರಾಗಿರುವ ಏವೊ ಮೊರಾಲಸ್ ಕೂಡಾ ತಮ್ಮ ವೇತನವನ್ನು ತುಂಬಾ ಕಡಿಮೆ ಮಾಡಿಕೊಂಡರು. ಅದಕ್ಕೆ ಅವರು ಒಂದು ಕಾರಣ ಕೊಟ್ಟಿದ್ದರು. ‘ದೇಶ ನನಗೆ ಓಡಾಡಲು ಕಾರು ನೀಡಿದೆ. ರಕ್ಷಕರನ್ನು ನೀಡಿದೆ. ಮಲಗಲು ಬಂಗಲೆ ನೀಡಿದೆ. ಇವೇ ಮನುಷ್ಯನ ಅಗತ್ಯಗಳು ಅವೆಲ್ಲವನ್ನೂ ಪಡೆದಮೇಲೂ ಅಗತ್ಯಕ್ಕಿಂತ ಹೆಚ್ಚು ವೇತನ ಪಡೆಯುವುದು ಆತ್ಮಹೀನ ಕೃತ್ಯ. ಇಷ್ಟೊಂದು ವೇತನ ನನಗೆ ಬೇಡ, ಅತಿ ಕಡಿಮೆ ಖರ್ಚಿನ ಜೀವನಕ್ಕೆ ಸಾಕಾಗುವಷ್ಟು ಹಣ ಸಾಕು’ ಎಂದು ಸ್ವಲ್ಪ ಹಣವನ್ನು ಮಾತ್ರ ಪಡೆಯುತ್ತಿದ್ದಾರೆ ಉಳಿದದ್ದನ್ನು ಸರಕಾರಿ ಖಜಾನೆಗೆ ಹಿಂತಿರುಗಿಸಿದ್ದಾರೆ. ಒಂದು ಕಡೆ ಅವರು ಹೀಗೆ ಹೇಳಿಕೊಂಡಿದ್ದಾರೆ ‘ಜನರು ತಮ್ಮ ಅನೇಕ ಕನಸುಗಳನ್ನು ಈಡೇರಿಸುವ ಆಶಾಕಿರಣಗಳಾಗಿ ನಮ್ಮನ್ನು ನೋಡುತ್ತಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳುವುದು ಮತ್ತು ಅವರ ಆಸೆಗಳನ್ನು ಈಡೇರಿಸಲು ಪ್ರಾಮಾಣಿಕರಾಗಿ ದುಡಿಯುವುದು ನಮ್ಮ ಆಧ್ಯ ಕರ್ತವ್ಯ. ಅದನ್ನು ನೆನಪಿನಲ್ಲಿಟ್ಟುಕೊಂಡು ನಡೆಯದೆ ದುಂದುವೆಚ್ಚಕ್ಕೆ ಮತ್ತು ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಿದರೆ ಜನರ ನಿರೀಕ್ಷೆಗಳು ಮಾತ್ರ ಹುಸುಯಾಗುವುದಿಲ್ಲ ಆತ್ಮವಂಚನೆಯಾಗುತ್ತದೆ’ ಎಂದಿದ್ದಾರೆ. ಅವರ ಸಹವರ್ತಿಗಳೂ ಅದೇ ಸಿದ್ಧಾಂತವನ್ನು ಒಪಿಕೊಂಡು ಸಂಸದರ ಹೆಸರಿನಲ್ಲಿ ಸಂದಾಯವಾಗುತ್ತಿದ್ದ ವೇತನವನ್ನು ಪ್ರಥಮ ದರ್ಜೆ ಗುಮಾಸ್ತನಿಗೆ ದೊರೆಯಬಹುದಾದಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ. ೨೦೦೫ರಿಂದ ಇಲ್ಲಿಯವರೆಗೆ ತಮ್ಮ ವೇತನ ಹೆಚ್ಚಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿಲ್ಲ. ಆದ್ದರಿಂದ ಇಂಥ ಆರ್ಥಿಕ ಹಿಂಜರಿತದಲ್ಲೂ ಆ ದೇಶ ತನ್ನ ಶಕ್ತಿಯನ್ನು ಕಾಯ್ದುಕೊಂಡು ನಿಂತಿದೆ. ಅತೀ ಹಿಂದುಳಿದ ದೇಶ ಎನ್ನುವ ಹಣೆಪಟ್ಟಿ ಕಳಚಿಕೊಳ್ಳುತ್ತಿದೆ. ಇಂಥ ಕ್ರಮಗಳು ಈಗ ಭಾರತಕ್ಕೂ ಅನಿವಾರ್ಯವಾಗಿವೆ. ನಮ್ಮ ನಾಯಕರುಗಳಲ್ಲಿ ತುಂಬಿ ತುಳುಕುತ್ತಿರುವ ಸ್ವಾರ್ಥ ಈ ರೀತಿಯ ಕ್ರಮಗಳಿಗೆ ಮುಂದಾಗಲು ಬಿಡುತ್ತಿಲ್ಲ.
ನಾಯಕರಾದವರಿಗೆ ಮೊದಲು ದೇಶ ಮತ್ತು ಅದರ ಸುಂದರ ಭವಿಷ್ಯ ಕಾಣಬೇಕು. ನಮ್ಮಲ್ಲಿ ಹಾಗಾಗುತ್ತಿಲ್ಲ ಸ್ವಾರ್ಥ, ಮಕ್ಕಳು, ಮೊಮ್ಮಕ್ಕಳು ಮತ್ತು ಮುಂದಿನ ಹತ್ತು ತಲೆಮಾರುಗಳು ಕಾಣುತ್ತಿವೆ. ಇದರಿಂದ ನಿಸ್ವಾರ್ಥ ಸೇವೆ ಎನ್ನುವುದು ವೇದಿಕೆಯ ಭಾಷಣಗಳಿಗೆ ಸೀಮಿತವಾಗುತ್ತಿದೆ. ಆದ್ದರಿಂದ ವೆಚ್ಚ ಕಡಿತ ಎನ್ನುವ ಗಂಭೀರ ವಿಚಾರ ಕೂಡ ನಗೆಪಾಟಲಿಗೆ ಒಳಗಾಗುತ್ತಿದೆ. ಎಚ್ಚಕ್ಕೆ ಕಡಿವಾಣ ಎನ್ನುವುದು ಸಾರ್ವಜನಿಕರಲ್ಲಿ ಭ್ರಮೆ ತುಂಬುವ ಪ್ರಯತ್ನವಾಗದೆ ವಾಸ್ತವಕ್ಕಿಳಿಯಬೇಕು. ದುಂದುವೆಚ್ಚ ನಿಲ್ಲಲು ರಾಜಕೀಯನಾಯಕರು ಈಗ ಪಡೆಯುತ್ತಿರುವ ವೇತನವನ್ನು ಶೇಕಡಾ ೫೦ರಷ್ಟು ಕಡಿಮೆ ಮಾಡಿಕೊಳ್ಳಲಿ.

Monday, October 12, 2009

ನೀರಲ್ಲೇ ನಿಲ್ಲಲಾಗದ ಸ್ಥಿತಿಯಲ್ಲಿ...

‘ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’ ಎಂಬ ಗಾದೆ ಮಾತೊಂದಿದೆ. ಬಹುಶಃ ಆಧುನಿಕ ಜಗತ್ತು ಕೆಲವು ಸಂದರ್ಭಗಳಲ್ಲಿ ಈ ಮಾತನ್ನು ಸುಳ್ಳುಮಾಡಿದೆ ಎನ್ನುವುದು ನನ್ನ ಅಭಿಪ್ರಾಯ. ಕಾರಣ, ‘ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ’ ಎನ್ನುವ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ ಆದರೆ ಈ ಮಾತು ಈಗ ಸುಳ್ಳಾಗಿದೆ ಎನಿಸತೊಡಗಿದೆ. ಇದನ್ನು ಕೆಲವರು ಒಪ್ಪಬಹುದು ಒಪ್ಪದೆಯೂ ಇರಬಹುದು. ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ ಎಂದು ಕೇಳಿದರೆ ಈಗ ಹೌದು ಎನ್ನುವ ಕಾಲ ಬಂದಿದೆ. ಜಾಗತೀಕರಣದ ಒಂದು ಭಾಗವಾದ ಖಾಸಗೀಕರಣ. ಇದರಿಂದ ಹರಿಯುವ ನೀರು, ಬೀಸುವಗಾಳಿ, ನಿಂತ ನೆಲ, ನಮ್ಮ ದೇಶಿ ಸಂಸ್ಕೃತಿ ಎಲ್ಲವೂ ವ್ಯಾಪಾರದ ಸರಕುಗಳಾಗಿವೆ. ಒಟ್ಟು ಭೂ ಮಂಡಲದ ಎರಡನೇ ಮೂರು ಭಾಗ ಸಾಗರದಿಂದ ಆವೃತವಾಗಿದೆ (ಶೇ. ೭೧ ಭಾಗ) ಆದರೂ ಸಾಗರದ ತಾಪಮಾನ ಶೇ. ೫೦ ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನೀರೇ ಆವರಿಸಿದ್ದರೂ ಇಡೀ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ ಇದೇ ಮನುಷ್ಯ ಮತ್ತು ಪ್ರಕೃತಿಯ ನಡುವೆ ಏರ್ಪಟ್ಟಿರುವ ಸಂಬಂಧ ಮತ್ತು ಸಂಘರ್ಷದ ಕೊಂಡಿ.
ಆಹಾರವಿಲ್ಲದೆ ಮನುಷ್ಯ ಬದುಕಲಾರ ಎಂದು ನಾವು ಹೇಗೆ ಸರಳವಾಗಿ ಹೇಳಿ ಬಿಡುತ್ತೇವೆಯೋ ಹಾಗೆಯೇ ನೀರು, ಗಾಳಿ ಇಲ್ಲದೆಯೂ ಬದುಕಲಾರ. ಆದರೂ ನಾವು ನಿಂತ ನೆಲವನ್ನು, ಕುಡಿಯುವ ನೀರನ್ನು ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸಿದ್ದೇವೆ ಅದನ್ನು ಶುದ್ಧಗೊಳಿಸಲು ಈಗ ಹರಸಾಹಸ ಮಾಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ಈಗ ನದಿ ಜೋಡಣೆಯಂಥ ಭಾರೀ ವೆಚ್ಚದ ಯೋಜನೆಗೆ ಚರ್ಚೆ ನಡೆಯುತ್ತಿವೆ. ನದಿಯ ದಿಕ್ಕುಗಳನ್ನೇ ಬದಲಿಸುವ, ಅದರಿಂದ ಎಲ್ಲರಿಗೂ ನೀರು ನೀಡುವ ಇದು ಈಗ ಬೇಕು ಬೇಡಗಳ ವಿಷಯವಾಗಿದೆ.
ಜನಸಂಖ್ಯೆ ಬೆಳವಣಿಗೆಯಿಂದ ನೀರು ಮತ್ತು ಆಹಾರಕ್ಕಾಗಿ ನದಿ ಜೋಡಣೆ ಅನಿವಾರ್ಯವೆಂದು ಹೇಳಲಾಗುತ್ತದೆಯಾದರೂ ಈ ಕ್ರಮದಿಂದ ನದಿ ಪಾತ್ರಗಳೇ ಬತ್ತಿಹೋಗುವ ಅಪಾಯವನ್ನೂ ಪರಿಗಣಿಸಬೇಕು. ಪ್ರಕೃತಿ ಸಂಪತ್ತು ಮುಗಿದು ಹೋಗದಂತೆ ಕಾಯ್ದುಕೊಂಡರೆ ಮುಂದಿನ ತಲೆಮಾರು ಉಸಿರಾಡುತ್ತದೆ ಇಲ್ಲವಾದರೆ ಭವಿಷ್ಯ ಭಯಾನಕವಾಗುತ್ತದೆ ಎಂಬ ಎಚ್ಚರ ಅತ್ಯಗತ್ಯ. ಪ್ರಕೃತಿ ಮನುಷ್ಯನ ಆಸೆಗಳನ್ನು ತೀರಿಸುವಷ್ಟು ಶಕ್ತವಾಗಿದೆಯೇ ಹೊರತು ದುರಾಸೆಗಳನ್ನಲ್ಲ ಆದ್ದರಿಂದ ನದಿ ಜೋಡಣೆ ಕ್ರಮ ಎನ್ನುವುದು ದುರಾಶೆಯ ಫಲದಂತೆ ಗೋಚರಿಸುತ್ತಿದೆ. ವಿಜ್ಞಾನಿಗಳು, ಪರಿಸರವಾದಿಗಳು, ತಂತ್ರಜ್ಞರು ಈ ಯೋಜನೆಯನ್ನು ತೀವ್ರವಾಗಿ ವಿರೋಸುತ್ತಲೇ ಬಂದಿದ್ದಾರೆ.
ಅಲ್ಲಲ್ಲಿ ಡ್ಯಾಂಗಳನ್ನು ನಿರ್ಮಿಸಿದ್ದರಿಂದ ಕೆಲವು ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅರಣ್ಯ ಮುಳುಗಡೆಯೇ ಇದಕ್ಕೆ ಮುಖ್ಯ ಕಾರಣ ಎಂದು ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೂ ಅಣೆಕಟ್ಟು ಕಟ್ಟುವ ಯೋಜನೆಗಳು ನಡೆಯುತ್ತಲೇ ಇವೆ. ಮಳೆಗಾಲದಲ್ಲಿ ಉತ್ತರ ಭಾರತದ ಕೆಲವು ನದಿಗಳಲ್ಲಿ ಪ್ರವಾಹ ಬಂದು ಅನೇಕ ನಗರಗಳಿಗೆ ನೀರು ನುಗ್ಗಿ ಪ್ರಾಣ, ಆಸ್ತಿ ಹನಿ ಸಂಬವಿಸುತ್ತಿದೆ ಆದ್ದರಿಂದ ಅವುಗಳನ್ನೆಲ್ಲ ಜೋಡಿಸಿದರೆ ದಕ್ಷಿಣ ಭಾಗದ ಒಣ ಭೂಮಿ ಹಸಿರಾಗುತ್ತಿದೆ ಎಂದರೂ ಹೇಳಿದಷ್ಟು ಸುಲಭವಾಗಿಲ್ಲ ಈ ಕಾರ್ಯ.
ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜ್ಯ ಸ್ಥಾನವಿದೆ. ಅವು ನಮಗೆ ನೀರೊದಗಿಸುವ ಕಾಲುವೆಗಳು ಮಾತ್ರವಲ್ಲ, ಅಥವಾ ಮಳೆನೀರನ್ನು ಸಂಗ್ರಹಿಸಿ ಸಮುದ್ರಕ್ಕೆ ತಲುಪಿಸುವ ಯಂತ್ರಗಳೂ ಅಲ್ಲ. ನದಿಗಳು ನಮ್ಮ ನಾಗರಿಕತೆಯ ತೊಟ್ಟಿಲುಗಳು. ಚರಿತ್ರೆ ಪುರಾಣಗಳನ್ನು ತೆಗೆದುನೋಡಿದರೆ ಸಿಂದೂ ನಾಗರಿಕತೆಯಿಂದ ಇಲ್ಲಿಯವರೆಗೆ ಬೆಳೆದುಬಂದ ಎಲ್ಲ ನಾಗರಿಕತೆಯ ಚರಿತ್ರೆಯೂ ನದಿಗಳ ದಡದಲ್ಲೇ ತೆರೆದುಕೊಳ್ಳುತ್ತದೆ. ಆದ್ದರಿಂದ ಈ ನದಿಗಳ ದಿಕ್ಕು ಬದಲಿಸುವುದು ಎಂದರೆ ನಾಗರಿಕತೆಯ ದಿಕ್ಕು ಬದಲಿಸುವುದು ಎಂದೇ ಭಾವಿಸಬೇಕು. ನದಿ ಜೋಡಣೆಯಿಂದಾಗುವ ಲಾಭದ ಬಗ್ಗೆ ಮಾತ್ರ ಸರ್ಕಾರಗಳು ಜನರಿಗೆ ತಿಳಿಸುತ್ತವೆ ಆದರೆ ಅದರಿಂದಾಗುವ ಅಪಾಯಗಳನ್ನು ಕುರಿತು ಉಸಿರೆತ್ತುತ್ತಿಲ್ಲ. ಯಾವುದೇ ಬೃಹತ್ ಯೋಜನೆಗಳಿಂದಲೂ ಅನ್ಯಾಯಕ್ಕೊಳಗಾಗುವವರು ಜನಸಾಮಾನ್ಯರೆ ಆದ್ದರಿಂದ ಸರ್ಕಾರ ಇಂಥ ವಿಚಾರಗಳಲ್ಲೂ ತಪ್ಪು ಮಾಹಿತಿ ಅಥವಾ ಅರ್ಧಮಾಹಿತಿ ನೀಡುವಂಥ ನೀಚ ಕೃತ್ಯಕ್ಕೆ ಮುಂದಾದ ನೂರಾರು ಉದಾಹರಣೆಗಳಿವೆ.
ಮಾಹಿತಿ ಮುಚ್ಚಿಡುವ ಸರ್ಕಾರಗಳು:
ಹಿರಾಕುಡ್ ಅಣೆಕಟ್ಟು ನಿರ್ಮಿಸಿದಾಗ ಸರ್ಕಾರದ ದಾಖಲೆಗಳಲ್ಲಿ ನಮೂದಾದ ನಿರಾಶ್ರಿತರ ಸಂಖ್ಯೆ ೧.೧ ಲಕ್ಷ. ವಾಸ್ತವದಲ್ಲಿ ಸ್ಥಳಾಂತರಗೊಂಡವರು ೧.೮ ಲಕ್ಷ ಜನ. ಅಂದರೆ ೭೦ ಸಾವಿರ ಜನರ ಬಗ್ಗೆ ಸರ್ಕಾರ ಸುಳ್ಳು ಮಾಹಿತಿ ನೀಡಿತ್ತು. ಪಶ್ಚಿಮ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಬಾರ್ಗಿ ಜಲಾಶಯದ ಜಾಗದಲ್ಲಿ ಮುಳುಗಡೆಯಾದ ಹಳ್ಳಿಗಳ ಸಂಖ್ಯೆ ೧೬೨ ಆದರೆ ಸರ್ಕಾರ ಹೇಳಿದ್ದು ಕೇವಲ ೧೦೦. ಇಲ್ಲಿ ೬೨ ಹಳ್ಳಿಗಳನ್ನು ಸರಕಾರದ ದಾಖಲೆಗಳು ನುಂಗಿ ಹಾಕಿದ್ದವು. ಇವು ಮೇಲ್ನೋಟಕ್ಕೆ ಸಿಗುವ ಅಂಕಿ ಅಂಶಗಳು ಹಳ್ಳಿಗಳ ಜನ- ಜಾನುವಾರು ವಸತಿಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಮುಳುಗಿ ಹೋಗುವ ಅರಣ್ಯ,ಫಲವತ್ತಾದ ಕೃಷಿ ಭೂಮಿ. ಬೆಳೆ ಇಲ್ಲದೆ ದೇಶದ ಆಹಾರ ಭದ್ರತೆಮೇಲೆ ಬೀರಿದ ಪರಿಣಾಮ ಮುಂತಾದವುಗಳು ಇಲ್ಲಿ ಚರ್ಚಿತ ವಿಷಯವೇ ಆಗುವುದಿಲ್ಲ. ೧೯೮೦ ರಲ್ಲಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟೆ ಕಟ್ಟಲು ಯೋಜನೆ ರೂಪಿಸಲಾಯಿತು. ಇದರಿಂದ ೫೦ ಲಕ್ಷ ಎಕರೆ ಭೂಮಿಗೆ ನೀರು, ೧೪೫೦ ಮೆಗಾ ವ್ಯಾಟ್ ವಿದ್ಯುತ್, ೮೦೦ ಹಳ್ಳಿ ಮತ್ತು ೧೩೫ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶ ಸರಕಾರದ್ದು. ಇದು ೯೧, ಸಾವಿರ ಎಕರೆ ಕೃಷಿ ಭೂಮಿಯನ್ನು ಮುಳುಗಿಸಿತು ಜತೆಗೆ ೨೮,೦೦೦ ಎಕರೆ ಕಾಡನ್ನೂ ನುಂಗಿತು. ಇದರಿಂದ ಒಂದು ಮಿಲಿಯನ್ ಜನರು ಅನಿವಾರ್ಯವಾಗಿ ಸ್ಥಳಾಂತರಗೊಳ್ಳುತ್ತಾರೆ. ಮಧ್ಯ ಪ್ರದೇಶದ ಪೂರ್ವ ನಿಮಾರ್‌ನಲ್ಲಿ ಇದೇ ನದಿಗೆ ‘ನರ್ಮದಾ ಸಾಗರ್’ ಅಣೆಕಟ್ಟು ನಿರ್ಮಿಸಲಾಗುತ್ತಿದೆ ಇದರಿಂದಲೂ ಕೂಡ ೨೪೯ ಹಳ್ಳಿಗಳನ್ನು ಮುಳುಗಿಸಿ ೪೦ ಸಾವಿರ ಕುಟುಂಬಗಳನ್ನು ಹೊರಹಾಕುತ್ತದೆ ಇವೆಲ್ಲವನ್ನೂ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವವರು ಅದರ ಸಾಧಕ ಬಾಧಕಗಳನ್ನು ಕುರಿತು ಗಂಭೀರ ಚರ್ಚೆ ಮಾಡಬೇಕು. ಹಳ್ಳಿಗಳ ಪಲ್ಲಟ ಎಂದರೆ ಒಂದು ಭಾವನಾತ್ಮಕ ಬದುಕಿನ ಪಲ್ಲಟ, ಪರಂಪರೆಯ ಪಲ್ಲಟ. ಇಂಥ ಸಂದರ್ಭಗಳಲ್ಲಿ ನಮ್ಮ ಪುನರ್ವಸತಿ ನೀತಿಯನ್ನು ಸರಿಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸರಕಾರ ವಸತಿ ಕಿತ್ತುಕೊಂಡು ಬಡವರನ್ನು ಬಯಲಿನಲ್ಲಿ ನಿಲ್ಲಿಸಿದಂತಾಗುತ್ತದೆ.
ಇವೆಲ್ಲವುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಕ್ಕೆ ಕಾರಣ ಅಣೆಕಟ್ಟುಗಳನ್ನು ನಿರ್ಮಿಸುವಾಗಲೇ ಇಷ್ಟೊಂದು ಅವಘಡಗಳು ಸಂಭವಿಸುತ್ತವೆ. ಅಂದರೆ ನದಿ ಜೋಡಣೆಯಂಥ ಭಾರೀ ಯೋಜನೆಗಳನ್ನು ಸರಕಾರಗಳು ಕೈಗೆತ್ತಿಕೊಂಡರೆ ನಡೆಯುವ ಜನಪಲ್ಲಟಗಳು ಹೇಗಿರುತ್ತವೆ ಎಂಬುದನ್ನು ಊಹಿಸಲೂ ಅಸಾಧ್ಯ. ಅದೂ ಅಲ್ಲದೆ ಭಾರತದಂಥ ಬಡವರಿಂದ ತುಂಬಿರುವ ದೇಶದಲ್ಲಿ ಈಗಾಗಲೇ ವಸತಿ ಸಮಸ್ಯೆ ಕಾಡುತ್ತಿದೆ. ಕೈಗಾರಿಕೆಯಿಂದ ಸ್ಥಳಾಂತರಗೊಳ್ಳುತ್ತಿರುವ ಜನರಿಗೇ ಪುನರ್‌ವಸತಿ ಕಲ್ಪಿಸಲಾಗದೇ ಘರ್ಷಣೆಗಳು ನಡೆದಿವೆ ಅಂದರೆ ನದಿಜೋಡಣೆಯಿಂದಾಗುವ ಅಲ್ಲೋಲ ಕಲ್ಲೋಲಗಳನ್ನು ಗಂಭೀರವಾಗಿ ಯೋಚಿಸಬೇಕಾಗಿದೆ.
ಆರ್ಥಿಕ ಸವಾಲುಗಳು:
೨೦೦೨ರಲ್ಲಿ ಈ ನದಿ ಜೋಡಣೆ ಯೋಜನೆಗೆ ೫,೬೦,೦೦೦ ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿತ್ತು. ಅಂದರೆ ೧೧೨ ಶತಕೋಟಿ ಅಮೆರಿಕನ್ ಡಾಲರ್‌ಗಳು. ಸಾಮಾನ್ಯವಾಗಿ ನಮ್ಮ ಯೋಜನೆಗಳು ಯಾವಾಗಲೂ ಮೊದಲ ಅಂದಾಜಿನ ಹಣದಲ್ಲಿ ಮುಗಿಯುವುದಿಲ್ಲ, ಹಾಗೆ ಮುಗಿದ ಉದಾಹರಣೆಗಳೂ ಇಲ್ಲ. ಅದು ಮುಗಿಯುವ ಹೊತ್ತಿಗೆ ೨೦೦ ಶತಕೋಟಿ ಡಾಲರ್‌ಗಳಾಗಬಹುದು ಅಥವಾ ಅದನ್ನೂ ದಾಟಬಹುದು ಎಂದು ಹೇಳಲಾಗಿತ್ತು. ಈ ಯೋಜನೆಯ ವೆಚ್ಚದ ಅಂದಾಜುಪಟ್ಟಿ ತಯಾರಿಸಿ ಎಂಟು ವರ್ಷಗಳು ಮುಗಿಯುತ್ತ ಬಂದಿದ್ದರಿಂದ ಅದರ ವೆಚ್ಚ ೪೦೦ ಶತಕೋಟಿ ಡಾಲರ್ ತಲುಪಬಹುದು ಎನ್ನಲಾಗುತ್ತಿದೆ. ಇದು ಅಕ್ಷರಸ್ಥರೆನಿಸಿಕೊಂಡವರು ಮಾತ್ರವಲ್ಲ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೆನಿಸಿಕೊಂಡವರೂ ಅಂಕಿಯಲ್ಲಿ ಬರೆದು ತೋರಿಸಲು ಹೆಣಗಬಹುದು. ಯೋಜನೆ ಮುಗಿಯುವ ಹೊತ್ತಿಗೆ.....?! ಒಂದುಕಡೆ ಏರುತ್ತಿರುವ ಜನಸಂಖ್ಯೆಗೆ ಆಹಾರ ವೊದಗಿಸುವುದೇ ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ದೇಶಾದ್ಯಂತ ನೂರಾರು ಯೋಜನೆಗಳು ಅರ್ಥಕ್ಕೇ ನಿಂತಿವೆ. ಇದರ ನಡುವೆ ಅತೀವೃಷ್ಟಿ, ಅನಾವೃಷ್ಟಿ ಮತ್ತಿತರ ಪ್ರಕೃತಿ ವಿಕೋಪಗಳು ದೇಶವನ್ನು ಕಾಡುತ್ತಿರುವಾಗ ನದಿ ಜೋಡಣೆಯಂಥ ಭಾರೀ ಬಂಡವಾಳ ಹೂಡುವ ಯೋಜನೆಗಳನ್ನು ಕೈಗೆತ್ತಿಕೊಂಡರೆ ಪೂರ್ಣಗೊಳಿಸುವ ಶಕ್ತಿ ಭಾರತಕ್ಕಿದೆಯೇ ಎನ್ನುವಂಥ ಪ್ರಶ್ನೆಗಳು ಎದುರಾಗುತ್ತವೆ. ಇಂಥ ಯೋಜನೆಗಳಿಗೆ ವಿಶ್ವಬ್ಯಾಂಕಿನಿಂದ ಸಾಲ ತರಲು ಸರಕಾರ ಮುಂದಾದರೂ ಅದರ ವಾರ್ಷಿಕ ಬಡ್ಡಿಯನ್ನು ಗಮನಿಸಿದರೆ ನಿಜಕ್ಕೂ ದೇಶವನ್ನೇ ವಿಶ್ವಬ್ಯಾಂಕಿಗೆ ಅಡವಿಡುವ ಅನುಭವವಾಗುತ್ತದೆ. ಅಂದರೆ ಅದರ ವಾರ್ಷಕ ಬಡ್ಡಿ ಸರಿಸುಮಾರು ೭೫ ಸಾವಿರ ಕೋಟಿ ರೂಪಾಯಿಗಳು!
ಈಗಾಗಲೇ ಅಸಮಾನತೆಗಳ ಬೇಗೆಯಲ್ಲಿ ಬೇಯುತ್ತಿರುವ ಭಾರತಕ್ಕೆ ಇದು ಸಣ್ಣ ಪ್ರಮಾಣದ ಹಣವಲ್ಲ. ಇದನ್ನು ಭರಿಸಲು ಮತ್ತೆ ಯಾವ್ಯಾವುದೋ ದಾರಿಗಳಲ್ಲಿ ತೆರಿಗೆ ಸಂಗ್ರಹಿಸಬೇಕಾಗಬಹುದು. ಇಷ್ಟು ವೆಚ್ಚಮಾಡಿ ಮಾಡಲಾಗುವ ಯೋಜನೆಯಿಂದ ಒದಗುವ ನೀರು ಹಾಗೂ ಶಕ್ತಿಯನ್ನು ರೈತರಿಗೆ ಹಾಗೂ ಉದ್ಯಮಿಗಳಿಗೆ ನಿಲುಕದ ಬೆಲೆಯಲ್ಲಿ ಕೊಡಬೇಕಾಗುತ್ತದೆ. ನಾನು ಮೊದಲೇ ಹೇಳಿದಂತೆ ‘ನೀರಿನ ವ್ಯಾಪಾರೀಕರಣ’ ಅದು ಇಂಥ ಸಂದರ್ಭಗಳಲ್ಲಿ ಕೈಗೂಡುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ದೇಶದ ಜನತಂತ್ರಕ್ಕೆ, ಸಮಗ್ರತೆಗೆ ಪೆಟ್ಟು ಬೀಳುತ್ತದೆ. ನೀರು ಸರಬರಾಜಿಗೆ (ಮಾರಾಟಕ್ಕೆ) ಸರಕಾರ ವ್ಯವಸ್ಥೆ ಮಾಡಲಾಗದೆ ಖಾಸಗಿ ದಲ್ಲಾಳಿಗಳಿಗೆ ವಹಿಸಬೇಕಾಗುತ್ತದೆ. ಆಗ ಸಾಮಾಜಿಕ ಘರ್ಷಣೆಗಳು, ದಬ್ಬಾಳಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳು ವಿಶ್ವವಿದ್ಯಾಲಯಗಳಲ್ಲಿ ಲಾಬಿ ನಡೆಸಿ ನೀರನ್ನು ‘ಮಾನವ ಹಕ್ಕು’ ಎಂದಿದ್ದುದನ್ನು ‘ಮಾನವ ಅಗತ್ಯ’ ಎಂದು ಬದಲಾಯಿಸಿವೆ. ಅಂದರೆ ಅಗತ್ಯ ವಸ್ತುಗಳ ಸಾಲಿನಲ್ಲಿ ನಿಲ್ಲಿಸುವುದರ ಹಿಂದಿನ ಉದ್ದೇಶವೇ ಮಾರಾಟ! ಅಗತ್ಯ ವಸ್ತುಗಳ ಸಾಲಿನಲ್ಲಿರುವುದು ಮನುಷ್ಯ ಖರೀದಿಸಲೇಬಾಕಾಗುತ್ತದೆ ಎಂಬ ಸೂಕ್ಷ್ಮ ಒತ್ತಾಯ ಇದು. ಇದೇ ಖಾಸಗೀಕರಣದ ಮಜಲು.
ಹೆಚ್ಚುತ್ತಿರುವ ತಾಪಮಾನ:
‘ಮಳೆಗಾಲದಲ್ಲಿ ಅನೇಕ ನದಿಗಳು ತುಂಬಿ ಹರಿದು ಲಕ್ಷಾಂತರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ’ ಎಂದು ಇದನ್ನು ಒಪ್ಪಿಕೊಳ್ಳುವವರ ವಾದ. ಇವೇ ನಿಜವಾದ ಪರಿಸರ ವಿರೋ ಆಲೋಚನೆಗಳು. ಸಮದ್ರಕ್ಕೂ ಮತ್ತು ನದಿಗಳಿಗೂ ಒಂದು ಜೈವಿಕ ಸಂಬಂಧವಿದೆ. ನದಿಗಳ ಸಿಹಿ ನೀರು ಹರಿದರೂ ಸಮುದ್ರದಲ್ಲಿ ಉಪ್ಪಾಗುತ್ತದೆ. ಆದರೆ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಉಪ್ಪು ನೀರಿರುವುದರಿಂದ ಅಲ್ಪ ಪ್ರಮಾಣದ ಸಿಹಿ ನೀರು ಸೇರಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು. ಆದರೆ ಸಿಹಿ ನೀರು ಸೇರದೇ ಹೋದರೆ ಎಂಥ ಪರಿಣಾಮ ವಾಗಬಹುದು ಎಂಬ ಬಗ್ಗೆಯೂ ಎಚ್ಚರ ಅಗತ್ಯ. ನದಿಗಳು ಹರಿಯುವುದರಿಂದ ಭೂಮಿಯಲ್ಲಿನ ಖನಿಜಾಂಶ ಸಾಗರಕ್ಕೆ ಸೇರುತ್ತದೆ. ಸಾಗರ ಗರ್ಭದ ಜೀವಿಗಳ ಆಹಾರಕ್ಕೆ ಇದೇ ಮೂಲ. ಇದನ್ನೆ ತಡೆದರೆ ಸಮುದ್ರದ ಜೀವಿಗಳಿಗೆ ಆಹಾರದ ಕ್ಷಾಮ ತಲೆದೂರಬಹುದು. ಜೀವಕೋಶಗಳ ಉಗಮವಾಗಿರುವುದೇ ಸಾಗರದ ಗರ್ಭದಿಂದ ಎನ್ನುವುದನ್ನು ನಾವು ಮರೆಯಬಾರದು. ಸಾಗರದಲ್ಲಿರುವ ಸಣ್ಣ ಸಣ್ಣ ಜೀವಿಗಳು ಬಹಳ ಮುಖ್ಯ. ಅವು ಕ್ಯಾಲ್ಸಿಯಂ ಕಾರ್ಬೋನೇಟನ್ನು ಉತ್ಪಾದಿಸಿ ಇಂಗಾಲಾಮ್ಲವನ್ನು ಹೀರಿಕೊಳ್ಳುತ್ತವೆ. ಸಾಗರ ಅನೇಕ ಸಣ್ಣ ಸಣ್ಣ ಜೀವಿಗಳಿಂದ ತುಂಬಿದೆ. ಜೀವವಿಕಾಸವನ್ನು ಗಮನಿಸಿದರೆ ಸಾಗರದ ಸಸ್ಯಗಳು, ಜೀವಿಗಳು ತೀರಾ ಹಳೆಯವು. ಹೀಗಾಗಿ ಅವುಗಳಿಗೆ ಪ್ರಾಮುಖ್ಯತೆ ಹೆಚ್ಚು. ಸಾಗರದ ಜೀವಿಗಳ ಆಹಾರ ಸರಪಳಿಯನ್ನೇ ತುಂಡಾಗಿಸಿದರೆ ಮುಂದೊಂದು ದಿನ ಬತ್ತಿದ ಸಾಗರವನ್ನು ನೋಡಬೇಕಾಗುತ್ತದೆ.
ಮಳೆಯ ಪ್ರಮಾಣ ಕಡಿಮೆ ಮತ್ತು ಭೂಮಿಯ ಮೇಲೆ ಬಿಸಿ ಹವೆ ಹೆಚ್ಚುತ್ತಿದ್ದು, ಇಂಗಾಲದಿಂದ ಜಗತ್ತು ಕಲುಷಿತಗೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಅದರ ನಿಯಂತ್ರಣಕ್ಕೆ ತುರ್ತು ಕ್ರಮ ಅನಿವಾರ್ಯ. ೨೦೧೨ರ ಹೊತ್ತಿಗೆ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ರೂಪಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಸೂಚನೆ ನೀಡಲಾಗುತ್ತಿದೆ. ಇದಕ್ಕಾಗಿ ಭೂಮಿಗೆ ನೀರಿಂಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಮೆರಿಕದಂಥ ಶ್ರೀಮಂತ ದೇಶಗಳು ೨೦೦೫ರವರೆಗೂ ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಅಭಿವೃದ್ಧಿಶೀಲ ದೇಶಗಳು ಕೂಡ ಇದನ್ನು ನಿರ್ಲಕ್ಷಿಸುತ್ತಲೇ ಬಂದದ್ದು ಪರಿಸ್ಥಿತಿ ಇಷ್ಟೊಂದು ಜಟಿಲವಾಗಿದೆ. ಇವೆಲ್ಲವನ್ನು ಗಮನಿಸಿದರೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲ ಎನ್ನುವಂತಾಗಿದೆ.
ನಮ್ಮ ನದಿಗಳು ಬರೀ ಪ್ರವಾಹ ಪ್ರೀಡಿತಮಾತ್ರವಾಗಿಲ್ಲ ಸಾಕಷ್ಟು ಮಲೀನವೂ ಆಗಿವೆ. ಈ ಜೋಡಣೆ ಎಂದರೆ ರಾಷ್ಟ್ರದಾದ್ಯಂತ ಮಾಲಿನ್ಯದ ಜೋಡಣೆಯೇ ಆಗಬಹುದು. ಗಂಗಾನದಿಯ ಅಪಾರ ಪ್ರಮಾಣದ ಮಲೀನ ನೀರು ಕಾವೇರಿ ಅಥವಾ ತುಂಗಭದ್ರಾ ಸೇರಿದರೆ ಅದು ಹರಿಯುವ ಊರುಗಳಲ್ಲೆಲ್ಲಾ ಸಾಂಕ್ರಾಮಿಕ ರೋಗಗಳು ಹರಡಬಹುದು. ಇಂಥ ಕ್ರಮಗಳಿಂದ ರೋಗ ರುಜಿನಗಳು ಮತ್ತಷ್ಟು ಹೆಚ್ಚಿದರೆ ದೇಶವೇ ಆಸ್ಪತ್ರೆಯಾಗುವ ಸಾಧ್ಯತೆಗಳನ್ನೂ ಗಮನಿಸಬೇಕು. ಆದ್ದರಿಂದ ಎರಡು ಅಥವಾ ಮೂರು ಸಣ್ಣ ನದಿಗಳನ್ನು ಪ್ರಾಯೋಗಿಕವಾಗಿ ಜೋಡಿಸಿ ಅದರ ಎಡಬಲಗಳನ್ನು ಪರೀಕ್ಷೆ ಮಾಡಬೇಕು ಅದರ ಫಲಿತಾಂಶದ ಮೇಲೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕು. ಕಾರಣವಿಷ್ಟೆ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಯೋಜನೆಗಳನ್ನು ಯಾವ ರಾಷ್ಟ್ರವೂ ರೂಪಿಸಿಲ್ಲ ಮತ್ತು ಯಶಸ್ವಿಯೂ ಆಗಿಲ್ಲವಾದ್ದರಿಂದ ಬಡ ಭಾರತದ ಮೇಲೆ ಇದನ್ನು ಒತ್ತಾಯ ಪೂರ್ವಕವಾಗಿ ಹೇರುವುದು ಸಲ್ಲ.
ಪರ್ಯಾಯ ಚಿಂತನೆ:
ಜೈವಿಕ ಕೊಂಡಿಯನ್ನು ಜೋಡಿಸುವ ಹುಚ್ಚು ಸಾಹಸಕ್ಕೆ ಮನುಷ್ಯ ಕೈ ಹಾಕಬಾರದು. ಹಕ್ಕಿ, ಹಾವು, ಸಿಂಹ ಎಲ್ಲ ಪ್ರಾಣಿಗಳೂ ತಮ್ಮ ಆಹಾರವನ್ನು ತಾವೇ ಬೇಟಿಯಾಡಿಕೊಳ್ಳುತ್ತವೆ ಅದನ್ನು ಬಿಟ್ಟು ನಾವು ಅವುಗಳಿಗೆ ಆಹಾರ ನೀಡತೊಡಗಿದರೆ ಅವುಗಳಲ್ಲಿ ಬೇಟೆಯಾಡುವ, ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಮವೇ ಮರೆತು ಹೋಗಬಹುದು. ಹಾಗೆಯೇ ನದಿ ಜೋಡಣೆಯೂ ಕೂಡ. ಅಕಸ್ಮಾತ್ ನದಿಗಳು ಜೋಡಣೆಯಾಗಬೇಕೆಂದಿದ್ದರೆ ಅವೇ ನೈಸರ್ಗಿಕವಾಗಿ ಆಗುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಎರಡು ಪ್ರಮುಖ ನದಿಗಳಾದ ತುಂಗ-ಭದ್ರಾ ಶಿವಮೊಗ್ಗ ಬಳಿ ಕೂಡ್ಲಿಯಲ್ಲಿ ಒಂದಾಗಿ ಮುಂದೆ ಸಾಗಿಲ್ಲವೇ? ಹಾಗೆಯೇ ಇದೇರೀತಿ ಅರ್ಕಾವತಿ ನದಿ ಕಾವೇರಿ ಸೇರುವುದಿಲ್ಲವೆ? ಅನೇಕ ನದಿಗಳು ತಾವೇ ಜೋಡಿಯಾಗಿ ಹರಿದ ಉದಾಹರಣೆಗಳಿವೆ. ಇದೇ ಜೈವಿಕ ಕ್ರಿಯೆ. ಇದು ಮಾನವ ನಿರ್ಮಿತವಾದರೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅಗತ್ಯ. ಮಳೆ ನೀರಿನ ಕೊಯ್ಲನ್ನು ಗುಜರಾತ್ ಮೊದಲಾದ ರಾಜ್ಯಗಳು ಬಹಳ ಹಿಂದೆಯೇ ಜಾರಿಗೆ ತಂದು ಯಶಸ್ವಿಯಾಗಿವೆ. ರಾಜಸ್ತಾನದಂಥ ಮರಳುಗಾಡಿನಲ್ಲಿ ರಾಜೇಂದ್ರಸಿಂಗ್ ಅಂಥವರು ಬತ್ತಿಹೋದ ನದಿಗಳಿಗೆ ಮರು ಜೀವ ನೀಡಿ ಬಿರುಬೇಸಿಗೆಯಲ್ಲೂ ಹರಿಯುವಂತೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಸಣ್ಣ ಪ್ರಮಾಣದ ಕೆಲಸಗಳು ಕರ್ನಾಟಕದಲ್ಲೂ ನಡೆದಿವೆ ಅಂಥವುಗಳನ್ನು ಪ್ರೋತ್ಸಾಹಿಸಿ ನೀರಿನ ಸಮೃದ್ಧಿಗೆ ಪ್ರಯತ್ನಿಸಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ.
ಬಯಲು ನಾಡು ಚಿತ್ರದುರ್ಗದಲ್ಲೂ ಇಂಥ ಪ್ರಯತ್ನಗಳು ನಡೆದಿವೆ. ಕೋಲಾರದಲ್ಲಿ ಇಂಥ ಪ್ರಯತ್ನಗಳಾಗಬೇಕಿದೆ. ನೇತ್ರಾವತಿ ನೀರನ್ನು ಕೋಲಾರಕ್ಕೆ ಹರಿಸಬೇಕೆನ್ನುವ ಒತ್ತಾಯ ತಪ್ಪಲ್ಲ ಆದರೆ ಕೋಲಾರ ಜಿಲ್ಲೆಯಲ್ಲಿ ಇರುವಷ್ಟು ಕೆರೆಗಳು ಬಹುಶಃ ದೇಶದ ಯಾವುದೇ ಜಿಲ್ಲೆಯಲ್ಲಿ ಇರಲಾರವು ಆದರೆ ಅನೇಕ ಕೆರೆಗಳು ಒತ್ತುವರಿಯಾಗಿವೆ ಕೆಲವಕ್ಕೆ ನೀರು ಹರಿದುಬರುವ ಮಾರ್ಗಗಳನ್ನೇ ಒತ್ತುವರಿ ಮಾಡಲಾಗಿದೆ. ಬೆಳೆಸಿರುವ ನೀಲಗಿರಿ ನೆಡುತೋಪುಗಳು ನಮ್ಮ ಜೈವಿಕ ಅರಣ್ಯವನ್ನೇ ನಾಶಮಾಡಿವೆ. ನೀಲಗಿರಿಯಿಂದ ಅಂತರ್ಜಲ ಪೂರ್ಣ ಬತ್ತಿಹೋಗಿ ಕೆರೆಗಳು ಖಾಲಿಯಾಗಿಬೆಂಗಾಡು ಮಾತ್ರ ನಮಗೆ ಕಾಣುತ್ತಿದೆ. ನಮ್ಮ ಅಕಾರಿ ವಲಯದಲ್ಲಿ ಒಂದು ಮೂರ್ಖ ಕಲ್ಪನೆಯಿದೆ ಅದೇನೆಂದರೆ ನಿರಾವರಿ ಇಲಾಖೆಗೂ ಅರಣ್ಯ ಇಲಾಖೆಗೂ ಸಂಬಂಧವೇ ಇಲ್ಲ ಎನ್ನುವಂಥದ್ದು. ನೀರಾವರಿ ಇಲಾಖೆಯವರು ಜಲಮರುಪರಿಪೂರ್ಣದಂಥ ಯೋಜನೆಗಳನ್ನು ರೋಪಿಸುತ್ತಿದ್ದರೆ ಅರಣ್ಯ ಇಲಾಖೆಯವರು ನೀಲಗಿರಿ ನೆಳೆಯುತ್ತ ಅಂತರ್ಜಲ ನಾಶ ಮಾಡುವ ಕೆಲಸಗಳಲ್ಲಿ ಮುಂದಾಗಿದ್ದಾರೆ. ಆದ್ದರಿಂದ ಈ ಎರಡೂ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ತುಂಬಾ ಇದೆ. ನೀಲಗಿರಿ ನೆಟ್ಟು ಎರಡು ವರ್ಷಗಳಲ್ಲಿ ಅದು ಬೆಳೆದದ್ದನ್ನು ಮಂತ್ರಿಗಳಿಗೆ ತೋರಿಸಿ ಬಡ್ತಿ ಬಯಸುವ ಅರಣ್ಯ ಅಕಾರಿಗಳು ಎಲ್ಲೆಂದರಲ್ಲಿ ನೀಲಗಿರಿ, ಅಕೇಶಿಯಾದಂಥ ನೆಡುತೋಪುಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ನಮ್ಮ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ನಮ್ಮ ಪರಿಸರಕ್ಕೆ ಹೊಂದಾಣಿಕೆಯಾಗದ ನೀಲಗಿರಿ ಅಕೇಶಿಯಾದಿಂದ ನಮ್ಮ ಪಾರಂಪರಿಕ ಅರಣ್ಯ ಮತ್ತು ನೀರಿನ ಸೆಲೆಗಳು ಬತ್ತುತ್ತಿವೆ ಎಂದು ಪರಿಸರವಾದಿಗಳು ಕಳೆದ ಹತ್ತು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ ನಮ್ಮ ಅಕಾರಿಗಳು ಮತ್ತೆ ಮತ್ತೆ ಅದೇ ಸಸಿಗಳನ್ನು ನೆಡುತ್ತಲೇ ತಮ್ಮ ಮೂರ್ಖತನವನ್ನು ಒರೆಗೆಹಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ನಾವು ನಮ್ಮ ಆಡಳಿತ ಯಂತ್ರ ಇಂಥ ವಿಚಾರಗಳಲ್ಲಿ ಬದಲಾದರೆ ಮಾತ್ರ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳನ್ನು ಮತ್ತು ಶಾಶ್ವತ ಹಾದಿಗಳನ್ನು ಕಂಡುಕೊಳ್ಳಬಹುದು.
ಹಸಿರು ಕಾಣುವುದೆಲ್ಲದೂ ಅರಣ್ಯವಲ್ಲ. ಅರಣ್ಯ ಎಂದರೆ ಸಹಜ ಜೈವಿಕ ಕ್ರಿಯೆಗಳು ನಡೆದು ಸೃಷ್ಟಿಯಾಗಬೇಕು ನೀಲಗಿರಿ ಬೆಳೆಯುವುದರಿಂದ ಇಂಥ ಕ್ರಿಯೆಗಳು ನಡೆಯುವುದಿಲ್ಲ ಮತ್ತು ಅದರ ವಾಸನೆಯಿಂದ ಸಣ್ಣಪುಟ್ಟ ಹುಳುಗಳು ಸಾಯುತ್ತವೆ. ಜಾನುವಾರುಗಳು ಚರ್ಮ ರೋಗದಿಂದ ಬಳಲುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೂ ಅಕಾರಿಗಳು ನೀಲಗಿರಿ ಬೆಳೆಯಲು ವಹಿಸಿದಷ್ಟು ಆಸಕ್ತಿಯನ್ನು ಇತರ ಗಿಡನೆಡಲು ತೋರುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. ಕೆರೆಗಳಿಗೆ ನೀರು ಹರಿಸುವ ಮಾರ್ಗಗಳನ್ನು ನಿರ್ಬಂಸದೆ ಮುಕ್ತವಾಗಿ ಬಿಡಬೇಕು, ಜೈವಿಕ ಅರಣ್ಯದ ಅರಿವು ಮೂಡಿಸಬೇಕು. ಕೆರೆಗಳ ಹೂಳು ತೆಗೆಸಿ ವರ್ಷವಿಡೀ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಕೆರೆ ಬಾವಿಗಳಲ್ಲಿ ಕಲುಷಿತ ನೀರು ಶೇಕರಣೆಯಾಗದಂತೆ ಕಾಯ್ದುಕೊಳ್ಳಬೇಕು. ಕೃಷಿಗೆ ಅಗತ್ಯವಿರುವಷ್ಟು ನೀರು ಮಾತ್ರ ಬಳಸಿ ಅನಗತ್ಯ ಪೋಲಾಗದಂತೆ ನೋಡಿಕೊಳ್ಳಬೇಕು ಹಾಗಾದರೆ ಮಾತ್ರ ಲಭ್ಯವಿರುವ ನೀರಿನಲ್ಲಿ ಬದುಕು ಅದರಲ್ಲೂ ಶುದ್ದ ಬದುಕು ಕಟ್ಟಿಕೊಳ್ಳಬಹುದು.
ನೀರು ಕಲುಷಿತ:
ಈಗಾಗಲೇ ಭಾರತದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ ಇದಕ್ಕೆ ಪರಿಸರ ನೈರ್ಮಲ್ಯ ಕಾಪಾಡದಿರುವುದೇ ಕಾರಣ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ಹತ್ತರಲ್ಲಿ ಒಂದು ಕಾಯಿಲೆಗೆ ಮತ್ತು ಶೇಕಡಾ ಆರರಷ್ಟು ಸಾವು ಪ್ರಕರಣಗಳಿಗೆ ಶುದ್ಧ ಕುಡಿಯುವ ನೀರಿನ ಕೊರತೆಯೇ ಕಾರಣ ಎಂದು ೨೦೦೮ರಲ್ಲಿ ಪ್ರಪ್ರಥಮ ಬಾರಿಗೆ ಜಲಮೂಲ ಕಾಯಿಲೆಗಳ ಬಗ್ಗೆ ಅಧ್ಯಯನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿತ್ತು. ‘ಉತ್ತಮ ಆರೋಗ್ಯಕ್ಕಾಗಿ ಶುದ್ಧ ನೀರು’ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದು ಅಧ್ಯಯನ ನಡೆಸಿತ್ತು. ಭಾರತದಲ್ಲಿ ವರ್ಷಕ್ಕೆ ೧.೦೩ ಲಕ್ಷ ಜನ ಸಾಯುತ್ತಾರೆ. ಇಂಥವರಲ್ಲಿ ಶೇ. ೭.೫ರಿಂದ ೭.೮ ರಷ್ಟು ಮಂದಿ ಸಾಯಲು ಕಲುಷಿತ ನೀರೇ ಕಾರಣ ಎಂದು ವರದಿ ತಿಳಿಸಿತ್ತು. ನೀರು ಸಂಬಂತ ಕಾಯಿಲೆಗಳಾದ ಮಲೇರಿಯಾ, ಡೆಂಗೆ ಜ್ವರಕ್ಕೆ ಬಲಿಯಾದವರ ಸಂಖ್ಯೆ ೨೦೦೮ರ ಒಂದೇ ವರ್ಷದಲ್ಲಿ ಹತ್ತೊಂಬತ್ತು ಸಾವಿರ.
ಆರೋಗ್ಯ ಸಂರಕ್ಷಣೆಗಾಗಿ ಏಜೆನ್ಸಿಗಳು ಪ್ರತೀ ವರ್ಷ ಏಳು ಶತಕೋಟಿ ಡಾಲರ್ ಹಾಗೂ ವೈಯುಕ್ತಿಕವಾಗಿ ಜನರು ೩೪೦ ದಶಲಕ್ಷ ಡಾಲರ್ ಖರ್ಚು ಮಾಡುತ್ತಾರೆ. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯೆವಸ್ಥೆಯನ್ನು ಸರಿಪಡಿಸಿದಲ್ಲಿ ಅನಗತ್ಯ ಆರ್ಥಿಕ ಹೊರೆಯನ್ನು ತಗ್ಗಿಸಬಹುದು. ವಿಶ್ವದಲ್ಲಿ ಶೇ. ೮೮ ರಷ್ಟು ಜನ ಕಲುಷಿತ ನೀರು ಕುಡಿದು ಭೇದಿಗೆ ತುತ್ತಾಗುತ್ತಾರೆ. ಕಲುಷಿತ ನೀರು ಒಂದೆಡೆ ಶೇಕರಣೆಗೊಳ್ಳುವುದರಿಂದ ಷಿಸ್ಟಸಮೈಆಸಿಸ್ ಕಾಯಿಲೆ ಹರಡುತ್ತಿದ್ದು ಒಂದು ವರ್ಷದಲ್ಲಿ ಜಗತ್ತಿನಾದ್ಯಂತ ಇನ್ನೂರು ದಶಲಕ್ಷ ಜನ ಬಳಲುತ್ತಿದ್ದರೆ ಎನ್ನುವುದು ಆಘಾತಕಾರಿ ವಿಚಾರ.
ಕರ್ನಾಟಕವನ್ನೇ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರಾಜ್ಯದಲ್ಲಿ ಅಂತರ್ಜಲಮಟ್ಟ ಅಪಾಯಕಾರಿ ಹಂತ ತಲುಪಿದೆ. ಕಳೆದ ಎರಡು ದಶಕಗಳಿಂದೀಚೆಗೆ ಭೂಮಿಯಲ್ಲಿ ಮನಬಂದಂತೆ ಕೊರೆದ ಕೊಳವೆ ಬಾವಿಗಳಿಂದ ದೊರೆತ ಫಲ ಇದು. ರಾಜ್ಯದ ೧೭೫ ತಾಲೂಕುಗಳ ಪೈಕಿ ೬೫ ತಾಲೂಕುಗಳಲ್ಲಿ ಅಂತರ್ಜಲ ದುರ್ಬಳಕೆ ಯಥೇಚ್ಚವಾಗಿ ನಡೆಯುತ್ತಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲದ ದುರ್ಬಳಕೆ ರಾಜ್ಯದಲ್ಲೇ ಅತೀ ಹೆಚ್ಚು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಟಿ) ಮಳೆಗಾಲದಲ್ಲಿ ಭೂಮಿಗೆ ನೀರು ಇಂಗಿಸುವ ಕಾರ್ಯವನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಭೂಮಿಯ ಮೇಲೆ ಮಾನವನ ದಬ್ಬಾಳಿಕೆ ಹೆಚ್ಚಿದಂತೆ ಇಡೀ ವಾತಾವರಣವೇ ಬಿಸಿಯಾಗತೊಡಗಿದೆ. ಈಗ ಅಮೆರಿಕರಂಥ ಶ್ರೀಮಂತ ದೇಶಗಳು ಬಿಸಿಗೆ ತತ್ತರಿಸಿವೆ. ಉತ್ತರ ಭಾರತದಲ್ಲೂ ಉಷ್ಣಾಶ ಹೆಚ್ಚಿದ್ದು ಜನರು ಬಿಸಿ ತಾಳದೆ ಸಾಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ನೀರಿನಿಂದಲೇ ಆವೃತವಾಗಿರುವ ಭೂಮಿಗೆ ನೀರಿನಕೊರತೆ ಮತ್ತು ಅದರ ಕಲುಷಿತತೆಯೇ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.

ಕ್ಷಮಿಸಿ ‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ

‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ. ಎಂದು ತಮ್ಮ ಹೇಳಿಕೆಗಳಿಂದ ತಪ್ಪಿಸಿಕೊಳ್ಳುವ ರಾಜಕೀಯ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಜನನಾಯಕರೆನಿಸಿಕೊಂಡವರು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ಬೇಜವಾಬ್ದಾರಿ ಹೇಳಿಕೆ ನೀಡುವ ನಾಯಕರು ಅದರಿಂತ ತಮ್ಮ ಅಕಾರ ಹೋಗುತ್ತದೆ ಎಂದು ಗೊತ್ತಾದರೆ ನಾನು ಹಾಗೆ ಹೇಳಿಯೇ ಇಲ್ಲ ಮಾಧ್ಯಮಗಳು ಮಾತನ್ನು ತಿರುಚಿವೆ ಎಂದು ಜಾರಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಮ್ಮ ರಾಜಕೀಯ ನಾಯಕರೆನಿಸಿಕೊಂಡವರು ದಿನನಿತ್ಯ ಮುನ್ನುಡಿ ಬರೆಯುತ್ತಿದ್ದಾರೆ. ‘ಸರಕಾರ ಐದು ವರ್ಷ ಅವ ಪೂರೈಸಲ್ಲ, ಇದೆ. ಆದರೆ ಪಕ್ಷದಲ್ಲಿ ಆಂತರಿಕ ಶಿಸ್ತು ಬೇಕು ಈಗ ಅದಿಲ್ಲದಿಲ್ಲ ಅದೂ ಇದೆ’ ಎಂದು ನಾನು ಹೇಳಿದೆ. ಆದರೆ ಮಾಧ್ಯಮಗಳು ಸರಕಾರ ಐದು ವರ್ಷ ಪೂರೈಸಲ್ಲ ಎಂದು ಹೇಳಿದ್ದೇನೆ ಎಂದು ಬರೆದಿವೆ. ಪಕ್ಷದಲ್ಲಿ ಆಂತರಿಕ ಶಿಸ್ತು ಇಲ್ಲ ಎಂದು ಬರೆದಿವೆ. ಆದರೆ ಇಲ್ಲದಿಲ್ಲ ಎಂದು ನಾನು ಹೇಳಿದ್ದೆ ಈ ಮಟ್ಟಿಗೆ ಸುದ್ದಿಯನ್ನು ತಿರುಚಲಾಗಿದೆ’ ಎಂದು ಹೊರಳು ಹೇಳಿಕೆಗಳನ್ನು ಕೊಡುತ್ತ ಅಲ್ಲೇ ಹೊರಳಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಯಾವುದೇ ಪಕ್ಷದ ಹೆಸರು ಸೂಚಿಸುವ ಅಗತ್ಯವಿಲ್ಲ ಎಲ್ಲ ಪಕ್ಷದಲ್ಲೂ ಇಂಥವರು ಇದ್ದಾರೆ. ಹೀಗೆ ಹೇಳುತ್ತ ಎಲ್ಲರನ್ನೂ ದಾರಿ ತಪ್ಪಿಸುವವರು ನಮ್ಮನ್ನಾಳುವವರು! ಇವರೇ ಭವಿಷ್ಯದ ಭಾರತಕ್ಕೆ ದಾರಿ ತೋರುವವರು, ಹೊಸ ತಲೆಮಾರಿನ ನಾಯಕರಿಗೆ ಮಾರ್ಗದರ್ಶಕರು. ಇವರ ಮಾರ್ಗದರ್ಶನದಲ್ಲಿ ಬೆಳೆಯುವ ಯುವ ನಾಯಕರು ಇನ್ನು ಯಾವರೀತಿಯ ಹೇಳಿಕೆಗಳನ್ನು ಕೊಡಬಹುದು ಹೇಗೆ ತಮ್ಮ ಹೇಳಿಕೆಗಳನ್ನು ತಾವೇ ತಿರುಚಿಕೊಳ್ಳಬಹುದು ಎಂದು ಊಹಿಸಿ.
ಸಾರ್ವಜನಿಕ ಜೀವನದಲ್ಲಿರುವವರು ಎಚ್ಚರದಿಂದ ಮಾತನಾಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವರುಣ್ ಗಾಂ ಅಲ್ಪಸಂಖ್ಯಾತ ಸಮುದಾಯದವರನ್ನು ಕುರಿತು ನೀಡಿದ ಹೇಳಿಕೆ ಒಂದು ಸ್ಯಾಂಪಲ್. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಪ್ರತಿಮಾತನ್ನೂ ಜನ ಹಾಗೂ ಮಾಧ್ಯಮಗಳು ಬಹಳ ಎಚ್ಚರದಿಂದ ಆಲಿಸುತ್ತವೆ ಎನ್ನುವ ಸಾಮಾನ್ಯ ಜ್ಞಾನವಿರಬೇಕು. ಏಕೆಂದರೆ ಅವರು ಆಡುವ ಮಾತು ವ್ಯಕ್ತಿ ಕೇಂದ್ರಿತವಾಗುವುದಿಲ್ಲ, ಅದು ಸ್ಥಾನ ಕೇಂದ್ರಿತವಾಗುವುದರಿಂದ ಮಂತ್ರಿಗಳು ಬಹಳ ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ಆಡಿದ ಮಾತನ್ನು ಸಮರ್ಥಿಸಿಕೊಳ್ಳುವ, ಸಾಸಿ ತೋರುವಷ್ಟು ಶಕ್ತರಾಗಿರಬೇಕು. ಇವೆರಡೂ ಇಲ್ಲದ ಅಸಮರ್ಥ ನಾಯಕ ಮಣಿಗಳು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇನ್ನೊಂದು ಅಂಶವೆಂದರೆ ಹೇಗೆ ಮಾತಾಡಿದರೂ ನಡೆಯುತ್ತದೆ, ಯಾರು ಕೇಳುತ್ತಾರೆ ಎಂಬ ಉಡಾಫೆ, ಅಕಾರದ ಮದ ಇಂಥ ಹೇಳಿಕೆ ನೀಡಲು ಪ್ರೇರೇಪಿಸುತ್ತದೆ. ಇಂಧನ ಸಚಿವ ಕೆ.ಎಚ್. ಈಶ್ವರಪ್ಪ ಕೂಡ ಇಂಥ ಹೇಳಿಕೆ ಕೊಟ್ಟು ಅದನ್ನು ‘....’ ಹೇಳಿದ್ದೆ ಎಂದರು. ಅವರ ಧಾಟಿಯಲ್ಲೇ ಹೇಳಿಕೆ ಕೊಟ್ಟಿದ್ದ ಇತರ ಶಾಸಕರೂ ಹಾಗೇ ತಿರುವು ಹೇಳಿಕೆ ನೀಡಿದರು. ಅದಕ್ಕಾಗಿ ಪರ್ಯಾಯ ಹೇಳಿಕೆಗಳನ್ನು ನೀಡಿದರು. ಸುಳ್ಳು ಹೇಳುವ ಪರಿಪಾಠ ಹೊಸದೇನಲ್ಲ, ರಾಮಾಯಣ -ಮಹಾಭಾರತದಂಥ ಮಹಾಕಾವ್ಯಗಳಲ್ಲೇ ಸುಳ್ಳು ಹೇಳಿದ ಮತ್ತು ಹೇಳಿಸಿದ ಉದಾಹರಣೆಗಳಿವೆ. ಆದರೆ ಅಲ್ಲಿದ್ದ ಅಲ್ಪ ಸ್ವಲ್ಪ ದಾಖಲೆಗಳು ಈಗ ಯಥೇಚ್ಛವಾಗಿ ಬಳಕೆಯಾಗುತ್ತಿವೆ. ಕಳೆದ ಐದು ವರ್ಷಗಳಿಂದೀಚೆಗಂತೂ ಅದು ಮಿತಿ ಮೀರಿದೆ. ಬಹು ಪಕ್ಷಗಳ ಹೊಂದಾಣಿಕೆ ಸರಕಾರ ರಚನೆ ಮತ್ತು ಪ್ರಾಮಾಣಿಕತೆಯ ಕೊರತೆ ಕಾರಣ. ಜೆಡಿಎಸ್, ಕಾಂಗ್ರೆಸ್‌ಗೆ ಬೆಂಬಲ ನೀಡಿ ಕೊನೆಗೆ ಧರಂಸಿಂಗ್ ಸರಕಾರ ಬೀಳಿಸಿ ನಂತರ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ ಅದಕ್ಕೆ ನೂರಾರು ಸುಳ್ಳುಗಳನ್ನು ಹೇಳಿತು. ಆಗ ಸೃಷ್ಟಿಯಾದ ಸುಳ್ಳುಗಳು ಬಹುಶಃ ರಾಜಕೀಯದ ಇತಿಹಾಸದಲ್ಲೇ ಪ್ರಥಮ ಎನ್ನಬಹುದು. ಅಂದಿನಿಂದ ‘ನಾನು ಆ ರೀತಿ .....’ ಎಂದು ಮಾತು ತಪ್ಪುವ ಸಂಪ್ರದಾಯ ಬೆಳೆಯುತ್ತ ಬಂತು. ಅದನ್ನು ‘ಬಿಜೆಪಿ ವಚನ ಭ್ರಷ್ಟ’ ಎಂದು ಆರೋಪಿಸಿತು. ನಂತರ ಮಗನಿಗೆ ಲೋಕಸಭೆ ಟಿಕೆಟ್ ನೀಡುವ ವಿಚಾರದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ವಚನ ಭ್ರಷ್ಟರಾದರು ಹಾಗೇ ಬಿಜೆಪಿಯಲ್ಲೂ ಅದು ಮುಂದುವರಿದಿದೆ ಅಷ್ಟೆ!
ಮಠಮಾನ್ಯಗಳು, ದೇಗುಲಗಳಲ್ಲೆಲ್ಲಾ ಅಕಾರ ನೀಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಕೊನೆಯ ದಿನ ಮಾತು ಬದಲಿಸಿದ್ದರು. ಇವರು ತಮ್ಮ ಅಕಾರದ ಆಸೆಗಾಗಿ ಮಠಮಾನ್ಯಗಳ ಪಾವಿತ್ರ್ಯತೆಗೂ ಧಕ್ಕೆ ತಂದಿದ್ದರು. ಇಂಥ ಮೇಲಾಟಗಳಿಂದಾಗಿಯೇ ಅವರು ಇಂದು ಪರದೆಯ ಹಿಂದೆ ನಿಂತ ನಾಯಕನಂತೆ ಕಾಣುತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಕೂಡ ಇದೇ ಸ್ಥಾನದಲ್ಲಿ ನಿಂತರೆ ಆಶ್ಚರ್ಯವಿಲ್ಲ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಎಚ್. ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದರು. ಆಗ ಮೈಸೂರಿನಲ್ಲಿ ನಡೆದ ಕಾನೂನಿಗೆ ಸಂಬಂಸಿದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತ, ‘ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಕಕ್ಷಿದಾರರಿಂದ ಹೆಚ್ಚು ಹಣ ವಸೂಲಿ ಮಾಡದೆ ನ್ಯಾಯ ಅರಸಿ ಬಂದವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಿ. ಇದರಿಂದ ವ್ಯಕ್ತಿಯ ಸಮಸ್ಯೆ ಪರಿಹಾರವಾಗುವುದರ ಜತೆಗೆ ವಕೀಲರಿಗೂ ಉತ್ತಮ ಹೆಸರು ಬರುತ್ತದೆ. ಈಗ ಅನೇಕ ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಹೆಚ್ಚು ಹಣ ಕೀಳುತ್ತಿದ್ದಾರೆ ಇದು ಸಲ್ಲ’ ಎಂದಿದ್ದರು. ಇದರಿಂದ ಕುಪಿತರಾದ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಸುಮಾರು ಎಂಟು ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದರು. ವಿಶ್ವನಾಥ್ ಕ್ಷಮೆ ಕೋರಬೇಕೆಂದೂ, ಸಚಿವ ಸ್ಥಾನದಿಂದ ಅವರನ್ನು ಕೈ ಬಿಡಬೇಕೆಂದೂ ಒತ್ತಾಯಿಸಿದರು. ಇದರಿಂದ ಸ್ವಲ್ಪವೂ ವಿಚಲಿತರಾಗದ ವಿಶ್ವನಾಥ್, ‘ಕೆಲವರು ಹಾಗೆ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ’ ಎಂದು ತಮ್ಮ ಮಾತುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು. ಇದರಿಂದ ಮತ್ತಷ್ಟು ಉಗ್ರ ಮತ್ತು ವ್ಯಗ್ರರಾದ ವಕೀಲರು ಪಟ್ಟುಬಿಡದೆ ಚಳವಳಿ ಮುಂದುವರಿಸಿದರು. ಕೊನೆಗೆ ಈ ವಿಷಯವಾಗಿ ನ್ಯಾಯಾಲಯದ ಆವರಣದಲ್ಲಿ ಬಹಿರಂಗ ಚರ್ಚೆ ಹಮ್ಮಿಕೊಳ್ಳುವುದಾಗಿ, ಅಲ್ಲಿ ಬಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ವಿಶ್ವನಾಥ್ ಅವರನ್ನು ಆಹ್ವಾನಿಸಿದರು. ಸಾರ್ವಜನಿಕ ಚರ್ಚೆಗೆ ಸಮ್ಮತಿ ಸೂಚಿಸಿದ ವಿಶ್ವನಾಥ್ ಸ್ಥಳ ಬದಲಾಗಬೇಕೆಂದು ಆಗ್ರಹಿಸಿದರು. ಅದೇನೆಂದರೆ ‘ನಾನು ಮಂತ್ರಿಯಾಗಿ ವಿಧಾನಸೌಧದಲ್ಲಿ ಚರ್ಚೆಗೆ ಕರೆದರೆ ಅದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಸಾರ್ವಜನಿಕ ವಲಯದಲ್ಲೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿಗೆ ದಾರಿಮಾಡಿಕೊಡುತ್ತದೆ. ನ್ಯಾಯಾಲಯದ ಆವರಣದಲ್ಲಿ ಆದರೆ ಅಲ್ಲೂ ಕೆಲವು ಚೌಕಟ್ಟುಗಳು ನಿರ್ಮಾಣವಾಗುತ್ತವೆ. ನಾವು ಮಾಡುತ್ತಿರುವುದು ಬಹಿರಂಗ ಚರ್ಚೆ. ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅನುಕೂಲವಾಗಬೇಕು ಆದ್ದರಿಂದ ಮೈಸೂರಿನ ಟೌನ್‌ಹಾಲ್ (ಶ್ರೀರಂಗಚಾರ್ಲು ಸಭಾ ಭವನ) ಆವರಣದಲ್ಲಿ ಚರ್ಚೆ ನಡೆಯಲಿ’ ಅಲ್ಲಿ ಬಂದು ತಾವು ಆಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು ಇದಕ್ಕೆ ಒಪ್ಪದ ವಕೀಲರು ವಿವಾದಕ್ಕೆ ತೆರೆ ಎಳೆದಿದ್ದರು. ಇದು ವಿಶ್ವನಾಥ್ ಅವರಿಗೆ ತಮ್ಮ ಹೇಳಿಕೆಯ ಬಗ್ಗೆ ಇದ್ದ ಸ್ಪಷ್ಟತೆಯನ್ನು ತೋರಿಸಿತು. ಜನನಾಯಕನೊಬ್ಬ ತಾನು ಆಡುವ ಮಾತಿಗೆ ಬದ್ಧನಾಗಿರಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಶಕ್ತನಾಗಿರಬೇಕು ಇಲ್ಲದಿದ್ದರೆ ಮಾತನಾಡುವುದನ್ನೇ ನಿಲ್ಲಿಸಬೇಕು. ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ಸರಕಾರದ ಸವಲತ್ತು ಪಡೆಯುವ ವಿಚಾರದಲ್ಲೂ ವಿಶ್ವನಾಥ್ ಆಡಿದ ಮಾತಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಹಾಗೆ ಅವರು ಆಡಿದ ಅನೇಕ ವಿಚಾರಗಳು ವಿವಾದಕ್ಕೆ ಗ್ರಾಸವಾಗಿಬಿಡುತ್ತಿದ್ದವು. (ಈಗಲೂ ಆಗುತ್ತಿರುತ್ತವೆ) ಆದರೂ ವಿಶ್ವನಾಥ್ ಎಂದೂ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂದು ಮಾತು ತಪ್ಪುವ, ಮಾಧ್ಯಮಗಳಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಿಲ್ಲ. ಇಂಥ ವಿಚಾರಗಳಲ್ಲೇ ನಾಯಕನೊಬ್ಬನ ಸೈದ್ಧಾಂತಿಕ ಗಟ್ಟಿತನ ಬಹಿರಂಗಗೊಳ್ಳುತ್ತದೆ.
ಇನ್ನೊಂದು ಘಟನೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲೇ ನಡೆದಿತ್ತು. ಮಂತ್ರಿಯಾಗಿದ್ದ ಟಿ. ಜಾನ್ ಎಂಬುವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ ‘ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ಹಲ್ಲೆ, ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ಅತಿವೃಷ್ಟಿ , ಅನಾವೃಷ್ಟಿಗಳು ಹೆಚ್ಚುತ್ತಿವೆ. ಪ್ರಕೃತಿಯಲ್ಲಾಗುತ್ತಿರುವ ಏರುಪೇರುಗಳಿಗೆ ಏಸುವಿನ ಶಾಪ ಕಾರಣ’ ಎಂದಿದ್ದರು. ಇದು ಮರುದಿನ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಹಲವು ಸಂಘಟನೆಗಳಿಂದ ತೀವ್ರ ವಿರೋಧವೂ ವ್ಯಕ್ತವಾಯಿತು, ಸಚಿವರ ರಾಜೀನಾಮೆಗೂ ಒತ್ತಾಯಿಸಲಾಯಿತು. ಗಲಿಬಿಲಿಯಾದ ಜಾನ್ ‘ನಾನು ಹಾಗೆ ಹೇಳಿಯೇ ಇಲ್ಲ. ನಾನು ಆಡಿದ ಮಾತುಗಳನ್ನು ಮಾಧ್ಯಮಗಳು ತಿರುಚಿ ಬರೆದಿವೆ’ ಎಂದು ಮಾಮೂಲಿ ವರಸೆ ತೆಗೆದು ಆಡಿದ ಮಾತಿನಿಂದ ನುಣುಚಿಕೊಳ್ಳುವಲ್ಲಿ ಮುಂದಾಗಿದ್ದರು. ‘ನಾವು ಸುಳ್ಳು ಬರೆದಿಲ್ಲ, ಅವರು ಹಾಗೆ ಮಾತನಾಡಿದ್ದು ನಿಜ’ ಎಂದು ಪತ್ರಿಕೆಗಳು ತಮ್ಮ ಬರಹವನ್ನು ಸಮರ್ಥಿಸಿಕೊಂಡಿದ್ದವು. ವಿವಾದ ದೊಡ್ಡದಾಗಿ ಬೆಳೆಯತೊಡಗಿತು. ಖಾಸಗಿ ಚಾನಲ್‌ವೊಂದು ತಾನು ಚಿತ್ರಿಸಿದ ಜಾನ್ ಅವರ ಭಾಷಣದ ಕ್ಲಿಪಿಂಗ್ಸ್‌ನ್ನು ಮುಖ್ಯಮಂತ್ರಿಗೆ ಕಳಿಸಿತು. ಅದನ್ನು ಸಚಿವ ಸಂಪುಟದ ಪ್ರಮುಖರೊಂದಿಗೆ ಜಾನ್ ಅವರನ್ನು ಜತೆಗಿಟ್ಟುಕೊಂಡು ಎಸ್. ಎಂ. ಕೃಷ್ಣ ವೀಕ್ಷಿಸಿದಾಗ ಜಾನ್ ಮಾತನಾಡಿದ್ದು ನಿಜವಾಗಿತ್ತು. ಆದ್ದರಿಂದ ಸ್ಥಳದಲ್ಲಿಯೇ ರಾಜೀನಾಮೆ ನೀಡುವಂತೆ ಸೂಚಿಸಿ ಅದನ್ನು ಪಡೆದು ವಿವಾದಕ್ಕೆ ತೆರೆ ಎಳೆದಿದ್ದರು. ಇಂಥ ಅಸಂಬದ್ಧ ಮಾತುಗಳಿಂದ ಸಚಿವರ ತಲೆದಂಡವಾಯಿತು. ಈ ಎರಡೂ ಘಟನೆಗಳು ಇಲ್ಲಿ ಸಮರ್ಥ್ಯ ಮತ್ತು ಅಸಮರ್ಥ ಎನ್ನುವುದನ್ನು ಬಿಂಬಿಸಿವೆ. ಜೆ.ಎಚ್. ಪಟೇಲರಂತೂ ಆಗಾಗ ಇಂಥ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಿದ್ದರು ಅದು ಅನೇಕ ತಿರುವುಗಳನ್ನು ಪಡೆಯುವವರೆಗೆ ತಮ್ಮಷ್ಟಕ್ಕೆ ತಾವು ಇದ್ದುಬಿಡುತ್ತಿದ್ದರು. ಅದು ಚರ್ಚೆಯಾಗಿ ಹೊಸತಿರುವು ಪಡೆಯುವ ಹೊತ್ತಿನಲ್ಲಿ ಪರ್ಯಾಯ ಹೇಳಿಕೆ ನೀಡಿ ಮತ್ತೊಂದು ದಿಕ್ಕು ತೋರಿಸುತ್ತಿದ್ದರು ಆದರೆ ‘ಮಾಧ್ಯಮದವರ ಸೃಷ್ಟಿ’ ಎಂದೂ ಜಾರಿಕೊಳ್ಳುತ್ತಿರಲಿಲ್ಲ. ಎಸ್. ಎಂ. ಕೃಷ್ಣ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಅಂಥವರು ಅಳೆದು ತೂಗಿ ಮಾತನಾಡುತ್ತಿದ್ದರು. ಅಕಸ್ಮಾತಾಗಿ ತಪ್ಪು ಮಾತಾಡಿದ್ದರೆ ಕ್ಷಮಿಸಿ ಎಂದು ಬಿಡುತ್ತಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡರು ಯಾವಾಗಲೂ ಹಲ್ಲುಕಿರಿದು ನಗುತ್ತಿರುತ್ತಾರೆ ಎಂದು ಎಸ್.ಎಂ. ಕೃಷ್ಣ ಗೇಲಿಮಾಡಿದ್ದರು. ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಕೃಷ್ಣರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮರುದಿನವೇ ಹಾಗೆ ಮಾತನಾಡಿದ್ದು ತಪ್ಪಾಯಿತು ಕ್ಷಮಿಸಿ ಎಂದಿದ್ದರು ಕೃಷ್ಣ. ಇದು ನಾಯಕನೊಬ್ಬನ ಉದಾತ್ತ ಗುಣವನ್ನು ತೋರಿಸಿತು. ಅಕಸ್ಮಾತ್ ಹಾಗೆ ಕೇಳದಿದ್ದರೆ ಕೆಸರೆರೆಚಾಟ ಶುರುವಾಗಿಬಿಡುತ್ತಿತ್ತು. ಜನತಾ ನ್ಯಾಯಾಲಯದ ಎದುರು ಕ್ಷಮೆ ಕೋರಿದರೆ ತಪ್ಪಿಲ್ಲ ಎನ್ನುವಷ್ಟು ನಮ್ಮ ನಾಯಕರೆನಿಸಿಕೊಂಡವರು ವಿಶಾಲ ಹೃದಯಿಗಳಾಗಬೇಕು. ಆದರೆ ಹಾಗಾಗುತ್ತಿಲ್ಲ ಎಲ್ಲರಿಗೂ ಪ್ರತಿಷ್ಠೆ. ಈಗ ರಾಜ್ಯದಲ್ಲಿ ಉದ್ಭವಿಸಿರುವ ‘ನಾನು ಹಾಗೆ ಮಾತನಾಡಿಲ್ಲ, ಆಡಿದ್ದೇನೆ’ ಸಮಸ್ಯೆಯ ಪರಿಹಾರಕ್ಕೆ ಮುಖ್ಯಮಂತ್ರಿ ಅಥವಾ ಬಿಜೆಪಿ ಅಧ್ಯಕ್ಷರು ಸೂಕ್ತ ದಾಖಲೆಗಳನ್ನು ಪಡೆದು ಕ್ರಮಕ್ಕೆ ಮುಂದಾಗಬೇಕು. ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸುಮ್ಮನಾಗದೆ ಮಾತು ತಪ್ಪಿದರೆ ತಲೆದಂಡವಾಗಬೇಕು. ಇಲ್ಲದಿದ್ದರೆ ಶಿಸ್ತಿನ ಪಕ್ಷ ಎಂದು ಹೆಸರು ಪಡೆದಿರುವ ಬಿಜೆಪಿಗೆ ಇದು ಕಳಂಕ ತಂದೊಡ್ಡುತ್ತದೆ. ಆ ಪಕ್ಷವಾದರೂ ಇಂಥ ಕೆಟ್ಟ ಸಂಪ್ರದಾಯಕ್ಕೆ ಮಂಗಳ ಹಾಡಬೇಕಿದೆ. ನುಡಿದಂತೆ ನಡೆಯದಿದ್ದರೆ, ನಡೆದಂತೆ ನುಡಿಯದಿದ್ದರೆ ಮತದಾರರು ನಿಮ್ಮನ್ನು ನಂಬರಯ್ಯಾ....

‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ

‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ. ಎಂದು ತಮ್ಮ ಹೇಳಿಕೆಗಳಿಂದ ತಪ್ಪಿಸಿಕೊಳ್ಳುವ ರಾಜಕೀಯ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಜನನಾಯಕರೆನಿಸಿಕೊಂಡವರು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ಬೇಜವಾಬ್ದಾರಿ ಹೇಳಿಕೆ ನೀಡುವ ನಾಯಕರು ಅದರಿಂತ ತಮ್ಮ ಅಕಾರ ಹೋಗುತ್ತದೆ ಎಂದು ಗೊತ್ತಾದರೆ ನಾನು ಹಾಗೆ ಹೇಳಿಯೇ ಇಲ್ಲ ಮಾಧ್ಯಮಗಳು ಮಾತನ್ನು ತಿರುಚಿವೆ ಎಂದು ಜಾರಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಮ್ಮ ರಾಜಕೀಯ ನಾಯಕರೆನಿಸಿಕೊಂಡವರು ದಿನನಿತ್ಯ ಮುನ್ನುಡಿ ಬರೆಯುತ್ತಿದ್ದಾರೆ. ‘ಸರಕಾರ ಐದು ವರ್ಷ ಅವ ಪೂರೈಸಲ್ಲ, ಇದೆ. ಆದರೆ ಪಕ್ಷದಲ್ಲಿ ಆಂತರಿಕ ಶಿಸ್ತು ಬೇಕು ಈಗ ಅದಿಲ್ಲದಿಲ್ಲ ಅದೂ ಇದೆ’ ಎಂದು ನಾನು ಹೇಳಿದೆ. ಆದರೆ ಮಾಧ್ಯಮಗಳು ಸರಕಾರ ಐದು ವರ್ಷ ಪೂರೈಸಲ್ಲ ಎಂದು ಹೇಳಿದ್ದೇನೆ ಎಂದು ಬರೆದಿವೆ. ಪಕ್ಷದಲ್ಲಿ ಆಂತರಿಕ ಶಿಸ್ತು ಇಲ್ಲ ಎಂದು ಬರೆದಿವೆ. ಆದರೆ ಇಲ್ಲದಿಲ್ಲ ಎಂದು ನಾನು ಹೇಳಿದ್ದೆ ಈ ಮಟ್ಟಿಗೆ ಸುದ್ದಿಯನ್ನು ತಿರುಚಲಾಗಿದೆ’ ಎಂದು ಹೊರಳು ಹೇಳಿಕೆಗಳನ್ನು ಕೊಡುತ್ತ ಅಲ್ಲೇ ಹೊರಳಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಯಾವುದೇ ಪಕ್ಷದ ಹೆಸರು ಸೂಚಿಸುವ ಅಗತ್ಯವಿಲ್ಲ ಎಲ್ಲ ಪಕ್ಷದಲ್ಲೂ ಇಂಥವರು ಇದ್ದಾರೆ. ಹೀಗೆ ಹೇಳುತ್ತ ಎಲ್ಲರನ್ನೂ ದಾರಿ ತಪ್ಪಿಸುವವರು ನಮ್ಮನ್ನಾಳುವವರು! ಇವರೇ ಭವಿಷ್ಯದ ಭಾರತಕ್ಕೆ ದಾರಿ ತೋರುವವರು, ಹೊಸ ತಲೆಮಾರಿನ ನಾಯಕರಿಗೆ ಮಾರ್ಗದರ್ಶಕರು. ಇವರ ಮಾರ್ಗದರ್ಶನದಲ್ಲಿ ಬೆಳೆಯುವ ಯುವ ನಾಯಕರು ಇನ್ನು ಯಾವರೀತಿಯ ಹೇಳಿಕೆಗಳನ್ನು ಕೊಡಬಹುದು ಹೇಗೆ ತಮ್ಮ ಹೇಳಿಕೆಗಳನ್ನು ತಾವೇ ತಿರುಚಿಕೊಳ್ಳಬಹುದು ಎಂದು ಊಹಿಸಿ.
ಸಾರ್ವಜನಿಕ ಜೀವನದಲ್ಲಿರುವವರು ಎಚ್ಚರದಿಂದ ಮಾತನಾಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವರುಣ್ ಗಾಂ ಅಲ್ಪಸಂಖ್ಯಾತ ಸಮುದಾಯದವರನ್ನು ಕುರಿತು ನೀಡಿದ ಹೇಳಿಕೆ ಒಂದು ಸ್ಯಾಂಪಲ್. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಪ್ರತಿಮಾತನ್ನೂ ಜನ ಹಾಗೂ ಮಾಧ್ಯಮಗಳು ಬಹಳ ಎಚ್ಚರದಿಂದ ಆಲಿಸುತ್ತವೆ ಎನ್ನುವ ಸಾಮಾನ್ಯ ಜ್ಞಾನವಿರಬೇಕು. ಏಕೆಂದರೆ ಅವರು ಆಡುವ ಮಾತು ವ್ಯಕ್ತಿ ಕೇಂದ್ರಿತವಾಗುವುದಿಲ್ಲ, ಅದು ಸ್ಥಾನ ಕೇಂದ್ರಿತವಾಗುವುದರಿಂದ ಮಂತ್ರಿಗಳು ಬಹಳ ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ಆಡಿದ ಮಾತನ್ನು ಸಮರ್ಥಿಸಿಕೊಳ್ಳುವ, ಸಾಸಿ ತೋರುವಷ್ಟು ಶಕ್ತರಾಗಿರಬೇಕು. ಇವೆರಡೂ ಇಲ್ಲದ ಅಸಮರ್ಥ ನಾಯಕ ಮಣಿಗಳು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇನ್ನೊಂದು ಅಂಶವೆಂದರೆ ಹೇಗೆ ಮಾತಾಡಿದರೂ ನಡೆಯುತ್ತದೆ, ಯಾರು ಕೇಳುತ್ತಾರೆ ಎಂಬ ಉಡಾಫೆ, ಅಕಾರದ ಮದ ಇಂಥ ಹೇಳಿಕೆ ನೀಡಲು ಪ್ರೇರೇಪಿಸುತ್ತದೆ. ಇಂಧನ ಸಚಿವ ಕೆ.ಎಚ್. ಈಶ್ವರಪ್ಪ ಕೂಡ ಇಂಥ ಹೇಳಿಕೆ ಕೊಟ್ಟು ಅದನ್ನು ‘....’ ಹೇಳಿದ್ದೆ ಎಂದರು. ಅವರ ಧಾಟಿಯಲ್ಲೇ ಹೇಳಿಕೆ ಕೊಟ್ಟಿದ್ದ ಇತರ ಶಾಸಕರೂ ಹಾಗೇ ತಿರುವು ಹೇಳಿಕೆ ನೀಡಿದರು. ಅದಕ್ಕಾಗಿ ಪರ್ಯಾಯ ಹೇಳಿಕೆಗಳನ್ನು ನೀಡಿದರು. ಸುಳ್ಳು ಹೇಳುವ ಪರಿಪಾಠ ಹೊಸದೇನಲ್ಲ, ರಾಮಾಯಣ -ಮಹಾಭಾರತದಂಥ ಮಹಾಕಾವ್ಯಗಳಲ್ಲೇ ಸುಳ್ಳು ಹೇಳಿದ ಮತ್ತು ಹೇಳಿಸಿದ ಉದಾಹರಣೆಗಳಿವೆ. ಆದರೆ ಅಲ್ಲಿದ್ದ ಅಲ್ಪ ಸ್ವಲ್ಪ ದಾಖಲೆಗಳು ಈಗ ಯಥೇಚ್ಛವಾಗಿ ಬಳಕೆಯಾಗುತ್ತಿವೆ. ಕಳೆದ ಐದು ವರ್ಷಗಳಿಂದೀಚೆಗಂತೂ ಅದು ಮಿತಿ ಮೀರಿದೆ. ಬಹು ಪಕ್ಷಗಳ ಹೊಂದಾಣಿಕೆ ಸರಕಾರ ರಚನೆ ಮತ್ತು ಪ್ರಾಮಾಣಿಕತೆಯ ಕೊರತೆ ಕಾರಣ. ಜೆಡಿಎಸ್, ಕಾಂಗ್ರೆಸ್‌ಗೆ ಬೆಂಬಲ ನೀಡಿ ಕೊನೆಗೆ ಧರಂಸಿಂಗ್ ಸರಕಾರ ಬೀಳಿಸಿ ನಂತರ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ ಅದಕ್ಕೆ ನೂರಾರು ಸುಳ್ಳುಗಳನ್ನು ಹೇಳಿತು. ಆಗ ಸೃಷ್ಟಿಯಾದ ಸುಳ್ಳುಗಳು ಬಹುಶಃ ರಾಜಕೀಯದ ಇತಿಹಾಸದಲ್ಲೇ ಪ್ರಥಮ ಎನ್ನಬಹುದು. ಅಂದಿನಿಂದ ‘ನಾನು ಆ ರೀತಿ .....’ ಎಂದು ಮಾತು ತಪ್ಪುವ ಸಂಪ್ರದಾಯ ಬೆಳೆಯುತ್ತ ಬಂತು. ಅದನ್ನು ‘ಬಿಜೆಪಿ ವಚನ ಭ್ರಷ್ಟ’ ಎಂದು ಆರೋಪಿಸಿತು. ನಂತರ ಮಗನಿಗೆ ಲೋಕಸಭೆ ಟಿಕೆಟ್ ನೀಡುವ ವಿಚಾರದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ವಚನ ಭ್ರಷ್ಟರಾದರು ಹಾಗೇ ಬಿಜೆಪಿಯಲ್ಲೂ ಅದು ಮುಂದುವರಿದಿದೆ ಅಷ್ಟೆ!
ಮಠಮಾನ್ಯಗಳು, ದೇಗುಲಗಳಲ್ಲೆಲ್ಲಾ ಅಕಾರ ನೀಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಕೊನೆಯ ದಿನ ಮಾತು ಬದಲಿಸಿದ್ದರು. ಇವರು ತಮ್ಮ ಅಕಾರದ ಆಸೆಗಾಗಿ ಮಠಮಾನ್ಯಗಳ ಪಾವಿತ್ರ್ಯತೆಗೂ ಧಕ್ಕೆ ತಂದಿದ್ದರು. ಇಂಥ ಮೇಲಾಟಗಳಿಂದಾಗಿಯೇ ಅವರು ಇಂದು ಪರದೆಯ ಹಿಂದೆ ನಿಂತ ನಾಯಕನಂತೆ ಕಾಣುತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಕೂಡ ಇದೇ ಸ್ಥಾನದಲ್ಲಿ ನಿಂತರೆ ಆಶ್ಚರ್ಯವಿಲ್ಲ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಎಚ್. ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದರು. ಆಗ ಮೈಸೂರಿನಲ್ಲಿ ನಡೆದ ಕಾನೂನಿಗೆ ಸಂಬಂಸಿದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತ, ‘ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಕಕ್ಷಿದಾರರಿಂದ ಹೆಚ್ಚು ಹಣ ವಸೂಲಿ ಮಾಡದೆ ನ್ಯಾಯ ಅರಸಿ ಬಂದವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಿ. ಇದರಿಂದ ವ್ಯಕ್ತಿಯ ಸಮಸ್ಯೆ ಪರಿಹಾರವಾಗುವುದರ ಜತೆಗೆ ವಕೀಲರಿಗೂ ಉತ್ತಮ ಹೆಸರು ಬರುತ್ತದೆ. ಈಗ ಅನೇಕ ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಹೆಚ್ಚು ಹಣ ಕೀಳುತ್ತಿದ್ದಾರೆ ಇದು ಸಲ್ಲ’ ಎಂದಿದ್ದರು. ಇದರಿಂದ ಕುಪಿತರಾದ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಸುಮಾರು ಎಂಟು ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದರು. ವಿಶ್ವನಾಥ್ ಕ್ಷಮೆ ಕೋರಬೇಕೆಂದೂ, ಸಚಿವ ಸ್ಥಾನದಿಂದ ಅವರನ್ನು ಕೈ ಬಿಡಬೇಕೆಂದೂ ಒತ್ತಾಯಿಸಿದರು. ಇದರಿಂದ ಸ್ವಲ್ಪವೂ ವಿಚಲಿತರಾಗದ ವಿಶ್ವನಾಥ್, ‘ಕೆಲವರು ಹಾಗೆ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ’ ಎಂದು ತಮ್ಮ ಮಾತುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು. ಇದರಿಂದ ಮತ್ತಷ್ಟು ಉಗ್ರ ಮತ್ತು ವ್ಯಗ್ರರಾದ ವಕೀಲರು ಪಟ್ಟುಬಿಡದೆ ಚಳವಳಿ ಮುಂದುವರಿಸಿದರು. ಕೊನೆಗೆ ಈ ವಿಷಯವಾಗಿ ನ್ಯಾಯಾಲಯದ ಆವರಣದಲ್ಲಿ ಬಹಿರಂಗ ಚರ್ಚೆ ಹಮ್ಮಿಕೊಳ್ಳುವುದಾಗಿ, ಅಲ್ಲಿ ಬಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ವಿಶ್ವನಾಥ್ ಅವರನ್ನು ಆಹ್ವಾನಿಸಿದರು. ಸಾರ್ವಜನಿಕ ಚರ್ಚೆಗೆ ಸಮ್ಮತಿ ಸೂಚಿಸಿದ ವಿಶ್ವನಾಥ್ ಸ್ಥಳ ಬದಲಾಗಬೇಕೆಂದು ಆಗ್ರಹಿಸಿದರು. ಅದೇನೆಂದರೆ ‘ನಾನು ಮಂತ್ರಿಯಾಗಿ ವಿಧಾನಸೌಧದಲ್ಲಿ ಚರ್ಚೆಗೆ ಕರೆದರೆ ಅದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಸಾರ್ವಜನಿಕ ವಲಯದಲ್ಲೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿಗೆ ದಾರಿಮಾಡಿಕೊಡುತ್ತದೆ. ನ್ಯಾಯಾಲಯದ ಆವರಣದಲ್ಲಿ ಆದರೆ ಅಲ್ಲೂ ಕೆಲವು ಚೌಕಟ್ಟುಗಳು ನಿರ್ಮಾಣವಾಗುತ್ತವೆ. ನಾವು ಮಾಡುತ್ತಿರುವುದು ಬಹಿರಂಗ ಚರ್ಚೆ. ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅನುಕೂಲವಾಗಬೇಕು ಆದ್ದರಿಂದ ಮೈಸೂರಿನ ಟೌನ್‌ಹಾಲ್ (ಶ್ರೀರಂಗಚಾರ್ಲು ಸಭಾ ಭವನ) ಆವರಣದಲ್ಲಿ ಚರ್ಚೆ ನಡೆಯಲಿ’ ಅಲ್ಲಿ ಬಂದು ತಾವು ಆಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು ಇದಕ್ಕೆ ಒಪ್ಪದ ವಕೀಲರು ವಿವಾದಕ್ಕೆ ತೆರೆ ಎಳೆದಿದ್ದರು. ಇದು ವಿಶ್ವನಾಥ್ ಅವರಿಗೆ ತಮ್ಮ ಹೇಳಿಕೆಯ ಬಗ್ಗೆ ಇದ್ದ ಸ್ಪಷ್ಟತೆಯನ್ನು ತೋರಿಸಿತು. ಜನನಾಯಕನೊಬ್ಬ ತಾನು ಆಡುವ ಮಾತಿಗೆ ಬದ್ಧನಾಗಿರಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಶಕ್ತನಾಗಿರಬೇಕು ಇಲ್ಲದಿದ್ದರೆ ಮಾತನಾಡುವುದನ್ನೇ ನಿಲ್ಲಿಸಬೇಕು. ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ಸರಕಾರದ ಸವಲತ್ತು ಪಡೆಯುವ ವಿಚಾರದಲ್ಲೂ ವಿಶ್ವನಾಥ್ ಆಡಿದ ಮಾತಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಹಾಗೆ ಅವರು ಆಡಿದ ಅನೇಕ ವಿಚಾರಗಳು ವಿವಾದಕ್ಕೆ ಗ್ರಾಸವಾಗಿಬಿಡುತ್ತಿದ್ದವು. (ಈಗಲೂ ಆಗುತ್ತಿರುತ್ತವೆ) ಆದರೂ ವಿಶ್ವನಾಥ್ ಎಂದೂ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂದು ಮಾತು ತಪ್ಪುವ, ಮಾಧ್ಯಮಗಳಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಿಲ್ಲ. ಇಂಥ ವಿಚಾರಗಳಲ್ಲೇ ನಾಯಕನೊಬ್ಬನ ಸೈದ್ಧಾಂತಿಕ ಗಟ್ಟಿತನ ಬಹಿರಂಗಗೊಳ್ಳುತ್ತದೆ.
ಇನ್ನೊಂದು ಘಟನೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲೇ ನಡೆದಿತ್ತು. ಮಂತ್ರಿಯಾಗಿದ್ದ ಟಿ. ಜಾನ್ ಎಂಬುವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ ‘ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ಹಲ್ಲೆ, ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ಅತಿವೃಷ್ಟಿ , ಅನಾವೃಷ್ಟಿಗಳು ಹೆಚ್ಚುತ್ತಿವೆ. ಪ್ರಕೃತಿಯಲ್ಲಾಗುತ್ತಿರುವ ಏರುಪೇರುಗಳಿಗೆ ಏಸುವಿನ ಶಾಪ ಕಾರಣ’ ಎಂದಿದ್ದರು. ಇದು ಮರುದಿನ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಹಲವು ಸಂಘಟನೆಗಳಿಂದ ತೀವ್ರ ವಿರೋಧವೂ ವ್ಯಕ್ತವಾಯಿತು, ಸಚಿವರ ರಾಜೀನಾಮೆಗೂ ಒತ್ತಾಯಿಸಲಾಯಿತು. ಗಲಿಬಿಲಿಯಾದ ಜಾನ್ ‘ನಾನು ಹಾಗೆ ಹೇಳಿಯೇ ಇಲ್ಲ. ನಾನು ಆಡಿದ ಮಾತುಗಳನ್ನು ಮಾಧ್ಯಮಗಳು ತಿರುಚಿ ಬರೆದಿವೆ’ ಎಂದು ಮಾಮೂಲಿ ವರಸೆ ತೆಗೆದು ಆಡಿದ ಮಾತಿನಿಂದ ನುಣುಚಿಕೊಳ್ಳುವಲ್ಲಿ ಮುಂದಾಗಿದ್ದರು. ‘ನಾವು ಸುಳ್ಳು ಬರೆದಿಲ್ಲ, ಅವರು ಹಾಗೆ ಮಾತನಾಡಿದ್ದು ನಿಜ’ ಎಂದು ಪತ್ರಿಕೆಗಳು ತಮ್ಮ ಬರಹವನ್ನು ಸಮರ್ಥಿಸಿಕೊಂಡಿದ್ದವು. ವಿವಾದ ದೊಡ್ಡದಾಗಿ ಬೆಳೆಯತೊಡಗಿತು. ಖಾಸಗಿ ಚಾನಲ್‌ವೊಂದು ತಾನು ಚಿತ್ರಿಸಿದ ಜಾನ್ ಅವರ ಭಾಷಣದ ಕ್ಲಿಪಿಂಗ್ಸ್‌ನ್ನು ಮುಖ್ಯಮಂತ್ರಿಗೆ ಕಳಿಸಿತು. ಅದನ್ನು ಸಚಿವ ಸಂಪುಟದ ಪ್ರಮುಖರೊಂದಿಗೆ ಜಾನ್ ಅವರನ್ನು ಜತೆಗಿಟ್ಟುಕೊಂಡು ಎಸ್. ಎಂ. ಕೃಷ್ಣ ವೀಕ್ಷಿಸಿದಾಗ ಜಾನ್ ಮಾತನಾಡಿದ್ದು ನಿಜವಾಗಿತ್ತು. ಆದ್ದರಿಂದ ಸ್ಥಳದಲ್ಲಿಯೇ ರಾಜೀನಾಮೆ ನೀಡುವಂತೆ ಸೂಚಿಸಿ ಅದನ್ನು ಪಡೆದು ವಿವಾದಕ್ಕೆ ತೆರೆ ಎಳೆದಿದ್ದರು. ಇಂಥ ಅಸಂಬದ್ಧ ಮಾತುಗಳಿಂದ ಸಚಿವರ ತಲೆದಂಡವಾಯಿತು. ಈ ಎರಡೂ ಘಟನೆಗಳು ಇಲ್ಲಿ ಸಮರ್ಥ್ಯ ಮತ್ತು ಅಸಮರ್ಥ ಎನ್ನುವುದನ್ನು ಬಿಂಬಿಸಿವೆ. ಜೆ.ಎಚ್. ಪಟೇಲರಂತೂ ಆಗಾಗ ಇಂಥ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಿದ್ದರು ಅದು ಅನೇಕ ತಿರುವುಗಳನ್ನು ಪಡೆಯುವವರೆಗೆ ತಮ್ಮಷ್ಟಕ್ಕೆ ತಾವು ಇದ್ದುಬಿಡುತ್ತಿದ್ದರು. ಅದು ಚರ್ಚೆಯಾಗಿ ಹೊಸತಿರುವು ಪಡೆಯುವ ಹೊತ್ತಿನಲ್ಲಿ ಪರ್ಯಾಯ ಹೇಳಿಕೆ ನೀಡಿ ಮತ್ತೊಂದು ದಿಕ್ಕು ತೋರಿಸುತ್ತಿದ್ದರು ಆದರೆ ‘ಮಾಧ್ಯಮದವರ ಸೃಷ್ಟಿ’ ಎಂದೂ ಜಾರಿಕೊಳ್ಳುತ್ತಿರಲಿಲ್ಲ. ಎಸ್. ಎಂ. ಕೃಷ್ಣ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಅಂಥವರು ಅಳೆದು ತೂಗಿ ಮಾತನಾಡುತ್ತಿದ್ದರು. ಅಕಸ್ಮಾತಾಗಿ ತಪ್ಪು ಮಾತಾಡಿದ್ದರೆ ಕ್ಷಮಿಸಿ ಎಂದು ಬಿಡುತ್ತಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡರು ಯಾವಾಗಲೂ ಹಲ್ಲುಕಿರಿದು ನಗುತ್ತಿರುತ್ತಾರೆ ಎಂದು ಎಸ್.ಎಂ. ಕೃಷ್ಣ ಗೇಲಿಮಾಡಿದ್ದರು. ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಕೃಷ್ಣರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮರುದಿನವೇ ಹಾಗೆ ಮಾತನಾಡಿದ್ದು ತಪ್ಪಾಯಿತು ಕ್ಷಮಿಸಿ ಎಂದಿದ್ದರು ಕೃಷ್ಣ. ಇದು ನಾಯಕನೊಬ್ಬನ ಉದಾತ್ತ ಗುಣವನ್ನು ತೋರಿಸಿತು. ಅಕಸ್ಮಾತ್ ಹಾಗೆ ಕೇಳದಿದ್ದರೆ ಕೆಸರೆರೆಚಾಟ ಶುರುವಾಗಿಬಿಡುತ್ತಿತ್ತು. ಜನತಾ ನ್ಯಾಯಾಲಯದ ಎದುರು ಕ್ಷಮೆ ಕೋರಿದರೆ ತಪ್ಪಿಲ್ಲ ಎನ್ನುವಷ್ಟು ನಮ್ಮ ನಾಯಕರೆನಿಸಿಕೊಂಡವರು ವಿಶಾಲ ಹೃದಯಿಗಳಾಗಬೇಕು. ಆದರೆ ಹಾಗಾಗುತ್ತಿಲ್ಲ ಎಲ್ಲರಿಗೂ ಪ್ರತಿಷ್ಠೆ. ಈಗ ರಾಜ್ಯದಲ್ಲಿ ಉದ್ಭವಿಸಿರುವ ‘ನಾನು ಹಾಗೆ ಮಾತನಾಡಿಲ್ಲ, ಆಡಿದ್ದೇನೆ’ ಸಮಸ್ಯೆಯ ಪರಿಹಾರಕ್ಕೆ ಮುಖ್ಯಮಂತ್ರಿ ಅಥವಾ ಬಿಜೆಪಿ ಅಧ್ಯಕ್ಷರು ಸೂಕ್ತ ದಾಖಲೆಗಳನ್ನು ಪಡೆದು ಕ್ರಮಕ್ಕೆ ಮುಂದಾಗಬೇಕು. ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸುಮ್ಮನಾಗದೆ ಮಾತು ತಪ್ಪಿದರೆ ತಲೆದಂಡವಾಗಬೇಕು. ಇಲ್ಲದಿದ್ದರೆ ಶಿಸ್ತಿನ ಪಕ್ಷ ಎಂದು ಹೆಸರು ಪಡೆದಿರುವ ಬಿಜೆಪಿಗೆ ಇದು ಕಳಂಕ ತಂದೊಡ್ಡುತ್ತದೆ. ಆ ಪಕ್ಷವಾದರೂ ಇಂಥ ಕೆಟ್ಟ ಸಂಪ್ರದಾಯಕ್ಕೆ ಮಂಗಳ ಹಾಡಬೇಕಿದೆ. ನುಡಿದಂತೆ ನಡೆಯದಿದ್ದರೆ, ನಡೆದಂತೆ ನುಡಿಯದಿದ್ದರೆ ಮತದಾರರು ನಿಮ್ಮನ್ನು ನಂಬರಯ್ಯಾ....

ಶಿಕ್ಷಕರ ಚುನಾವಣೆ: ಒಂದು ‘ರಾಜಕೀಯ’ ಅನುಭವ

ಈಗ ಎಲ್ಲೆಡೆ ತಾಲೂಕು ಶಿಕ್ಷಕರ ಸಂಘದ ಚುನಾವಣೆಗಳು ನಡೆದು ಫಲಿತಾಂಶ ಹೊರಬಿದ್ದಿದೆ. ಆ ಮೂಲಕ ಚುನಾವಣೆ ಪ್ರಕ್ರಿಯೆಯೊಂದು ಮುಗಿದಿದೆ. ಈ ಸಂದರ್ಭದಲ್ಲಿ ಆದ ಶಿಷ್ಟಾಚಾರದ ಬಗ್ಗೆ ಚಿಂತಿಸಬೇಕಿದೆ. ಶಿಕ್ಷಕರ ಸಂಘದ ಚುನಾವಣೆಗಳು ಘೋಷಣೆಯಾದ ನಂತರ ಗ್ರಾಮಾಂತರ ಪ್ರದೇಶದಲ್ಲಾದ ಸಂಚಲನಗಳನ್ನು ಗಮನಿಸಿದರೆ ಅದೊಂದು ಸ್ಥಳೀಯ (ಗ್ರಾ.ಪಂ., ತಾ.ಪಂ.) ಚುನಾವಣೆ ಘೋಷಣೆಯಂತಿತ್ತು. ಕಾರಣ ಈ ಚುನಾವಣೆಗಳು ಸುಶಿಕ್ಷತ ಸಮುದಾಯದ ಚುನಾವಣೆಯಂತೆ ಕೊನೆಗೂ ಕಾಣಲೇ ಇಲ್ಲ. ಇಲ್ಲಿ ವೃತ್ತಿ ರಾಜಕಾರಣದ ಮಟ್ಟಕ್ಕಿಳಿದು ಬಾಡೂಟ, ಹೆಂಡ ಹಂಚಿಕೆಯಂಥ ಹೀನ, ನಿರ್ಲಜ್ಜ ಆಮಿಷಗಳನ್ನೊಡ್ಡಿ ಅನೇಕ ಕಡೆ ಶಿಕ್ಷಕ ಪ್ರತಿನಿಗಳು ಮತ ಯಾಚಿಸಿದರು. ಹಾಗೆಯೇ ಕೆಲವರು ಅದನ್ನು ಪಡೆದು ಮತ ಚಲಾಯಿಸಿದರು ಎಂದರೆ ನೈತಿಕ, ಮೌಲ್ಯ ಶಿಕ್ಷಣದ ಕನಸು ಕಂಡ ಮಂತ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆತ್ಮ ಸ್ಮಶಾನದಲ್ಲೇ ಮಗ್ಗುಲು ಬದಲಿಸಿ ನಕ್ಕಿರಬೇಕು!
ಯಾವ ಸಮುದಾಯ ಸಮಾಜಕ್ಕೆ ಜ್ಞಾನದ ಬೆಳಕು ನೀಡಬೇಕೋ ಅದೇ ಅಜ್ಞಾನದ ಅಂಧಕಾರದಲ್ಲಿ ಮುಳುಗಿದರೆ ಈ ದೇಶದ ಭವಿಷ್ಯ ಏನು ಎಂಬ ಬಗ್ಗೆ ಶಿಕ್ಷಕರ ಪ್ರತಿನಿಗಳೇ ಚಿಂತಿಸಬೇಕಿದೆ. ಶಿಕ್ಷಕರ ಸಂಘಟನೆಗಳು ಪ್ರಬಲಗೊಂಡಂತೆ ಪರಿಷತ್‌ಗೆ ಆಯ್ಕೆಯಾಗುವ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಅದರಲ್ಲಿ ಮಿಳಿತಗೊಂಡಿದ್ದರಿಂದ ಇವರನ್ನು ಪ್ರಶ್ನಿಸಲಾಗದಂಥ ವಾತಾವರಣ ನಿರ್ಮಾಣವಾಗುತ್ತಿದೆ. ಸ್ಥಳೀಯವಾಗಿ ಶಿಕ್ಷಕರ ಸಂಘಟನೆಗಳು ಬಲಿಷ್ಠವಾದರೆ ರಾಜಕೀಯ ನಾಯಕರಿಗೆ ಲಾಭ. ಆದ್ದರಿಂದ ಅವರೂ ಇಂಥ ಕೆಲಸಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಇಲ್ಲಿ ಸ್ವಸ್ಥ ಸಮಾಜ ಎಂಬುದು ಬೂಟಾಟಿಕೆಯಾಗುತ್ತಿದೆ.
ರಾಜ್ಯದಲ್ಲಿ ಬಹುತೇಕ ಶಿಕ್ಷಕರ ಸಂಘಟನೆಗಳು ರಾಜಕೀಯ ಗುಂಪುಗಳಾಗಿ ರೂಪಾಂತರಗೊಂಡಿವೆ. ಮುಖಂಡರು ಸಂಘಟನೆಯ ಮೂಲ ಸಿದ್ಧಾಂತವನ್ನು ಗಾಳಿಗೆ ತೂರಿ, ಸ್ಥಳೀಯ ರಾಜಕೀಯ ಪುಢಾರಿಗಳ ಚೇಲಾಗಳಂತೆ ವರ್ತಿಸತೊಡಗಿದ್ದಾರೆ. ಕೆಲವರಂತೂ ರಾಜಕೀಯ ಪುಢಾರಿಗಳೇ ಆಗಿದ್ದಾರೆ! ಯಾವಾಗಲೋ ಶಾಲೆಗೆ ಭೇಟಿ ನೀಡಿ ಪಾಠ ಮಾಡುವ ಶಾಸ್ತ್ರ ಮಾಡಿ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಚಹಾದ ಅಂಗಡಿ ಮುಂದೆ ಸಿಗರೇಟು ಹಿಡಿದು ನಿಂತರೆ ಅವರ ಅಧ್ಯಾಪನ ವೃತ್ತಿಗೆ ಜೈ!
ಡಿ.ಎಲ್. ನರಸಿಂಹಾಚಾರ್, ಪರಮೇಶ್ವರ್ ಭಟ್, ಬೇಂದ್ರೆ, ಕುವೆಂಪು, ಲಂಕೇಶ್ ಮುಂತಾದ ಜ್ಞಾನ ಶಿಖರಗಳ ಮಹಾನ್ ಪರಂಪರೆಯೇ ಶಿಕ್ಷಕ ವೃತ್ತಿಯ ಬೆನ್ನಿಗಿದೆ. ಸಮಾಜಕ್ಕೆ ಸಾಂಸ್ಕೃತಿಕ, ರಾಜಕೀಯ, ವೈಚಾರಿಕ ತ್ರಾಣ ತುಂಬುವುದು ಶಿಕ್ಷಕ ಸಮುದಾಯ ಎಂಬ ನಂಬಿಕೆ ಸಮಾಜದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಸಾಗುತ್ತಿರುವ ದಿಕ್ಕುಗಳನ್ನು ಗಮನಿಸಿದರೆ ಆ ನಂಬಿಕೆ ಹುಸಿಯಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇವರು ಹೀಗೇ ಸಾಗಿದರೆ ವೃತ್ತಿ ರಾಜಕಾರಣಿಗಳಂತೆ ನಿರ್ಲಜ್ಜ ರಾಜಕೀಯ ಪ್ರಜ್ಞೆಯನ್ನು ಹೊರತು ಪಡಿಸಿ ಮಕ್ಕಳಿಗೆ ಯಾವುದೇ ನೈತಿಕ ಮೌಲ್ಯಗಳನ್ನು ತುಂಬಲಾರರು.
ಶಿಕ್ಷಕರ ಸಂಘದ ಚುನಾವಣೆಯ ಆಟಾಟೋಪಗಳನ್ನು ಗಮನಿಸಿದರಂತೂ ಇದು ನಿಜ ಎನಿಸುತ್ತಿದೆ. ಶಿಕ್ಷಕರು ಸಂಘಟಿತರಾಗಲು ಸಂವಿಧಾನ ಅವಕಾಶ ನೀಡಿದೆಯೇ ಹೊರತು ಸರ್ವಾಕಾರಿಗಳಾಗಲು ಅಲ್ಲ. ಹಕ್ಕು ರಕ್ಷಿಸಿಕೊಳ್ಳಲು ಸ್ವಾತಂತ್ರ್ಯ ನೀಡಿದೆಯೇ ಹೊರತು ಸ್ವೇಚ್ಛಾಚಾರಕ್ಕಲ್ಲ ಎನ್ನುವ ಅರಿವು ಆ ಸಮುದಾಯದ ಬಹುತೇಕರಲ್ಲಿ ಕಂಡುಬರುತ್ತಿಲ್ಲ. ಬಯಲ ನಾಡು ಕೋಲಾರ ಜಿಲ್ಲೆಯಲ್ಲಿ ಶಿಕ್ಷಕರ ಸಂಘಗಳಿಲ್ಲ ಅವು ರಾಜಕೀಯ ಪಕ್ಷಗಳಂತೆ ಗುಂಪುಗಳಾಗಿ, ಬಣಗಳಾಗಿ ಚುನಾವಣೆ ಎದುರಿಸಿದ್ದು ಮಾತ್ರ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಯಾವುದೋ ಒಂದು ಬಣ ತನ್ನ ಹೆಚ್ಚುಗಾರಿಕೆಯನ್ನು ಮೆರೆಯಲು ಗೆದ್ದವನನ್ನು ಮೆರವಣಿಗೆ ಮಾಡಿದರೆ ನಮ್ಮ ಸ್ಥಳೀಯ ಚುನಾವಣೆಗಳಿಗೂ ಇದಕ್ಕೂ ಏನು ವ್ಯತ್ಯಾಸ? ಕಾಂಗ್ರೆಸ್‌ನವರು ಗೆದ್ದು ಬಿಜೆಪಿ ಮತದಾರರಿರುವ ಬಡಾವಣೆಗಳಲ್ಲಿ ಕೊಳಾಯಿ ನೀರು ಹರಿಸದೆ ಮಾಡಿದ ಹೊಲಸು ರಾಜಕಾರಣದಂತೆ ಇಲ್ಲೂ ಆ ಬಣದವರು ನಮ್ಮನ್ನು ಬೆಂಬಲಿಸಿಲ್ಲ ಎಂದು ರಾಜಕೀಯ ಒತ್ತಡ ತಂದು ಒತ್ತಾಯಪೂರ್ವಕವಾಗಿ ವರ್ಗಾವಣೆಯಂಥ ನೀಚ ಕೃತ್ಯಗಳಿಗೆ ಮುಂದಾದರೆ ಸಂಘಟನೆಯ ಉದ್ದೇಶ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಬೇಕಿದೆ. ಸಾಲದೆಂಬಂತೆ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೋಲಾರ ಜಿಲ್ಲೆಯ ಫಲಿತಾಂಶ ೧೭ನೇ ಸ್ಥಾನದಲ್ಲಿದೆ. ಚುನಾವಣೆ, ಸ್ಥಳೀಯ ರಾಜಕಾರಣ, ಅಂತಃಕಲಹವೇ ಶಿಕ್ಷಕರ ಗುರಿಯಾದರೆ ಫಲಿತಾಂಶ ಮತ್ತಷ್ಟು ಹಿಂದೆ ಬೀಳುವುದರಲ್ಲಿ ಅನುಮಾನವಿಲ್ಲ. ನಮ್ಮ ಎಚ್ಚರ ಇರಬೇಕಾಗಿರುವುದು ಇಲ್ಲಿ. ರಾಜಕಾರಣದಲ್ಲಿ ಅಲ್ಲ. ಸ್ಥಳೀಯ ರಾಜಕೀಯ ನಾಯಕರೂ ಸಹ ಉರಿಯುವ ಮನೆಯ ಗಳ ಹಿರಿಯದೆ ಶಿಕ್ಷಕರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳದೆ ಶೈಕ್ಷಣಿಕ ಅಭಿವೃದ್ಧಿಗೆ ಗಮನಹರಿಸಬೇಕು ಮತ್ತು ಅದರ ಪಾವಿತ್ರ್ಯ ಕಾಪಾಡಬೇಕು. ಇಲ್ಲವಾದರೆ ಶಿಕ್ಷಕರು ರಾಜಕೀಯ ನಾಯಕರಾಗುತ್ತಾರೆ, ಅವರ ಕೈಯಲ್ಲಿ ಕಲಿಯುವ ಮಕ್ಕಳು ಪಕ್ಷಗಳ ಕಾರ್ಯಕರ್ತರಾಗುತ್ತಾರೆ. ಬರುವ ದಿನಗಳಲ್ಲಿ ಅವರೂ ಕೂಡ ಇದೇ ಹೆಂಡ, ಹಣ, ಗುಂಪು ಎಂಬ ತತ್ತ್ವ ರಹಿತ ರಾಜಕಾರಣದ ನಾಯಕರ ಪಾತ್ರವಹಿಸುತ್ತಾರೆ. ತಿದ್ದಿ ಬೆಳೆಸಬೇಕಾದ ಶಿಕ್ಷಕರೇ ಅವರ ವರ್ತಮಾನವನ್ನು ಇಷ್ಟು ಗೊಂದಲದಲ್ಲಿ ಸಿಲುಕಿಸಿದರೆ ಭವಿಷ್ಯ ಹೇಗೆ ಎಂಬ ಬಗ್ಗೆ ಪೋಷಕರೂ ಚಿಂತಿಸಿ ಪಾಠ ಮಾಡದ ಶಿಕ್ಷಕರಿಗೆ ‘ಪಾಠ’ ಕಲಿಸಬೇಕಾದೀತು. ಪರಿಸ್ಥೀತಿ ಆ ಹಂತ ತಲುಪುವ ಮೊದಲು ಶಿಕ್ಷಕರು ಅವರ ಪರಿಷತ್ ಪ್ರತಿನಿಗಳು ಎಚ್ಚರವಾಗುವುದು ಸೂಕ್ತ. ಕೋಲಾರ ಜಿಲ್ಲೆ ಇಲ್ಲಿ ಉದಾಹರಣೆಯಷ್ಟೇ. ರಾಜ್ಯದಲ್ಲಿ ಬಹುತೇಕ ತಾಲೂಕುಗಳಲ್ಲಿ ಇಂಥದ್ದೇ ವಾತಾವರಣವಿದೆ. ‘ಅಂದೋ ಮುಂದೆ ಗುರಿ ಇತ್ತು ಹಿಂದೆ ಗುರುವಿದ್ದ ಸಾಗುತ್ತಿತ್ತು ರರ ದಂಡು. ಇಂದು ಮುಂದೆ ಗುರಿ ಇಲ್ಲ ಹಿಂದೆ ಗುರುವಿಲ್ಲ ಮುಗ್ಗರಿಸುತಿದೆ ಹೇಡಿಗಳ ಹಿಂಡು’ ಎಂದಿದ್ದರು ಕುವೆಂಪು. ಇಲ್ಲಿ ಆಯ್ಕೆ ಶಿಕ್ಷಕರದ್ದೇ ಅವರೇ ನಿರ್ಧರಿಸಬೇಕು.

ಉತ್ಪಾದನೆ ಕುಂಠಿತ : ದೇಶಕ್ಕೆ ‘ಸಕ್ಕರೆ ಕಾಯಿಲೆ’

ಕಳೆದ ವರ್ಷ ನಾವು ಅಮೆರಿಕದ ವೀಟ್ ಕಂಪನಿಯಿಂದ ಲಕ್ಷಾಂತರ ಟನ್ ಗೋಯನ್ನು, ಪಾಕಿಸ್ತಾನದಿಂದ ಸಕ್ಕರೆಯನ್ನೂ ಆಮದು ಮಾಡಿಕೊಂಡಿದ್ದೆವು. ಈ ವರ್ಷ ಆ ಸರದಿಯಲ್ಲಿ ಸಕ್ಕರೆ ಬಂದು ನಿಂತಿದೆ. ನೆರೆಯ ರಾಷ್ಟ್ರಗಳಿಂದ ಖಾದ್ಯ ತೈಲ ಆಮದು ಎನ್ನುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಶೇ. ೭೨ರಷ್ಟು ಕೃಷಿಕರನ್ನು ಹೊಂದಿರುವ, ಕೃಷಿಯನ್ನೇ ಜೀವಾಳವಾಗಿಸಿಕೊಂಡಿರುವ ಭಾರತದಂಥ ಬೃಹತ್ ಜನಸಂಖ್ಯೆಯ ದೇಶಕ್ಕೆ ಇದು ಅಪಾಯಕಾರಿ ಬೆಳವಣಿಗೆ.
೧೯೯೬ರ ಹೊತ್ತಿಗೆ ಆಹಾರ ಸ್ವಾವಲಂಬಿಯಾಗಿದ್ದ ದೇಶ ಇಂದು ಪ್ರತಿಯೊಂದಕ್ಕೂ ಇತರ ದೇಶಗಳಿಗೆ ಕೈ ಚಾಚುವಂತಾಗಿದೆ. ಆಮದು ಎಂದರೆ ತೆರಿಗೆಗಳನ್ನು ಆಹ್ವಾನಿಸಿದಂತೆಯೇ ಹೊರತು ಸಮೃದ್ಧಿಯನ್ನಲ್ಲ. ಅದೇ ಸಾಲಿನಲ್ಲಿ ನಿಲ್ಲುವುದು ಸಕ್ಕರೆಕೂಡ. ನಮ್ಮ ದೇಶಿ ಮಾರುಕಟ್ಟೆಗೆ ಒಂದು ವರ್ಷಕ್ಕೆ ೨೨ ದಶಲಕ್ಷ ಟನ್ ಸಕ್ಕರೆ ಅಗತ್ಯವಿದೆ. ೨೦೦೭-೦೮ರಲ್ಲಿ ೧೭ ದಶಲಕ್ಷ ಟನ್ ಮಾತ್ರ ಉತ್ಪಾದನೆಯಾಗಿತ್ತು ೨೦೦೯-೧೦ರಲ್ಲಿ ೧೫ ದಶಲಕ್ಷ ಟನ್ ಮಾತ್ರ ಉತ್ಪಾದನೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ನಮ್ಮ ಅಗತ್ಯಕ್ಕಿಂತ ಏಳು ದಶಲಕ್ಷ ಮೆಟ್ರಿಕ್ ಟನ್ ಕೊರತೆ ಕಾಡಲಿದೆ. ಮೂರು ವರ್ಷದ ಹಿಂದೆ ಸಾಕಷ್ಟು ಸಕ್ಕರೆ ಉತ್ಪಾದನೆಯಾಗುತ್ತಿದ್ದರಿಂದ ಅಕ್ಕಿ, ಗೋ, ಬೇಳೆ, ಖಾದ್ಯ ತೈಲಗಳ ಬೆಲೆಗೆ ಹೋಲಿಸಿದರೆ ಸಕ್ಕರೆ ಬೆಲೆ ಹೆಚ್ಚಾಗಿದ್ದು ಕಡಿಮೆಯೇ.
೧೯೮೦ರ ಹೊತ್ತಿಗೆ ಭಾರತದಲ್ಲಿ ೨೭ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ೯೦ರ ಹೊತ್ತಿಗೆ ಅದು ೫೦ ಲಕ್ಷ ಹೆಕ್ಟೇರಿಗೆ ಹೆಚ್ಚಿತು. ಅಂದರೆ ದೇಶದಲ್ಲಿ ಉಳುಮೆ ಭೂಮಿಯ ಶೇಕಡಾ ಮೂರರಷ್ಟು ಭಾಗದಲ್ಲಿ ಕಬ್ಬು ಬೆಳೆಯುತ್ತಿದ್ದರಿಂದ ಸಕ್ಕರೆಯನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿತ್ತು. ಇದರಿಂದ ಭಾರತ ಪ್ರಪಂಚದಲ್ಲೇ ನಾಲ್ಕನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವೆಂಬ ಹೆಗ್ಗಳಿಕೆಯನ್ನೂ ಪಡೆಯಿತು. ಉತ್ಪಾದನೆ ಹೆಚ್ಚಿದಂತೆ ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು ಸರಕಾರಗಳು ವಿಫಲವಾದವು. ಇದನ್ನೇ ಕಾಯುತ್ತಿದ್ದ ಯುರೋಪಿನ ಶ್ರೀಮಂತ ರಾಷ್ಟ್ರಗಳು ಮತ್ತು ಅಮೆರಿಕಾ, ಬ್ರೆಜಿಲ್ ದೇಶಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡವು. ಆ ಬಲೆಯಲ್ಲಿ ಸಿಕ್ಕಿ ಬಿದ್ದವನು ಭಾರತದ ಕಬ್ಬು ಬೆಳೆಗಾರ!
ಕ್ಯೂಬಾದಂಥ ಸಣ್ಣ ದೇಶಗಳು ಮಾರುಕಟ್ಟೆಯ ಏರುಪೇರುಗಳನ್ನು ಗಮನಿಸಿ. ತಮ್ಮ ರೈತರಿಗೆ ನ್ಯಾಯವೊದಗಿಸಿಕೊಟ್ಟವು. ಬ್ರೆಜಿಲ್ ಜಗತ್ತಿನಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿತು. ಅಲ್ಲದೆ, ರಫ್ತು ಮಾರುಕಟ್ಟೆಯತ್ತ ದೃಷ್ಟಿ ಹಾಯಿಸಿದ್ದರಿಂದ ಜಾಗತೀಕರಣದ ಅಪಾಯಗಳಿಂದ ತನ್ನ ರೈತರನ್ನು ಪಾರು ಮಾಡಲು ಮುಂದಾಯಿತು. ರಷ್ಯಾ ಕೂಡ ತನ್ನ ರೈತರನ್ನು ಕಾಪಾಡಿಕೊಂಡಿತು. ಭಾರತ ಮಾತ್ರ ಯಾವ ಕ್ರಮಕ್ಕೂ ಮುಂದಾಗಲಿಲ್ಲ. ಮಳೆಯ ಅಭಾವ, ಸಾಲ ಸೌಲಭ್ಯಗಳ ಕೊರತೆ, ಕಾರ್ಖಾನೆಗಳ ನಿರ್ಲಕ್ಷ್ಯದ ನಡುವೆಯೂ ಭಾರತದ ರೈತರು ದೇಶಕ್ಕೆ ಸಿಹಿಯ ಕೊರತೆ ಕಾಡದಂತೆ ನೋಡಿಕೊಂಡಿದ್ದರು ಎನ್ನುವುದೇ ಹೆಮ್ಮೆಯ ಸಂಗತಿ.
ಕೊರತೆಗೆ ಕಾರಣಗಳು
* ಕಾರ್ಖಾನೆಗಳು ಕಬ್ಬು ಅರೆದು ಸಮಯಕ್ಕೆ ಸರಿಯಾಗಿ ರೈತರಿಗೆ ಹಣ ಪಾವತಿಸಲಿಲ್ಲ.
* ಬೆಲ್ಲದ ಬೆಲೆ ದಿಢೀರ್ ಹೆಚ್ಚಿದ್ದರಿಂದ ಕಾರ್ಖಾನೆಗೆ ಕಬ್ಬು ಸಾಗಣೆ ಕಡಿಮೆಯಾಯಿತು.
* ಕಬ್ಬು ಬೆಳೆಗಾರರ ಬಗ್ಗೆ ಸರಕಾರದ ನಿರ್ಲಕ್ಷ್ಯ
* ಶ್ರೀಮಂತರ ಗೋದಾಮುಗಳಲ್ಲಿ ಅಕ್ರಮ ದಾಸ್ತಾನು
ಇಂಥ ಕಾರಣಗಳಿಂದ ಕರ್ನಾಟಕದ ರೈತರಂತೂ ನೆಲಕಚ್ಚಿ ಹೋದರು. ಕಾರ್ಖಾನೆಗಳು ಕಬ್ಬು ಅರೆಯುವ ಬದಲಿಗೆ ರೈತರನ್ನೇ ಅರೆದವು. ಎಂದರೆ ದುಬಾರಿಯಾಗಲಾರದು. ರಾಜ್ಯದ, ದೇಶದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರೇ ಆಗಿರುವುದರಿಂದ ಯಾವ ಸರಕಾರವೂ ಅವರನ್ನು ಮಣಿಸಲಾಗುತ್ತಿಲ್ಲ. ಬದಲಿಗೆ ಸರಕಾರಗಳೇ ಅವರಿಗೆ ಮಣಿದು ಮಂಡಿಯೂರಿ ಮಾತು ಕೇಳುತ್ತವೆ. ಮಾಲೀಕರ ವಂಚನೆಗೆ ಬೇಸತ್ತು ಕಬ್ಬು ಬೆಳೆಗಾರರು ಪ್ರತಿಭಟಿಸಿದರೆ ರೈತರ ಪರವಾಗಿ ನಿಲ್ಲಬೇಕಾದ ಸರಕಾರಗಳು ಮಾಲೀಕರ ಪರವಾಗಿ ವಕಾಲತ್ತು ವಹಿಸಿ ಪೊಲೀಸ್ ಬಲದ ಮೂಲಕ ಪ್ರತಿಭಟನೆಗಳನ್ನು ಬಗ್ಗು ಬಡಿದವು. ಅದಕ್ಕೂ ಬಗ್ಗದಿದ್ದಾಗ ಹಿಂಸೆಯ ಮಾರ್ಗ ಅನುಸರಿಸಿದವು. ಇಂಥ ಕ್ರೂರ ನೆರಳಲ್ಲಿ ಬದುಕು ಕಟ್ಟಲಾಗದ ಅನೇಕ ರೈತರು ಕೊನೆಗೆ ಕಬ್ಬು ಬೆಳೆಗೇ ಗುಡ್ ಬೈ ಹೇಳಿದ್ದಾರೆ. ಸಾಲದ ಶೂಲಕ್ಕೆ ಹೆದರಿ ಕಳೆದ ವರ್ಷ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೇ ರೀತಿ ಕಳೆದ ಎಂಟು ವರ್ಷಗಳಿಂದ ಕಬ್ಬು ಬೆಳೆಗಾರರನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಇವತ್ತು ದೇಶ ಸಕ್ಕರೆ ಕೊರತೆ ಎದುರಿಸಬೇಕಾಗಿದೆ. ದೇಶದಲ್ಲಿ ಸರಕಾರದ ಪರವಾನಗಿ ಪಡೆದ ೫೬೬ ಕಾರ್ಖಾನೆಗಳಿವೆ. ಅವುಗಳಲ್ಲಿ ೫೪೩ ಚಾಲ್ತಿಯಲ್ಲಿದ್ದು ಅದರಲ್ಲಿ ಶೇ. ೪೦ ಖಾಸಗಿ ಒಡೆತನದಲ್ಲಿವೆ. ಉಳಿದವು ಸಹಕಾರಿ. ಪ್ರಪಂಚದ ಶೇ. ೨೦ರಷ್ಟು ಸಕ್ಕರೆ ಮಿಲ್ಲುಗಳನ್ನು ಭಾರತ ಹೊಂದಿದ್ದು ಅವು ಎರಡು ವರ್ಷದ ಹಿಂದೆ ವಿಶ್ವದ ಶೇ. ೧೫ರಷ್ಟು ಸಕ್ಕರೆ ಉತ್ಪಾದಿಸುತ್ತಿದ್ದವು. ಈಗ ಉತ್ಪಾದನಾ ಪ್ರಮಾಣ ಕಳೆದ ನಾಲ್ಕು ವರ್ಷದಲ್ಲೇ ಅತ್ಯಂತ ಕಡಿಮೆಯಾಗಿದೆ. ಆದ್ದರಿಂದ ನಾವು ಸಕ್ಕರೆಗಾಗಿ ಬ್ರೆಜಿಲ್, ರಷ್ಯಾ, ಕ್ಯೂಬಾದತ್ತ ನೋಡಬೇಕಾಗಿದೆ. ಅಲ್ಲಿಂದ ಆಮದು ಮಾಡಿಕೊಂಡರೂ ಕಡಿಮೆ ಬೆಲೆಗೆ ಸಕ್ಕರೆ ದೊರೆಯುವುದು ಅಸಾಧ್ಯ.
ಈಗ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ ೨೨ಮತ್ತು ೨೩ ರೂ.ಇದೆ. ಅದು ಅಕ್ಟೋಬರ್ ವೇಳೆಗೆ ೩೦ ರೂ. ದಾಟಬಹುದು ಎನ್ನಲಾಗುತ್ತಿದೆ. ಇದರ ಫಲ ರೈತರಿಗಂತೂ ಸಿಗುವುದಿಲ್ಲ.
ಕರ್ನಾಟಕ ಮತ್ತು ಸುತ್ತಮುತ್ತ
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ೨೦೦೭ರಲ್ಲಿ ಕರ್ನಾಟಕದಲ್ಲಿ ನಾಲ್ಕು ಕೋಟಿ ಟನ್ ಕಬ್ಬು ಬೆಳೆಯಲಾಗಿತ್ತು. ೨೦೦೮-೦೯ಕ್ಕೆ ಅದು ಮೂರು ಕೋಟಿ ಟನ್‌ಗೆ ಇಳಿಯಿತು. ೨೦೦೯-೧೦ಕ್ಕೆ ಅದು ೨ ಕೋಟಿ ೭೦ ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಗಳಿವೆ. ಇದು ಕರ್ನಾಟಕದ ಸ್ಥಿತಿ ಮಾತ್ರವಲ್ಲ ಕಬ್ಬು ಬೆಳೆಯುವ ಎಲ್ಲ ರಾಜ್ಯಗಳಲ್ಲೂ ಪರಿಸ್ಥಿತಿ ಬೇರೆಯಾಗಿಲ್ಲ. ಇದೆಲ್ಲಕ್ಕೂ ಸರಕಾರಗಳ ನೀತಿಗಳೇ ಕಾರಣ ಎನ್ನದೇ ಬೇರೆ ದಾರಿಯೇ ಉಳಿದಿಲ್ಲ. ಬೆಂಬಲ ಬೆಲೆ ಸಿಗದೆ, ಬೆಳೆದ ಕಬ್ಬನ್ನು ಅರೆಸಲಾಗದೆ ಅನೇಕ ಕಡೆ ರೈತರು ಹೊಲದಲ್ಲೇ ಬಿಟ್ಟು ಬೆಂಕಿ ಹಚ್ಚಿದರು. ಹತಾಶರಾದ ಅನೇಕರು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯ ಮಾಡಿಕೊಂಡರು. ಕೊನೆಗೆ ಬೆಳೆಯುವುದನ್ನೇ ನಿಲ್ಲಿಸಿದರು. ಗಡ್ಡಕ್ಕೆ ಬೆಂಕಿಬಿದ್ದಾಗ ಬಾವಿ ತೋಡಿದರು ಎನ್ನುವಂತೆ ಕಾರ್ಖಾನೆ ಮಾಲೀಕರನ್ನು ಕಬ್ಬು ಅರೆಯಲು ಆದೇಶ ನೀಡಲಾಗದ ನರಸತ್ತ ಸರಕಾರಗಳು ಈಗ ಬಡಬಡಿಸತೊಡಗಿವೆ. ಅಲ್ಲದೆ ಅನೇಕ ಕಾರ್ಖಾನೆಗಳು ಕಬ್ಬು ಅರೆದು ತಿಂದಿದ್ದು, ರೈತರಿಗೆ ಬಾಕಿ ಹಣ ಪಾವತಿಸಿಲ್ಲ. ಅದನ್ನೂ ಕೊಡಿಸಲಾಗದಷ್ಟು ಸರಕಾರಗಳು ನಿರ್ವಿರ್ಯವಾಗಿವೆ.
೨೦೦೯ರ ಆರಂಭದಲ್ಲೇ ಸಕ್ಕರೆ ಅಭಾವದ ಮುನ್ಸೂಚನೆ ದೊರೆತರೂ ಸರಕಾರ ಇದನ್ನು ಬಾಯಿಬಿಡಲಿಲ್ಲ. ಕಾರಣ ಚುನಾವಣೆ ಘೋಷಣೆಯಾಗುವ ಸೂಚನೆಗಳಿದ್ದುದರಿಂದ ಎಲ್ಲವನ್ನೂ ಮುಚ್ಚಿಡಲಾಯಿತು. ಈಗ ಅದು ಬಯಲಾಗಿದೆ. ಇದಕ್ಕೆ ಪರಿಹಾರವೊಂದೇ. ದೇಶದಲ್ಲಿ ಕಬ್ಬು ಬೆಳೆಯನ್ನು ಪ್ರೋತ್ಸಾಹಿಸುವುದು.

ನಮ್ಮ ಕೃಷಿ ಕ್ಷೇತ್ರ ಆ(ಹಾ)ಳುತ್ತಿವೆ ಬೀಜ ಕಂಪೆನಿಗಳು

ಸರಕಾರಿ ಬೀಜಗಳು ಶೇ. ೯೦ರಷ್ಟು ಹಾಗೇ ನಿಗಮಕ್ಕೆ ಹಿಂತಿರುಗುತ್ತವೆ. ಸರಕಾರಿ ಬೀಜಗಳು ಇದ್ದರೂ ಇಲ್ಲ ಎಂದು ರೈತರನ್ನು ವಾಪಸ್ ಕಳಿಸಿದ ನೂರಾರು ಉದಾಹರಣೆಗಳಿವೆಯಂತೆ. ರಾಜ್ಯದಲ್ಲಿ ೬೦ಕ್ಕೂ ಹೆಚ್ಚು ಕಂಪನಿಗಳು ರೈತರಿಗೆ ಬಿತ್ತನೆ ಬೀಜ ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿವೆ. ಅವೆಲ್ಲ ತಮ್ಮ ಕಂಪನಿ ಬೀಜಗಳನ್ನು ಮಾರಿಕೊಳ್ಳುತ್ತಿವೆ. ಇದರಿಂದ ಇಂದು ಶೇಕಡಾ ಐದರಷ್ಟು ಮಾತ್ರ ದೇಶಿ ಬೀಜಗಳ ಬಳಕೆಯಾಗುತ್ತಿದೆ. ಖಾಸಗಿಯವರ ಹಾವಳಿಯಿಂದ ಸರಕಾರದ ಗೋದಾಮುಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜ ಹಾಗೇ ಕೊಳೆಯುತ್ತಿದೆ.

ಬಿತ್ತನೆ ಬೀಜ ಎನ್ನುವುದು ರೈತ ಸಮುದಾಯಕ್ಕೆ ಈಗ ಆಯ್ಕೆಯಾಗಿ ಉಳಿದಿಲ್ಲ. ಕಾರಣ ಹೆಚ್ಚು ಇಳುವರಿ, ಹೆಚ್ಚು ಲಾಭದ ಹೆಸರಿನಲ್ಲಿ ಖಾಸಗಿ ಕಂಪನಿಗಳು ಅವರನ್ನು ಮೋಸ ಮಾಡುವುದರ ಜತೆಗೆ ಅವರ ಆಯ್ಕೆಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿವೆ. ಮುಂಗಾರು ಆರಂಭವಾದಾಗ ಸಂಭ್ರಮಿಸುತ್ತಿದ್ದ ರೈತರು ಈಗ ಸಂಕಟ ಪಡುತ್ತಿದ್ದಾರೆ ಕಾರಣ, ಬಿತ್ತನೆ ಬೀಜ, ಗೊಬ್ಬರ! ಬಿತ್ತಿ ಬೆಳೆದು ಅನ್ನ ನೀಡುತ್ತೇವೆ. ಬೀಜ ಕೊಡಿ, ಗೊಬ್ಬರ ಕೊಡಿ ಎಂದು ಕೇಳಲು ಹೋದ ರೈತರ ಮೇಲೆ ಗೋಲಿಬಾರ್ ಮಾಡಿದ್ದು ಭಾರತದ ಕೃಷಿ ಕ್ಷೇತ್ರದ ದುರಂತ.
ತಮ್ಮ ಹೊಲದಲ್ಲಿ ಬೆಳೆದ ಬೆಳೆಯಿಂದ ಬೀಜ ಹಿಡಿದಿಟ್ಟುಕೊಂಡು ಅದರಿಂದ ಸಮೃದ್ಧ ಕೃಷಿ ಮಾಡುತ್ತಿದ್ದ ರೈತ ಸಮುದಾಯ ಇಂದು ಖಾಸಗಿ ಬೀಜ ಕಂಪನಿಗಳ ಬಾಗಿಲ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಬೀಜ ಕಂಪನಿಗಳ ಹಂಗಿನಿಂದ, ಸರಕಾರದ ಮುಲಾಜುಗಳಿಂದ ರೈತರು ಹೊರಬರಬೇಕಾದರೆ ಪಾರಂಪರಿಕ ಕೃಷಿಯತ್ತ ಗಮನಹರಿಸಬೇಕಾಗಿರುವುದು ಈ ಹೊತ್ತಿನ ತುರ್ತು ಅಗತ್ಯ. ಬಹುರಾಷ್ಟ್ರೀಯ ಬೀಜ ಕಂಪನಿಗಳ ಹಸ್ತಕ್ಷೇಪದಿಂದಾಗಿ ಇವತ್ತು ಇಡೀ ಕೃಷಿ ಕ್ಷೇತ್ರ ಅತಂತ್ರ ಸ್ಥಿತಿ ತಲುಪಿದೆ. ಹೀಗೆ ಅತಂತ್ರಸೃಷ್ಟಿಸಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳುವುದೇ ಈ ಕಂಪೆನಿಗಳ ಹುನ್ನಾರ. ಹಸಿರು ಕ್ರಾಂತಿಯ ಹೆಸರಿನಲ್ಲಿ ಕಳೆದ ಮೂರೂವರೆ ದಶಕದಿಂದ ಭೂಮಿಗೆ ಸುರಿದ ಅಪಾರ ಪ್ರಮಾಣದ ಗೊಬ್ಬರ ಮತ್ತು ಕೀಟನಾಶಕಗಳಿಂದಾಗಿ ಅನ್ನಬೆಳೆಯುವ ಭೂಮಿಯೇ ವಿಷವಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಆಯ್ಕೆಗಳೂ ಕೂಡಾ ತುಂಬ ಸಂಕೀರ್ಣಗೊಂಡಿವೆ. ದೇಶದ ಜನಸಂಖ್ಯೆ ಏರುಗತಿಯಲ್ಲಿದ್ದಾಗ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಕೈಗೊಂಡ ನಿರ್ಧಾರಗಳು ಈಗ ವ್ಯತಿರಿಕ್ತ ಪರಿಣಾಮ ಬೀರತೊಡಗಿವೆ. ಜಾಗತೀಕರಣದ ದಿಡ್ಡಿಬಾಗಿಲು ತೆರೆದ ನಂತರವಂತೂ ಕೃಷಿ ಕ್ಷೇತ್ರ ಮಾಡು ಇಲ್ಲವೆ ಮಡಿ ಎನ್ನುವ ಹಂತಕ್ಕೆ ಬಂದು ನಿಂತಿವೆ.
ಆರಂಭದಲ್ಲಿ ದೊರೆತ ಇಳುವರಿ ಈಗ ಇಲ್ಲವಾಗಿದೆ, ರಾಸಾಯನಿಕ ಗೊಬ್ಬರಹಾಕದೇ ಭೂಮಿ ಬೆಳೆಯುತ್ತಿಲ್ಲ ಎಂಬ ಧ್ವನಿ ಈಗ ರೈತ ಸಮುದಾಯದಿಂದ ಕೇಳಿಬರತೊಡಗಿದೆ. ಆಳುವವರು ಇದನ್ನು ಅರ್ಥಮಾಡಿಕೊಂಡು ಸಹಜ ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕಾಗಿದೆ. ಅದನ್ನೊಂದು ಆಂದೋಲನದ ಮಾದರಿಯಲ್ಲಿ ಮಾಡಿದರೆ ಮಾತ್ರ ಕೃಷಿಕ್ಷೇತ್ರವನ್ನು ಖಾಸಗಿ ದಲ್ಲಾಳಿಗಳ ಹಿಡಿತದಿಂದ ಪಾರುಮಾಡಬಹುದು. ಸಾವಯವ ಅಥವಾ ಸಹಜ ಕೃಷಿಯತ್ತ ಸಾಗುವುದು ಎಂದರೆ ಭಾರತದ ನೆಲಮೂಲ ಸಂಸ್ಕೃತಿಯನ್ನು ಸಂರಕ್ಷಿಸುವುದೆ ಆಗಿದೆ. ಇದರಿಂದ ಕೃಷಿ ಪರಂಪರೆಯನ್ನು ಕಾಯ್ದುಕೊಳ್ಳುವುದರ ಜತೆಗೆ ಅದನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು. ಇದರಲ್ಲಿ ಮಣ್ಣಿನ ಆರೋಗ್ಯ ಕಾಯುವ ಕೈಂಕರ್ಯ ಮಾತ್ರವಿಲ್ಲ, ದೇಶದ ನಾಗರಿಕರ ಆರೋಗ್ಯ ಕಾಪಾಡುವ ಮಹತ್ತರ ಜವಾಬ್ದಾರಿಯೂ ಇದೆ.
ಸಮಸ್ಯೆಯ ಆಳ ಅಗಲಗಳನ್ನು ಅರಿತು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲಾಗದ ನಮ್ಮ ಆಡಳಿತ ವ್ಯವಸ್ಥೆ ಅದನ್ನು ಬರಿದೇ ಮುಂದೊತ್ತಲು ತೊಡಗುತ್ತದೆ. ಅದರ ಒಂದು ಭಾಗವೇ ಖಾಸಗೀಕರಣ. ಆಹಾರ ಸಾರ್ವಭೌಮತ್ವದ ಹೆಸರಿನಲ್ಲಿ ದೇಶ ಪ್ರವೇಶ ಮಾಡಿದ ಖಾಸಗಿ ಬೀಜ ಮತ್ತು ಗೊಬ್ಬರ ಕಂಪನಿಗಳು ಇಂದು ಇಡೀ ಕೃಷಿ ಕ್ಷೇತ್ರವನ್ನು ಆ(ಹಾ)ಳತೊಡಗಿವೆ ಎಂದರೆ ದುಬಾರಿ ಮಾತಾಗಲಾರದು. ದೇಶ ಆಹಾರ ಸಾರ್ವಭೌಮತ್ವ ಕಾಪಾಡುವ ಜವಾಬ್ದಾರಿ ಹೊತ್ತಾಗಲೇ ಬೀಜ ಸ್ವಾತಂತ್ರ್ಯಮತ್ತು ರಕ್ಷಣೆಯ ಕಡೆಗೂ ಗಮನನೀಡಬೇಕಾಗಿತ್ತು. ಅಂಥ ಕ್ರಮಗಳನ್ನು ಕೈಗೊಳ್ಳದ ಕಾರಣ ಬಹುರಾಷ್ಟ್ರೀಯ ಕಂಪೆನಿ ಬೀಜಗಳು ಇಂದು ನಮ್ಮ ಪಾರಂಪರಿಕ ಕೃಷಿ ಪದ್ಧತಿಯನ್ನು ಮಾತ್ರವಲ್ಲ ರೈತ ಸಮುದಾಯದ ಸ್ವಾಭಿಮಾನವನ್ನೇ ನಾಶ ಮಾಡಲು ಮುಂದಾಗಿವೆ.
ಕಳೆದ ಹತ್ತು ವರ್ಷಗಳಿಂದೀಚೆಗೆ ಬೀಜ ಕಂಪನಿಗಳು ಮಾಡಿದ ಮೋಸಕ್ಕೆ ಲೆಕ್ಕವೇ ಇಲ್ಲ. ಆದರೂ ನಮ್ಮ ಜನನಾಯಕರೆನಿಸಿಕೊಂಡವರಿಗೆ, ರೈತರ ಪರವಾಗಿ ಉದ್ದುದ್ದ ಭಾಷಣ ಮಾಡುವವರಿಗೆ ಇಂಥ ವಿಚಾರಗಳು ತಿಳಿಯುವುದೇ ಇಲ್ಲ. ಆದ್ದರಿಂದಲೇ ಎಲ್ಲ ಸವಲತ್ತುಗಳನ್ನು ‘ಖಾಸಗಿ ಯಜಮಾನರ’ ಕೈಗೆ ನೀಡಲು ಮುಂದಾಗಿದ್ದಾರೆ. ಈಗ ಖಾಸಗಿ ಕಂಪನಿಗಳ ಬಿತ್ತನೆ ಬೀಜಗಳನ್ನು ಕರ್ನಾಟಕ ಬೀಜ ನಿಗಮದ ಕಚೇರಿಯಲ್ಲೇ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಸ್ಥಾಪಿಸಿರುವ ೩೦ ಕೇಂದ್ರಗಳಲ್ಲೂ ಖಾಸಗಿ ಕಂಪನಿಗಳು ಬೀಜಗಳನ್ನು ಮಾರಾಟ ಮಾಡಬಹುದು. ಅಂದರೆ ಖಾಸಗೀಕರಣ ಕೃಷಿ ಕ್ಷೇತ್ರವನ್ನು ಮಾತ್ರ ಪ್ರವೇಶ ಮಾಡಿಲ್ಲ. ಆ ಮೂಲಕ ಸರಕಾರದಲ್ಲೂ ಪ್ರವೇಶ ಮಾಡಿದೆ ಎಂದಾಯಿತು!
‘ಆಡಳಿತದಲ್ಲಿರುವವರು ಒಂದಲ್ಲ ಒಂದು ಕಾರಣಕ್ಕೆ ಖಾಸಗಿ ಬೀಜ ಕಂಪನಿಗಳ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ, ೧೯೯೫ರಿಂದ ಈಚೆಗೆ ಇದು ಹೆಚ್ಚಿದೆ. ಅವರ ಕುಮ್ಮಕ್ಕಿನಿಂದಲೇ ಬೀಜ ಮಾರುವವರು ಕೊಬ್ಬಿದ್ದಾರೆ. ಆಡಳಿತ ವ್ಯವಸ್ಥೆ ಸುಧಾರಣೆಯಾಗಬೇಕು, ಆಯಾ ಕ್ಷೇತ್ರದಲ್ಲಿ ಅನುಭವವಿರುವವರು ಮಂತ್ರಿಗಳಾಗಬೇಕು. ಆದರೆ ಈಗ ಹಾಗಾಗುತ್ತಿಲ್ಲ. ಹಣವಿದ್ದವರು ಏನುಬೇಕಾದರೂ ಆಗಬಹುದು ಎಂಬ ವಾತಾವರಣವಿದೆ, ಇದು ಬದಲಾಗಬೇಕು. ಇಲ್ಲಿ ಅಕಾರಿಗಳನ್ನು ದೂರುವುದರಲ್ಲಿ ಅರ್ಥವಿಲ್ಲ. ತಲೆಗೆ ನೀರು ಹಾಕಿದರೆ ಅದು ತಾನಾಗಿಯೇ ಕಾಲಿಗಿಳಿಯುತ್ತದೆ ಆದರೆ ಈಗ ಕಾಲಿಗೆ ನೀರು ಹಾಕಿ ತಲೆಗೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂಥ ಯತ್ನಗಳು ಫಲ ನೀಡುವುದಿಲ್ಲ ಹಾಗೆ ಮಾಡಿದರೆ ಕೊಳೆ ತೆಗೆದಂತಾಗುವುದಿಲ್ಲ ಬದಲಿಗೆ ಧೂಳು ಬರೀ ಧೂಳು ಕೊಡವಿದಂತಾಗುತ್ತದೆ ಅಷ್ಟೇ’ ಎಂದು ಹೆಸರು ಹೇಳಲಿಚ್ಛಿಸದ ಸರಕಾರಿ ಅಕಾರಿಯೊಬ್ಬರು ಹೇಳಿದರು. ಅವರ ಮಾತು ನಿಜ. ಇನ್ನೊಂದು ವಿಚಾರ ಎಂದರೆ ರಾಜ್ಯ ಬೀಜ ನಿಗಮದ ಕಚೇರಿಯಲ್ಲೇ ಖಾಸಗಿ ಕಂಪನಿ ಬೀಜಗಳನ್ನೂ ಮಾರಲಾಗುತ್ತದೆ ಮಾರಾಟಕ್ಕೆ ಕಳಿಸಿದ ಸರಕಾರಿ ಬೀಜಗಳು ಶೇ. ೯೦ರಷ್ಟು ಹಾಗೇ ಹಿಂತಿರುಗುತ್ತವೆ. ಅಲ್ಲಿ ಖಾಸಗಿ ಬೀಜಗಳು ಮಾತ್ರ ಮಾರಾಟವಾಗುತ್ತವೆ. ಅಕಸ್ಮಾತ್ ಸರಕಾರಿ ಬೀಜಗಳು ಇದ್ದರೂ ಇಲ್ಲ ಎಂದು ರೈತರನ್ನು ವಾಪಸ್ ಕಳಿಸಿದ ನೂರಾರು ಉದಾಹರಣೆಗಳಿವೆಯಂತೆ. ರಾಜ್ಯದಲ್ಲಿ ೬೦ಕ್ಕೂ ಹೆಚ್ಚು ಕಂಪನಿಗಳು ರೈತರಿಗೆ ಬಿತ್ತನೆ ಬೀಜ ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿವೆ. ಅವೆಲ್ಲ ತಮ್ಮ ಕಂಪನಿ ಬೀಜಗಳನ್ನು ಮಾರಿಕೊಳ್ಳುತ್ತಿವೆ. ಇದರಿಂದ ಇಂದು ಶೇಕಡಾ ಐದರಷ್ಟು ಮಾತ್ರ ದೇಶಿ ಬೀಜಗಳ ಬಳಕೆಯಾಗುತ್ತಿದೆ. ಖಾಸಗಿಯವರ ಹಾವಳಿಯಿಂದ ಸರಕಾರದ ಗೋದಾಮುಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜ ಹಾಗೇ ಕೊಳೆಯುತ್ತಿದೆ.
ಕಂಪನಿಗಳ ಇಂಥ ಮೋಸದ ವಿಚಾರಗಳನ್ನು ಬಹಳ ಮೊದಲೇ ಅರ್ಥ ಮಾಡಿಕೊಂಡ ಜಾಂಬಿಯಾ, ಜಿಂಬಾಬ್ವೆ, ಇಂಡೋನೇಷ್ಯಾದಂಥ ಸಣ್ಣ ದೇಶಗಳು ಹತ್ತು ವರ್ಷಗಳ ಹಿಂದೆಯೇ ಬಿ.ಟಿ. (ಬ್ಯಾಸಿಲ್ಲಸ್ ತುರಿಂಜೆನಿಸಿಸ್) ಬೀಜಗಳಿಗೆ ವಿದಾಯಹೇಳಿದ್ದವು. ಅದಕ್ಕೂ ಮೊದಲು ಐದಾರು ವರ್ಷ ಈ ಬೀಜಗಳನ್ನು ಬಳಸಿದ್ದರಿಂದ ಭೂಮಿಯ ಫಲವತ್ತತೆಯ ಮೇಲೆ ಬೀರಿದ್ದ ಅಡ್ಡ ಪರಿಣಾಮಗಳನ್ನು ಮನಗಂಡು ಅಲ್ಲಿನ ರೈತರು ಈ ನಿರ್ಧಾರಕ್ಕೆ ಬಂದಿದ್ದರು. ನಂತರ ರೈತರು ಸ್ಥಳೀಯವಾಗಿ ತಾವೇ ಸಿದ್ಧಪಡಿಸಿಕೊಂಡ ಬೀಜದಿಂದ ಸಮೃದ್ಧ ಕೃಷಿ ಮಾಡಿದ್ದರಿಂದ ಆ ದೇಶಗಳಲ್ಲಿ ಕಂಪನಿ ಬೀಜಗಳಿಗೆ ಬಹುತೇಕ ಪೂರ್ಣ ವಿರಾಮ ಬೀಳತೊಡಗಿದೆ. ಈಗ ಉತ್ತರ ಅಮೆರಿಕದ ವೆನಿಜುವೆಲಾ, ಬೊಲಿವಿಯಾ, ಪೆರು ಮುಂತಾದ ಸಣ್ಣ ದೇಶಗಳೂ ಇದೇ ದಾರಿಯಲ್ಲಿ ಸಾಗುತ್ತಿವೆ. ಅಲ್ಲಿನ ಸರಕಾರಗಳೂ ಕೂಡ ರೈತರ ಈ ನಿರ್ಧಾರಗಳನ್ನು ಬೆಂಬಲಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಅಕಾರದ ಚುಕ್ಕಾಣಿ ಹಿಡಿದವರು ಬಹುರಾಷ್ಟ್ರೀಯ ಕಂಪನಿಗಳ ಬಾಲಂಗೋಚಿಗಳಾಗುತ್ತಿರುವುದು ಮತ್ತು ಸಮಸ್ಯೆಯ ಬಗ್ಗೆ ಸ್ಪಷ್ಟ ಅರಿವಿಲ್ಲದವರು ಪ್ರಮುಖ ಸ್ಥಾನಗಳಲ್ಲಿ ಕೂರುತ್ತಿರುವುದರಿಂದ ಪರಿಹಾರ ಕಷ್ಟಸಾಧ್ಯವಾಗಿದೆ.
ಬೀಜ ವಾಮಾಚಾರದ ಇನ್ನೊಂದು ಮುಖವೇ ಕುಲಾಂತರಿ ತಂತ್ರeನ! ಇದು ಮನುಷ್ಯನನ್ನು ನಿಂತ ಜಾಗದಲ್ಲೇ ರಾಕ್ಷಸನನ್ನಾಗಿಸುವ ಯತ್ನ. ಬೇರೆ ಜೀವಿಯ ವಂಶವಾಹಿ ಜೀನು ಬಳಸಿ ತಯಾರಿಸುವ ಈ ಕುಲಾಂತರಿ ತಂತ್ರeನದಿಂದ ಇಡೀ ಮಾನವ ಕುಲವೇ ಅತಂತ್ರವಾಗುವ ಹಾಗಾಗಿದೆ. ಮೈಮೇಲೆ ಪಟ್ಟಿ ಇದ್ದರೆ ಹೇಸರುಗತ್ತೆ ಇಲ್ಲದೆ ಇದ್ದರೆ ಕತ್ತೆ ಎಂದು ಹೇಗೆ ವಿಂಗಡಿಸಿ ಹೇಳಬಹುದೋ ಹಾಗೆಯೇ ಕುಲಾಂತರಿ ತಳಿ ಕೂಡ. ಈ ಆಹಾರದಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆದು ಅವು ಇದನ್ನು ‘ಕುಲಗೆಟ್ಟ ತಂತ್ರeನ’ಎಂದು ಹೇಳಿವೆ. ಇದರ ಸಂಶೋಧನೆ ಅನಿವಾರ್ಯವಲ್ಲ ಎಂದು ಯೂರೋಪಿನ ಒಕ್ಕೂಟ ಮುಂದೂಡಿದೆ. ಆದರೂ ಕಂಪನಿಗಳು ಮಾತ್ರ ಇದರಿಂದ ಹಿಂದೆ ಸರಿಯುತ್ತಿಲ್ಲ. ಬದನೆಕಾಯಿ ಗಿಡದ ಬೇರಿನಲ್ಲೆ ಆಲೂಗಡ್ಡೆ ಬೆಳೆಯಬಹುದು ಎಂಬ ಯೋಚನೆಯನ್ನೂ ಮಾಡಲಾಗಿತ್ತಂತೆ! ಆದರೆ ಯಾಕೋ ಅದು ಫಲ ಕೊಡಲಿಲ್ಲ ಎಂದು ತೆಪ್ಪಗಾಗಿರಬಹುದು. ಮಾವಿನ ಮರದಲ್ಲೇ ತೆಂಗಿನಕಾಯಿ ಬಿಡುವ ತಂತ್ರ ಕಂಡುಹಿಡಿದರೆ ನಾವು ‘ಮಾತೆಂಗಿನಕಾಯಿ’ ತಿನ್ನಬಹುದು!
ಕುಲಾಂತರಿ ತಂತ್ರeನ ಕುರಿತು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಇತ್ತೀಚೆಗೆ ‘My right to safe food' ‘ಸುರಕ್ಷಿತ ಆಹಾರ ನನ್ನ ಹಕ್ಕು’ ಸಾಕ್ಷ್ಯ ಚಿತ್ರದಲ್ಲಿ ನಾಡಿನ ಖ್ಯಾತ ಆಹಾರ ನೀತಿಜ್ಞ ದೇವಿಂದರ್ ಶರ್ಮ, ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕುಲಾಂತರಿ ಆಹಾದದಿಂದ ಆಗಬಹುದಾದ ಅನಾಹುತಗಳನ್ನು ವಿವರಿಸಿದ್ದಾರೆ. ಶ್ರೀ ಶ್ರೀಯವರಂತೂ ಇದನ್ನು ಜೈವಿಕ ಭಯೋತ್ಪಾದನೆ (Bio terrorism) ಎಂದು ತೀಕ್ಷ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಹೀಗೆ ನಾಡಿನ ಚಿಂತಕರಿಂದ, ಕೃಷಿಕರಿಂದ ತಿರಸ್ಕೃತಗೊಂಡ ತಂತ್ರeನ ದೇಶದಿಂದ ತೊಲಗುತ್ತಿಲ್ಲ ವೇಕೆ ಎನ್ನುವುದೇ ಆಶ್ಚರ್ಯಕರ ಸಂಗತಿ.

‘ಮಠಾಧೀಶ’ರನ್ನು ಒಲಿಸಿಕೊಳ್ಳುವ ಹೊಸ ಪರಿ

ಈಗ ನಾವು ಮಾಧ್ಯಮಗಳ ಯುಗದಲ್ಲಿದ್ದೇವೆ. ಜ್ಞಾನ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದು ಎನ್ನಲಾಗುತ್ತಿದ್ದರೂ ಅವು ಅಜ್ಞಾನವನ್ನೂ ಪ್ರಚಾರ ಮಾಡುತ್ತಿವೆ ಎನ್ನುವ ಎಚ್ಚರ ಈಗಿನ ಅನಿವಾರ್ಯ. ದಿನದಿಂದ ದಿನಕ್ಕೆ ಮಾಧ್ಯಮ ಲೋಕ ಬೆಳೆದಂತೆ ಪೈಪೋಟಿಯೂ ತೀವ್ರಗೊಳ್ಳುತ್ತಿದೆ. ಈಗ ಅವುಗಳು ಯಾವ ಮಟ್ಟಕ್ಕೆ ಬಂದು ನಿಂತಿವೆ ಎಂದರೆ ದೆವ್ವ-ಭೂತ-ಪಿಶಾಚಿ-ದೇವರು, ಅವುಗಳ ಶಕ್ತಿ ಮುಂತಾದ ವಿಚಾರಗಳನ್ನು ಪ್ರಚುರ ಪಡಿಸುತ್ತ ಇಡೀ ಸಮಾಜವನ್ನು ಮೌಢ್ಯದ ಕಟಕಟೆಯಲ್ಲಿ ನಿಲ್ಲಿಸತೊಡಗಿವೆ. ಈ ಕಲ್ಲಿನಲ್ಲಿ ಅದೆಂಥ ಅದ್ಭುತ ಶಕ್ತಿ ಇದೆ ಎಂದರೆ.... ಈ ಮಣ್ಣಿನಲ್ಲಿ ವಿಚಿತ್ರವಾದ ಶಕ್ತಿ ಇದೆ, ಅಗೋಚರ ದಿಬ್ಬ.... ಎಂದು ಹೇಳುತ್ತ ಮುಗ್ಧ ಜನರ ನಂಬಿಕೆಗಳನ್ನು ಪಲ್ಲಟಗೊಳಿಸುತ್ತಿವೆ. ಇದರಿಂದ ಜನರಲ್ಲಿ ಸತ್ಯ ಮತ್ತು ಅಸತ್ಯದ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ಅಲ್ಲದೆ ಜನರು ಸ್ವಶಕ್ತಿಯಮೇಲೆ ನಂಬಿಕೆ ಕಳೆದುಕೊಂಡು ಅಗೋಚರ ಶಕ್ತಿಯನ್ನು ಮಾತ್ರ ನಂಬುವಂತೆ ಮಾಡತೊಡಗಿವೆ. ಈ ಮಣ್ಣಿನ ಪ್ರತಿ ಕಣದಲ್ಲೂ ವಿಶೇಷ ಶಕ್ತಿ ಇದೆ ಎಂಬ ನಂಬಿಕೆಯನ್ನು ದಾಸರು, ಶರಣರು ಬಹಳ ಹಿಂದೆಯೇ ಹೇಳಿದ್ದಾರೆ. ಏಕಲವ್ಯ ಮಾಡಿಟ್ಟುಕೊಂಡಿದ್ದ ದ್ರೋಣರ ಮಣ್ಣಿನ ಮೂರ್ತಿಗೆ ಅದ್ಯಾವ ಶಕ್ತಿ ಇತ್ತು? ಪ್ರಹ್ಲಾದ ತೋರಿಸಿದ ಕಂಬದಲ್ಲೇ ಉಗ್ರ ನರಸಿಂಹ ಹೇಗೆ ಬಂದ? ಪುರಾಣದ ಇಂಥ ನೂರಾರು ನಿದರ್ಶನಗಳು ನಮ್ಮ ಮುಂದಿವೆ. ‘ನಂಬಿದರೆ ಇಂಬಾಗು, ನಂಬಿ ಕರೆದರೆ ಓ ಎನ್ನನೇ ಶಿವನು ಎಂದಿದ್ದರು ವಚನಕಾರರು. ನಂಬಿ ಕೆಟ್ಟವರಿಲ್ಲವೋ ಎಂದರು ದಾಸರು. ಯಾವುದು ನಮ್ಮ ಆಚರಣೆಯೋ ಅದೇ ನಮಗೆ ಪ್ರಿಯವಾಗಿ, ಅದೇ ನಂಬಿಕೆಯೂ ಆಗುತ್ತದೆ. ಆಗ ಘಟಿಸುವ ಘಟನೆಗಳು ನಂಬಿಕೆಗಳ ಮೇಲೆ ಪರಿಣಾಮ ಬೀರುವುದರಿಂದ ಅದರ ಮೇಲೆ ನಂಬಿಕೆಗಳು ಹೆಚ್ಚುತ್ತಾ ಹೋಗುತ್ತವೆ. ಇದು ಶ್ರದ್ಧೆ, ಭಕ್ತಿ, ನಂಬಿಕೆಗಳ ಮಿಳಿತವಷ್ಟೆ. ಇದನ್ನೆ ವಿಚಿತ್ರವೆಂದು ಇಡೀ ಸಮಾಜವನ್ನು ಮೌಢ್ಯದಲ್ಲಿ ಕೊಂಡೊಯ್ಯಲು ಮಾಧ್ಯಮಗಳು ಮುಂದಾಗಿರುವುದು ನಾಚಿಕೆಗೇಡಿನ ಕೃತ್ಯವಲ್ಲದೆ ಬೇರೇನೂ ಅಲ್ಲ.
ಇಂಥ ಕಟ್ಟುಕಥೆಗಳನ್ನು ನಂಬುವ ಮೂಢ ರಾಜಕಾರಣಿಗಳ ಸಂಖ್ಯೆಯೂ ಕಡಿಮೆ ಇಲ್ಲ. ಇವರ ಮೌಢ್ಯದ ಫಲ ಪಡೆಯಲು ಜೋತಿಷಿಗಳಸಂಖ್ಯೆಯಂತೂ ದ್ವಿಗುಣಗೊಳ್ಳತೊಡಗಿದೆ. ಇದರಿಂದ ಸ್ವ ಶಕ್ತಿಯಮೇಲೆ ನಂಬಿಕೆಗಳು ಮಾಯವಾಗಿ ಅಗೋಚರ ಶಕ್ತಿಯನ್ನೇ ನಂಬುವ ವರ್ಗವೇ ಸೃಷ್ಟಿಯಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲೋಕಸಭೆ ಚುನವಣೆ ಸ್ಪರ್ಧೆಗೆ ಟಿಕೆಟ್ ಬೇಕಾದವರು ಜ್ಯೋತಿಷಿಗಳಿಂದ ಸರ್ಟಿಫಿಕೇಟ್ ತರುವುದು ಕಡ್ಡಾಯ ಎಂದು ಜಾ. ದಳದ ನಾಯಕರು ಫರ್ಮಾನು ಹೊರಡಿಸಿದ್ದರು. ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷದಿಂದ ಚುನಾವಣೆ ಟಿಕೆಟ್ ಬೇಕಾದವರು ಜನ್ಮಕುಂಡಲಿಯೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿತ್ತು. ಇದು ಕುಂಡಲಿ ಮತ್ತು ಕಮಂಡಲದ ರಾಜಕಾರಣ, ನಂಬುವುದು ಮತ್ತು ನಂಬದಿರುವುದು ಅವರವರ ನಿರ್ಧಾರಕ್ಕೆ ಬಿಟ್ಟದ್ದು ಆದರೆ ಅದನ್ನು ಸಾರ್ವತ್ರೀಕರಣಗೊಳಿಸುವುದು ಸಲ್ಲ. ಇವರ ಕುಂಡಲಿ ಸರಿ ಇದ್ದು ಗ್ರಹಗತಿಗಳೂ ಇವರ ಪರವಾಗಿಯೇ ಇವೆ ಎಂದುಕೊಳ್ಳೊಣ ಆದರೆ ಜನರೇ ವೋಟು ನೀಡದಿದ್ದರೆ ಪಕ್ಷದ ಕುಂಡಲಿ ನೋಡುತ್ತಾರೆಯೇ? ಅಥವಾ ಪಕ್ಷದ ಅಧ್ಯಕ್ಷರ ಕುಂಡಲಿ ನೋಡುತ್ತಾರೆಯೇ? ಅವೆಲ್ಲವೂ ಸರಿ ಇದ್ದು ಕೆಲಸಮಾಡದ ಸೋಮಾರಿಗಳು ಆಯ್ಕೆಯಾದರೆ ದೇಶದ ಕುಂಡಲಿ ನೋಡುತ್ತಾರೆಯೇ? ಇತ್ತೀಚಿನ ದಿನಗಳಲ್ಲಿ ಅನೇಕ ತೀರಾ ತೀರ ಖಾಸಗಿ ವಿಚಾರಗಳು ಸಾರ್ವತ್ರೀಕರಣಗೊಳ್ಳುತ್ತಿವೆ. ಅಲ್ಲದೆ ತಮ್ಮ ನಂಬಿಕೆಗಳನ್ನು ಇತರರ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಇಂಥ ವಿಚಾರಗಳಲ್ಲಿ ನಂಬಿಕೆಯಿಲ್ಲದವರೂ ಕೂಡಾ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಒಪ್ಪಬೇಕಾಗುತ್ತಿದೆ. ಇದರಿಂದ ಸರಿ ತಪ್ಪುಗಳ ವಿಮರ್ಶೆಯೇ ನಡೆಯದಂತಾಗಿ ಪ್ರಶ್ನಿಸುವ ಗುಣವೇ ಜನರಿಂದ ಮಾಯವಾಗುತ್ತಿದೆ.
ಇತ್ತೀಚೆಗೆ ಮಠಾಶರೊಬ್ಬರ ಬಗ್ಗೆ ರಾಜಕೀಯ ನಾಯಕರೊಬ್ಬರು ಹಗುರವಾಗಿ ಮಾತನಾಡಿದ್ದರು ಅದಕ್ಕೆ ಮಠಾಶರ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಆ ರಾಜಕಾರಣಿ, ‘ಒಂದು ಸಮುದಾಯದವರು ಪ್ರತಿಭಟಿಸಿದರೆ ಉಳಿದವರು ಸುಮ್ಮನಿರುತ್ತಾರೆಯೇ’ ಎಂದು ಪ್ರಶ್ನಿಸಿದ್ದರು. ಅಂದರೆ ಯಾರಾದರೂ ಪ್ರತಿಭಟಿಸಿದರೆ ಮತ್ತೊಬ್ಬರು ಅದರ ವಿರುದ್ಧ ಪ್ರತಿಭಟಿಸಲೇ ಬೇಕು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು. ಇದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ. ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿಕಟ್ಟಿ ಮಾಡುತ್ತಿರುವ ವರ್ತಮಾನದ ರಾಜಕಾರಣ ಯಾರ ಹಿತವನ್ನೂ ಬಯಸಲಾರದು.
ಕೇವಲ ಎರಡು ದಶಕಗಳ ಹಿಂದೆ ಮಠಗಳು ವಿಧಾನ ಸೌಧದಿಂದ ಸಮಾನ ದೂರ ಕಾಯ್ದುಕೊಂಡಿದ್ದವು. ಮಠಗಳು ವಿಚಾರ ಮತ್ತು ಧರ್ಮದ ಆಚರಣೆ ಕುರಿತು ಬೋಸುತ್ತಿದ್ದವು, ಆಗ ರಾಜಕೀಯ ನಾಯಕರು ಮಠಗಳನ್ನು ಅಥವಾ ಸಮುದಾಯವನ್ನು ಟೀಕಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗೇನಾದರೂ ಅಂಥ ಸಂದರ್ಭ ಎದುರಾದರೆ ಹತ್ತಾರುಬಾರಿ ಯೋಚಿಸುತ್ತಿದ್ದರು. ಮತ್ತು ಬಹಳ ಎಚ್ಚರದಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿದ್ದರು. ಹಾಗೆಯೇ ಮಠಾಶರು ಧರ್ಮ ಮತ್ತು ರಾಜಧರ್ಮದ ನಡುವಿನ ವ್ಯತ್ಯಾಸವನ್ನು ಗ್ರಹಿಸುತ್ತಿದ್ದರಿಂದ ಘರ್ಷಣೆಗಳು ಕಡಿಮೆ ಇರುತ್ತಿದ್ದವು. ವೈದ್ಯ ಮತ್ತು ತಾಂತ್ರಿಕ ಕಾಲೇಜುಗಳನ್ನು ತೆರೆದು ಶಿಕ್ಷಣ ಮಾರುವ ದುರಾಸೆ ಮಠಗಳಲ್ಲಿ ಬೆಳೆದಂತೆ ಅವನ್ನು ಈಡೇರಿಸಿಕೊಳ್ಳಲು ಮಠಾಶರು ವಿಧಾನ ಸೌಧಕ್ಕೆ ಹತ್ತಿರವಾಗತೊಡಗಿದರು. ಆಗಿನಿಂದ ರಾಜಧರ್ಮ ಮತ್ತು ಧರ್ಮದ ನಡುವಿನ ಗೆರೆ ತೆಳುವಾಗತೊಡಗಿತು. ಈಗಂತೂ ಆ ಗೆರೆ ಕಾಣದಷ್ಟು ತೆಳುವಾಗಿದೆ. ಇದನ್ನು ಅರ್ಥ ಮಾಡಿಕೊಂಡ ರಾಜಕೀಯ ನಾಯಕರು ವೋಟಿಗಾಗಿ ಮಠಾಶರನ್ನು ‘ಮತಾಶ’ರನ್ನಾಗಿ ಪರಿವರ್ತಿಸಿ ‘ಇವ ನಮ್ಮವ’ ಎನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲ ಪ್ರಮುಖ ಜಾತಿಯ ಮಠಗಳಿಗೆ ಸರಕಾರದ ಬೊಕ್ಕಸದ ಹಣವನ್ನು ಮನಸೋ ಇಚ್ಛೆ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳು ದನದಕೊಟ್ಟಿಗೆಗಿಂತ ಅತ್ತತ್ತಲಾಗಿವೆ ಅವುಗಳನ್ನು ಅಭಿವೃದ್ಧಿ ಪಡಿಸಲಾಗದ ಸರಕಾರ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿವೆ. ಅದಕ್ಕಾಗಿ ಹಣ ನೀಡುತ್ತೇವೆ ಎಂದು ಹೇಳುತ್ತಿರುವುದರ ಹಿಂದೆ ನಮಗೆ ಆ ಸೌಕರ್ಯ ನೀಡಲಾಗುತ್ತಿಲ್ಲ ಎಂಬ ಅಸಹಾಯಕತೆ ಮತ್ತು ಅಸಮರ್ಥತೆ ಎದ್ದು ಕಾಣುತ್ತಿದೆ. ಅನೇಕತೆಯಲ್ಲಿ ಏಕತೆಯನ್ನು ಕಂಡ ಭಾರತದಲ್ಲಿ ಮಠಗಳ ಪಾತ್ರವನ್ನು, ಅವುಗಳ ಸೇವೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಆದರೆ ಅವೇ ಸರಕಾರವಲ್ಲ. ಸರಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುವ ಮಠಗಳು ಸಣ್ಣ ಸಣ್ಣ ಸಾಮ್ರಾಜ್ಯಗಳಾಗುತ್ತಿರುವುದರಿಂದ ಅವು ಹಣ ಮಾಡುವ ಕೇಂದ್ರಗಳಾಗುತ್ತಿವೆ. ಐಷಾರಾಮಿ ಮಠಗಳಲ್ಲಿದ್ದುಕೊಂಡು ವಿದೇಶಿ ಕಾರುಗಳಲ್ಲಿ ಓಡಾಡುವ ಮಠಾಶರು ಭಕ್ತ ಸಮೂಹಕ್ಕೆ ಸರಳ ಜೀವನದ ಪಾಠ ಹೇಳುತ್ತಾರೆ. ಆಸೆಗಳನ್ನು ತ್ಯಜಿಸಬೇಕು ಎಂಬ ಆಣಿಮುತ್ತುಗಳನ್ನು ಉದುರಿಸುತ್ತಾರೆ. ಇವು ಅವರ ನಡೆ ನುಡಿಗೆ ತದ್ವಿರುದ್ಧವಾಗುವುದರಿಂದ ಭಕ್ತರೂ ಸಹ ನಂಬುವುದಿಲ್ಲ. ಸರಳವಾಗಿ ಬದುಕಿ ಎಂದು ಹೇಳುವ ಬದಲು ಹೇಳುವವರೇ ಬದುಕಿ ತೋರಿಸಬೇಕು. ಆಸೆಗಳನ್ನು ತ್ಯಜಿಸಿ ಎಂದು ಉಪದೇಶ ಕೊಡುವವರು ಮೊದಲು ತ್ಯಜಿಸಿ ತೋರಿಸಬೇಕು. ಗಾಂ ಸರಳತೆಯನ್ನು ಬೋಸಲಿಲ್ಲ ಬದಲಾಗಿ ಹಾಗೆ ಬದುಕಿ ತೋರಿಸಿದರು. ಸಾಮ್ರಾಜ್ಯದ ಅಪತಿಯ ಮಗನಾಗಿದ್ದರೂ ಬುದ್ಧ ಅದಕ್ಕೆ ಅಂಟಿಕೊಂಡು ಕೂರಲಿಲ್ಲ. ಬದಲಾಗಿ ಎಲ್ಲದನ್ನೂ ತ್ಯಾಗಮಾಡಿ ಮಾನವ ಪ್ರೀತಿ ಅರಸುತ್ತ ಹೋದ. ನುಡಿದಂತೆ ನಡೆಸು ನಡೆದಂತೆ ನುಡಿಸು ನುಡಿ ನಡೆಗೆ ಭಿನ್ನವಾದರೆ ನಮ್ಮ ಶರಣರೊಪ್ಪರು ಎಂದು ಬಸವಣ್ಣ ನುಡಿ ನಡೆಯ ಸರಳ ರೇಖೆಯನ್ನು ಹಾಕಿ ತೋರಿಸಿದರು. ಇಂಥದ್ದೊಂದು ಸರಳತೆಯ ಇತಿಹಾಸವನ್ನೇ ಬೆನ್ನಿಗಿಟ್ಟುಕೊಂಡಿರುವ ಮಠಗಳು ಸಿದ್ಧಾಂತಗಳನ್ನು ಬೋಧನೆಗಷ್ಟೇ ಸೀಮಿತಗೊಳಿಸಿಕೊಂಡಿರುವುದರಿಂದ ಭಕ್ತರೂ ಸೇರಿದಂತೆ ಇಡೀ ಸಮಾಜ ಅನುಮಾನದಿಂದ ನೋಡುವಂತೆ ಮಾಡಿವೆ. ಮಠಗಳ ನಿರಂತರ ರಾಜಕೀಯ ಸಂಪರ್ಕದಿಂದ ಒಂದಲ್ಲ ಒಂದು ವರ್ಗ ಅನುಮಾನ ಪಡುತ್ತಿದೆ. ಅಲ್ಲದೆ ಯಾವ ಜಾತಿಯವರು ಪ್ರಮುಖ ಸ್ಥಾನದಲ್ಲಿ ಇರುತ್ತಾರೋ ಆ ಸಮುದಾಯದ ಸ್ವಾಮಿಗಳು ಲಾಭ ಪಡೆಯಲು ಮುಂದಾಗುತ್ತಾರೆ ಇದು ಇನ್ನೊಂದು ವರ್ಗಕ್ಕೆ ಅನುಮಾನಗಳು ಹೆಚುತ್ತಲೇ ಇರುವಂತೆ ಮಾಡಿವೆ. ಈ ಹಿಂದೆ ರಾಜಕೀಯ ನಾಯಕರೊಬ್ಬರಿಗೆ ಅತೀ ಆಪ್ತವಾಗಿದ್ದ ಮಠವೊಂದು ನಂತರ ಬಂದ ಭಿನ್ನಾಭಿಪ್ರಾಯದಿಂದ ಆ ಮಠ ಎರಡಾಯಿತು. ಇದು ರಾಜಕೀಯ ಮನಸ್ಥಿತಿಯ ಸೂಕ್ಷ್ಮತೆ. ಅತಿಯಾಗಿ ರಾಜಕೀಯ ನಾಯಕರನ್ನು ಸೇರಿಸುವ ಮಠಗಳಿಗೆ ಇದು ಉತ್ತಮ ಪಾಠ, ಎಚ್ಚರಿಕೆ ಗಂಟೆ. ತಮಗೆ ಸ್ವಲ್ಪ ನೋವಾದರೂ ರಾಜಕಾರಣಿಗಳು ಎಂಥ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಲು ಹೇಸುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.
ಹಿಂದೆ ಮಠಗಳು ರಾಜಕೀಯದಲ್ಲಿ ಗುರುತಿಸಿಕೊಂಡಿರಲಿಲ್ಲ ಎಂದಲ್ಲ, ಆದರೆ ನೇರ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದವು. ಭಕ್ತ ಸಮೂಹದಲ್ಲಿಯೂ ಮಠಗಳ ಬಗ್ಗೆ ಗೌರವ ಇತ್ತು. ಈಗ ಪ್ರತಿಯೊಂದು ಜಾತಿಗೂ ಒಬ್ಬೊಬ್ಬ ಮಠಾಶರಿರುವುದರಿಂದ ಅವರು ರಾಜಕೀಯದಲ್ಲಿ ಮೂಗು ತೂರಿಸಲು ಆರಂಭಿಸಿದ ನಂತರವಂತೂ ಅನೇಕ ರಾಜಕೀಯ ಮುಖಂಡರು ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳಲು ಮಠಗಳ ಆಶ್ರಯ ಪಡೆಯುತ್ತಿದ್ದಾರೆ. ಇಂಥ ಕಾರಣಗಳಿಗಾಗಿ ಬೆಳೆಯುತ್ತಿರುವ ನಾಯಕರು ಒಂದೊಂದು ಕುಲದ, ಜಾತಿಯ ಚೌಕಟ್ಟಿಗೆ ಸೀಮಿತವಾಗುತ್ತಿದ್ದು, ಇಡೀ ಮಾನವ ಕುಲದ ಹಿತ ಬಯಸುವ ನಾಯಕರು ಇಲ್ಲವಾಗಿದ್ದಾರೆ. ರಾಜಕೀಯ ತತ್ತ್ವಗಳು ಧರ್ಮದ, ಜಾತಿಯ ಸಿದ್ಧಾಂತಗಳಾಗಿ ರೂಪುಗೊಳ್ಳುತ್ತಿರುವುದರಿಂದ ಗಾಂ ಹೇಳಿದ ತತ್ತ್ವರಹಿತ ರಾಜಕಾರಣ ಮಹಾ ಪಾಪ ಎನ್ನುವುದೇ ಈಗ ಮಹಾ ಪಾಪವಾಗಿ ಕಾಣತೊಡಗಿದೆ. ಒಂದೆಡೆ ಹಳ್ಳಿಗಳಲ್ಲಿದ್ದ ಒಗ್ಗಟ್ಟನ್ನು ನಾಶ ಮಾಡಿದ ರಾಜಕಾರಣ ನಂತರ ಧರ್ಮಗಳನ್ನು ಒಡೆದು ಜಾತಿಯಾಗಿ ವಿಂಗಡಿಸಿತು ಈಗ ಜಾತಿಗಳನ್ನು ಒಡೆದು ರಾಜಕಾರಣ ಆರಂಭಿಸಿದೆ. ಇಂಥ ರಾಜಕೀಯ ಕಪಟ ಮತ್ತು ವೈರುಧ್ಯಗಳನ್ನು ಮೀರಬಹುದಾದ ಮಾರ್ಗ ಎಂದರೆ ಸ್ವ ಎಚ್ಚರ ಮಾತ್ರ.ಒಂದು ಕಡೆ ಮಾಧ್ಯಮಗಳು,ನ್ನೊಂದೆಡೆ ಮಠಗಳ ಮತ್ತು ರಾಜಕಾರಣದ ನಡುವೆ ಸಾಮಾಜಿಕ ವ್ಯವಸ್ಥೆ ತುಂಬಾ ಸಂಕೀರ್ಣಗೊಳ್ಳುತ್ತಿದೆ.

ರಾಜಕೀಯ ಹೊಲಸು ತೊಳೆಯಲು ಗಾಂಜಿ ಅನುಯಾಯಿಗಳೇ ಬರಬೇಕೆ?

ಒಂದು ದಿನ ಗಾಂ ಅನುಯಾಯಿಗಳು ಹಳ್ಳಿಯೊಂದಕ್ಕೆ ತೆರಳಿ ಅಲ್ಲಿನ ರಸ್ತೆಗಳನ್ನು ಗುಡಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಿದರು, ಹಾಗೆಯೇ ಎಂಟು ದಿನ ನಿರಂತರವಾಗಿ ಅದೇ ಗ್ರಾಮಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಒಂದು ದಿನ ತಾವೇ ನಿರ್ಧರಿಸಿ ಹದಿನೈದು ದಿನ ಗ್ರಾಮ ಸ್ವಚ್ಛತೆಗೆ ಹೋಗಲಿಲ್ಲ. ನಂತರ ತಮ್ಮ ಕಡೆಯವರೊಬ್ಬರನ್ನು ಅಲ್ಲಿಗೆ ಕಳುಹಿಸಿ ಸ್ವಚ್ಛತೆ ಪರಿಶೀಲಿಸಲು ಹೇಳಿದರು. ಅವರು ಹೋಗಿ ನೋಡಿದರೆ ಇಡೀ ಗ್ರಾಮ ಕಸದ ರಾಶಿಯಂತಾಗಿತ್ತು. ಸ್ವಚ್ಛತೆ ಎನ್ನುವುದು ಗ್ರಾಮದ ಜನರ ಅರಿವಿಗೇ ಬಂದಿರಲಿಲ್ಲ. ಹೋದ ವ್ಯಕ್ತಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೀವ್ಯಾರೂ ಗಮನ ಹರಿಸುತ್ತಿಲ್ಲ ಯಾಕೆ ಎಂದು ಒಬ್ಬರನ್ನು ಕೇಳಿದರು ಆಗ ಆ ವ್ಯಕ್ತಿ ಹೇಳಿದನಂತೆ ‘ಯಾಕೋ ಕಳೆದ ಹದಿನೈದು ದಿನಗಳಿಂದ ಗಾಂ ಕಡೆಯವರು ಸ್ವಚ್ಛ ಮಾಡಲು ಬರುತ್ತಿಲ್ಲ ಆದ್ದರಿಂದ ಕಸ ಹರಡಿದೆ’ ಅಂತ.
ಗಾಂ ಅಥವಾ ಅವರ ಅನುಯಾಯಿಗಳು ಎಂದರೆ ಚರಂಡಿ ಗುಡಿಸುವವರು ಎಂಬ ಮೂರ್ಖ ಆಲೋಚನೆಗಳನ್ನು ಮಾಡುವವರಿಲ್ಲ ಎಂದಲ್ಲ, ಆದರೆ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ. ಈಗ ಇಡೀ ದೇಶಕ್ಕೆ ಚುನಾವಣೆ ಕಾವು ಏರಿದೆ. ಸ್ವಾತಂತ್ರ್ಯಾನಂತರದ ೬೦ ವರ್ಷಗಳಲ್ಲಿ ದೇಶ ಇಂಥ ಅನೇಕ ಚುನಾವಣೆಗಳನ್ನು ಕಂಡಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪ್ರಜೆಗಳ ರಾಜಕೀಯ ಅರಿವನ್ನು ವಿಸ್ತರಿಸುತ್ತವೆ ಎನ್ನುವ ನಂಬಿಕೆ ಇದೆ ಆ ಮಾತು ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅನ್ವಯವಾಯಿತು ಎಂದು ಹೇಳಲಾಗುವುದಿಲ್ಲ. ಆಳುವವರ ತಪ್ಪನ್ನು ಹಿಡಿದು ಕೇಳುವ ಎಚ್ಚರದ ಮತ್ತು ಬದ್ಧ ರಾಜಕೀಯ ಪ್ರಜ್ಞೆಯನ್ನು ಭಾರತದಲ್ಲಿ ಚುನಾವಣೆಗಳು ಬೆಳೆಸಲಿಲ್ಲ. ಬದಲಾಗಿ ಮೊದಲೇ ಇದ್ದ ಜಾತಿ ಕಂದಕಗಳನ್ನು ಮತ್ತಷ್ಟು ಹೆಚ್ಚಿಸಿದವು, ಜನ ಸಮುದಾಯದ ಮೌಢ್ಯ- ಕಂದಾಚಾರವನ್ನು ವಿಸ್ತರಿಸಿದವು. ಭ್ರಷ್ಟಾಚಾರ ಎನ್ನುವುದನ್ನು ಸರ್ವೆ ಸಾಮಾನ್ಯ ಎನ್ನುವಂತೆ ಮಾಡಿ ಲಜ್ಜೆಗೆಟ್ಟ ವರ್ಗವನ್ನು ಸೃಷ್ಟಿಸಿದವು. ಚುನಾವಣೆ ನಡೆದಂತೆಲ್ಲ ನಮ್ಮ ಸಾಮಾಜಿಕ ಬದುಕು ಸಾಗಬೇಕಾದ ದಾರಿಯನ್ನು ಬಿಟ್ಟು ಮತ್ತೊಂದು ದಾರಿಯನ್ನು ಆಯ್ಕೆಮಾಡಿಕೊಂಡಿತು. ಚುನಾವಣೆಗಳು ಹೆಚ್ಚಿದಂತೆ ರಾಜಕೀಯ ಅರಿವು ಮೂಡುವ ಬದಲು ಕುಡುಕರು ಹೆಚ್ಚಿದರು. ಚುನಾವಣೆಗಳು ಹೆಚ್ಚಿದಂತೆ ದೇಶದ ಸಂಪತ್ತು ತಿಂದು ಹಾಕುವ ರಾಜಕಾರಣಿಗಳು ಹೆಚ್ಚಿದರು, ಭ್ರಷ್ಟರು ಹೆಚ್ಚಿದರು, ಬಹು ಮುಖ್ಯವಾಗಿ ಹಣಕ್ಕೆ ಮತ ಮಾರಿಕೊಳ್ಳುವ ನಿರಭಿಮಾನಿ ಮತದಾರರು ಹೆಚ್ಚಿದರು. ಒಂದು ಅಂದಾಜಿನ ಪ್ರಕಾರ ಪ್ರತೀ ಚುನಾವಣೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ. ೧೫ ರಷ್ಟು ಕುಡುಕರು ಹೆಚ್ಚುತ್ತಿದ್ದಾರೆ. ಇದು ಬಡ ಭಾರತಕ್ಕೆ ಚುನಾವಣೆಗಳ ಕೊಡುಗೆ!
ಜನತಂತ್ರ ವ್ಯವಸ್ಥೆಯಲ್ಲಿ ಎದುರಾಗುವ ರಾಜಕೀಯ ಸನ್ನಿವೇಶಗಳು ಹಲವು ಕಾರಣಕ್ಕೆ ಪ್ರಮುಖವೆನಿಸುತ್ತವೆ. ಎಲ್ಲ ಪಕ್ಷಗಳ ಮೇಲಾಟಗಳನ್ನು ಸೂಕ್ಷ್ಮವಾಗಿ ಗಮನಿಸುವ ಜನ ಸಮುದಾಯ ಚುನಾವಣೆಯಲ್ಲಿ ತನ್ನ ನಿಲುವನ್ನು ಪ್ರಕಟಿಸುತ್ತದೆ. ಆದರೆ ಪರಿಸ್ಥಿತಿ ಈಗ ಹಿಂದೆಂದಿಗಿಂತ ತೀರಾ ಭಿನ್ನವಾಗತೊಡಗಿದೆ. ಹೆಂಡ ಮತ್ತು ಹಣದ ಆಮಿಷಗಳಿಂದ ಜನರ ಮನಸ್ಥಿತಿಯನ್ನು ಬದಲಿಸುವ, ಮತಗಳನ್ನು ಖರೀದಿಸುವ ಕೀಳು ತಂತ್ರಗಳು ಆರಂಭವಾಗಿವೆ. ಕಳೆದೆರಡು ಚುನಾವಣೆಯಲ್ಲಿ ಹೆಂಡ ಹಣದ ಪ್ರಭಾವ ಮಿತಿಮೀರಿದ್ದು ಇದಕ್ಕೆ ಸಾಕ್ಷಿ. ಅದಕ್ಕೂ ಮೊದಲು ನಾವು ಹೆಂಡ ಹಂಚುವುದಿಲ್ಲ, ಹಣ ಕೊಡುವುದಿಲ್ಲ, ಸಿದ್ಧಾಂತವೇ ನಮ್ಮ ಧ್ಯೇಯವಾಗಿರುವುದರಿಂದ ಜನ ನಮ್ಮನ್ನೇ ಬೆಂಬಲಿಸುತ್ತಾರೆ ಎಂದು ಕೆಲವರಾದರೂ ಹೇಳುತ್ತಿದ್ದರು. ಈಗ ಅಷ್ಟು ಧೈರ್ಯವಾಗಿ ಹೇಳಲು ಯಾರೂ ಸಿದ್ಧರಿಲ್ಲ. ಅಕಸ್ಮಾತಾಗಿ ಹೇಳಿದರೆ ನಂಬಲು ಜನರೂ ಸಿದ್ಧರಿಲ್ಲ. ಎರಡು ಚುನಾವಣೆಗಳ ಹಿಂದೆ ಅಲ್ಪ ಸ್ವಲ್ಪ ಪ್ರಾಮಾಣಿಕತೆ ಎನ್ನುವುದು ಆಂತರಿಕವಾಗಿ ಇಲ್ಲದಿದ್ದರೂ ಬಾಹ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಕಾಣುತ್ತಿತ್ತು. ಈಗ ತಮ್ಮ ಪಾವಿತ್ರ್ಯದ ಬಗ್ಗೆ ಹೇಳಿಕೊಳ್ಳುವಷ್ಟು ಶುದ್ಧ- ಬದ್ಧರಾಗಿ ಯಾವ ಪಕ್ಷವೂ ಉಳಿದಿಲ್ಲ. ಇದು ಚುನಾವಣೆಗಿಂತ ಚುನಾವಣೆಗೆ ಸಾಮಾಜಿಕ ಪರಿಸ್ಥಿತಿ ಕಲುಷಿತಗೊಳ್ಳುತ್ತಿರುವುದರ ಸಂಕೇತ. ಅಲ್ಲದೇ ರಾಜಕೀಯದಲ್ಲಿ ಮೌಲ್ಯವಿಲ್ಲದ, ಬದ್ಧತೆಯಿಲ್ಲದ ಜನರು ಪ್ರವೇಶಮಾಡುತ್ತಿರುವುದರ ದ್ಯೋತಕ.
ಜಾತಿ ಸಂಘರ್ಷದಿಂದ ನಲುಗಿದ್ದ ಹಳ್ಳಿಗಳಿಗೆ ಸ್ವಾತಂತ್ರ್ಯಾನಂತರ ಹೊಸ ಎಚ್ಚರ ಬರುವಹೊತ್ತಿಗೆ ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಯಾಯಿತು. ಇದರಿಂದ ಹಳ್ಳಿಗಳನ್ನು ಪ್ರವೇಶಿಸಿದ ರಾಜಕೀಯ ಅಲ್ಲಿನ ಒಗ್ಗಟ್ಟನ್ನು ನಾಶಮಾಡಿತು. ಹಳ್ಳಿಗಳಲ್ಲಿದ್ದ ಜಾತಿಯ ಬೆಂಕಿ ಆರದಂತೆ ಅದನ್ನು ಮತಗಳಾಗಿ ಪರಿವರ್ತಿಸಲು ನಡೆದ ಕಸರತ್ತುಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆಮಾಡಿತು. ಜಾತಿಯ ಕೆಸರಿಗೆ ಪಕ್ಷ ರಾಜಕಾರಣದ ಕೊಳಕು ಸೇರುತ್ತಿದ್ದಂತೆ ಅಲ್ಲೇ ಕೆಲವು ಪುಡಿ ರಾಜಕಾರಣಿಗಳು ಸೃಷ್ಟಿಯಾಗಿ ಜನಪದರ ರಮ್ಯ ಮತ್ತು ಮುಗ್ಧ ಹಳ್ಳಿಗಳು ನಾಶವಾಗಿ ಈಗ ರಾಜಕೀಯ ಹಳ್ಳಿಗಳು ಮಾತ್ರ ಉಳಿದಿವೆ. ರಾಜಕಾರಣಿಗಳು ಸೃಷ್ಟಿಯಾಗಲು ಯಾವ ಮಾರ್ಗಗಳು ಬೇಕೋ ಅವೆಲ್ಲ ಈಗಾಗಲೇ ಸೃಷ್ಟಿಯಾಗಿವೆ. ಇದರಿಂದ ರಾಜಕಾರಣವು ಸೇವೆಯಾಗಿ ಉಳಿಯದೆ ವೃತ್ತಿಯಾಗಿ ರೂಪುಗೊಂಡಿದೆ. ಮೇಲ್ಮಟ್ಟದ ಪರಮ ಭ್ರಷ್ಟ ರಾಜಕಾರಣಿಗಳ ಕಾರ್ಯ ವೈಖರಿಯನ್ನು ಗಮನಿಸುವ ಪುಡಿರಾಜಕಾರಣಿಗಳು ಇಲ್ಲೂ ಅದನ್ನೇ ಮಾಡುತ್ತಿರುವುದರಿಂದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೆನ್ನುವುದು ಸಂಪೂರ್ಣ ಮರೆಯಾಯಿತು. ಇದರಿಂದ ಗ್ರಾಮಗಳ ಬಗ್ಗೆ ಇದ್ದ ಪ್ರೀತಿ ಕಡಿಮೆಯಾಗಿ ಗ್ರಾಮಗಳು ಸಂಪತ್ತಿನ ಕ್ರೋಡೀಕರಿಸುವ, ಅದನ್ನು ಅಭಿವೃದ್ಧಿಯಾಗಿ ಪರಿವರ್ತಿಸುವ ಅಪರೂಪದ ಕ್ರಿಯಾಶೀಲ ಪ್ರಕ್ರಿಯೆ ಯಾವ ಹಳ್ಳಿಯಲ್ಲೂ ಉಳಿದಿಲ್ಲ. ಅದೂ ಅಲ್ಲದೇ ಪಂಚಾಯಿತಿಗೆ ಇಷ್ಟು ಎಂದು ಸರಕಾರವೇ ಧನ ಸಹಾಯ ನೀಡುತ್ತಿರುವುದರಿಂದ ಹಳ್ಳಿಗಳು ಕ್ರಮೇಣ ಸರಕಾರದ ಮತ್ತು ಆಳುವವರ ಕೈಗೊಂಬೆಗಳಾಗಿವೆ. ಹಣ ನೀಡಲು ಸರಕಾರಕ್ಕೆ ಹಳ್ಳಿಗಳ ಮೇಲೆ ಪ್ರೀತಿ ಇದೆ ಎಂದು ಭಾವಿಸುವುದು ಸರಿಯಲ್ಲ, ಬದಲಾಗಿ ಹಳ್ಳಿಗಳು ಧನಸದಹಾಯಕ್ಕೆ ಕೈಚಾಚಿಕೊಂಡೇ ಇರಬೇಕು ಎನ್ನುವ ಸೂಕ್ಷ್ಮ ಆಗ್ರಹ.
ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ಕೊಡಲು ಈ ಹಿಂದೆ ದೇಶದಲ್ಲಿ ಕೆಲವು ಸಮಸ್ಯೆಗಳು ಕಣ್ಣಿಗೆ ಕಾಣುತ್ತಿದ್ದವು. ಉದಾಹರಣೆಗೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ನಿರುದ್ಯೋಗ ಸಮಸ್ಯೆ ನಿವಾರಿಸುವುದಾಗಿ ಭರವಸೆಗಳನ್ನಾದರೂ ನೀಡಲು ಅವಕಾಶವಿತ್ತು. ಈಗ ಅದೂ ಉಳಿದಿಲ್ಲ, ಕಾರಣ ಸಮಸ್ಯೆಗಳೇ ಇಲ್ಲ ಎಂದರ್ಥವಲ್ಲ, ಇವನ್ನು ಯಾರಿಂದಲೂ ನಿವಾರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿಹೋಗಿದೆ. ಭಗವಂತನೂ ಕೂಡ ಇವುಗಳಿಗೆ ಪರಿಹಾರ ಕಂಡು ಹಿಡಿಯಲು ಅಶಕ್ತನಾಗಿದ್ದಾನೆ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೂ ಮನವರಿಕೆಯಾಗಿದೆ. ಆದ್ದರಿಂದ ಕಾಲ ಬದಲಾದಂತೆ ಜನರ ಅಗತ್ಯಗಳೂ ಬದಲಾಗಿವೆ ಎಂದು ಈಗ ಬಣ್ಣದ ಟಿವಿ ಮತ್ತು ಕೇಬಲ್, ಮೊಬೈಲ್, ಲಾಪ್‌ಟ್ಯಾಪ್ ಕೊಡುವ ಭರವಸೆ ನೀಡುತ್ತಿದ್ದಾರೆ. ದೇಶದಲ್ಲಿ ಸರಿಸುಮಾರು ೨೩ ಕೋಟಿ ಜನರಿಗೆ ಒಂದು ಹೊತ್ತಿನ ಅನ್ನ ಸಿಗುತ್ತಿಲ್ಲ ಅದನ್ನು ಪೂರೈಸಲು ಯೋಜನೆ ರೂಪಿಸುತ್ತೇವೆ ಎಂದು ಗಟ್ಟಿಯಾಗಿ ಹೇಳುವಷ್ಟು ಶಕ್ತಿವಂತ ನಾಯಕರೇ ಇಲ್ಲ.
ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಎಲ್ಲ ಪಕ್ಷಗಳೂ ಹೇಳುತ್ತಿವೆ. ಸಾಲ ಮನ್ನಾ ಎನ್ನುವುದು ರೈತರ ಸಮಸ್ಯೆಗೆ ಶಾಶ್ವತ ಪರಿಹಾರವೇ ಅಲ್ಲ, ಕಳೆದ ವರ್ಷವಷ್ಟೇ ಕೇಂದ್ರ ಸರಕಾರ ೬೫ ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ. ಈಗ ಮತ್ತೆ ಅದೇ ಪ್ರಣಾಳಿಕೆಯಾಗಿ ಕಾಣತೊಡಗಿದೆ. ಸಾಲ ಮನ್ನಾ ಎನ್ನುವುದು ದುಡಿಯುವ ಕೈಗಳನ್ನು ಬಂಸುವ ಪ್ರಯತ್ನ ಮತ್ತು ತಾತ್ಕಾಲಿಕ ಪರಿಹಾರ. ಇದನ್ನು ಪ್ರತಿಯೊಬ್ಬರೂ ಮುಂದುವರಿಸಿದರೆ ದೇಶದ ಆರ್ಥಿಕ ಆರೋಗ್ಯ ಸುಧಾರಿಸಲು ಸಾಧ್ಯವೇ ಇಲ್ಲ. ಇದಕ್ಕೆ ಬದಲಾಗಿ ರೈತರಿಗೆ ಸಾಧ್ಯವಾದಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಸೂಕ್ತ ಮಾರುಕಟ್ಟೆ ಒದಗಿಸಬೇಕು, ಬೆಳೆಗೆ ನ್ಯಾಯಯುತವಾದ ಬೆಲೆ ಸಿಗುವಂತಾದರೆ ಸಾಲ ಮರುಪಾವತಿ ಸಮಸ್ಯೆಯಾಗಲಾರದು ಅತಿವೃಷ್ಟಿ, ಅನಾವೃಷ್ಟಿಯಂಥ ಸಂದರ್ಭ ಹೊರತುಪಡಿಸಿದರೆ ಉಳಿದಂತೆ ಸಾಲ ಮರುಪಾವತಿ ಅನಿವಾರ್ಯ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡದೇ ಹೋದರೆ ಹಣದ ಬೆಲೆಯೇ ಅರ್ಥವಾಗದ ಹಳ್ಳಿಗಳು ಉದಯಿಸಲಿವೆ. ಪಡೆದ ಸಾಲ ತೀರಿಸದಿದ್ದರೆ ಮನ್ನಾ ಆಗುತ್ತದೆ ಎಂಬ ಭಾವನೆ ರೈತ ಸಮುದಾಯದಲ್ಲಿ ಈಗಾಗಲೇ ಬರಲಾರಂಭಿಸಿದೆ. ಹೀಗೆಯೇ ಮುಂದುವರಿದರೆ ಹಳ್ಳಿಗಳಿಗೆ ನೀಡಿದ ಸಾಲ ಮರುಪಾವತಿ ಅಸಾಧ್ಯವಾಗುತ್ತದೆ. ೨೭ ಲಕ್ಷಕ್ಕೂ ಅಕ ಹಳ್ಳಿಗಳನ್ನು ಹೊಂದಿರುವ ಭಾರತದಲ್ಲಿ ಅವುಗಳ ಆದಾಯವನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದ್ದರಿಂದ ಚುನಾವಣೆಗಳು ಗ್ರಾಮಗಳನ್ನು ಒಡೆಯದೇ ಅವುಗಳ ಸರ್ವತೋಮುಖ ಬೆಳವಣಿಗೆಗೆ ಮುಂದಾಗಬೇಕಿದೆ. ನಗರದ ಆಕರ್ಷಣೆ ತಡೆಯಲು ಹಳ್ಳಿಗಳ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳದಿದ್ದರೆ ಹಳ್ಳಿಗಳು ಕಟ್ಟೆ ಪಂಚಾಯಿತಿ ಕೇಂದ್ರಗಳಾಗಿ ಮಾರ್ಪಡುವ ಅಪಾಯವಿದೆ.
ನಾನು ಮೊದಲೇ ಪ್ರಸ್ತಾಪಿಸಿದಂತೆ ಗಾಂ ಕಡೆಯವರು ಕಸ ಗುಡಿಸಲು ಬಂದಿಲ್ಲ.... ಹಾಗೆಯೇ ಸಾಲ ಮನ್ನಾ ವಿಚಾರವನ್ನು ಪ್ರಸ್ತಾಪಿಸದೇ ಹೋದರೆ ಇದು ಒಳ್ಳೆಯ ಪಕ್ಷವೇ ಅಲ್ಲ, ಸರಕಾರವೇ ಅಲ್ಲ ಎಂದು ತೀರ್ಮಾನಿಸುವ ಕಾಲ ದೂರವಿಲ್ಲ. ಸಾಲ ತೀರಿಸದಿದ್ದರೆ ಅದು ನಾನು ದೇಶಕ್ಕೆ, ದೇಶದ ಬೆಳವಣಿಗೆಗೆ ಮಾಡುವ ವಂಚನೆ ಎಂದು ತಾತ್ವಿಕವಾಗಿ ಚಿಂತಿಸುವಂತೆ ಜನರ ಮನಸ್ಥಿತಿಯನ್ನು ಬದಲಿಸಬೇಕಿದೆ. ಇಲ್ಲದೆ ಹೋದರೆ ಶೇ. ೭೨ ಭಾಗ ಇರುವ ದೇಶದ ರೈತರು ಹಳ್ಳಿಗಾಡಿನ ಜನರು ಇಂಥ ಯೋಚನೆಯಲ್ಲಿ ತೊಡಗಿದರೆ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಡೋಲಾಯಮಾನವಾಗಲಿದೆ. ಇಂಥ ಸಂಕೀರ್ಣ ಸನ್ನಿವೇಶದಲ್ಲೇ ರಾಜಕಾರಣಿಗಳು ಜನರನ್ನು ದುರ್ಬಲರನ್ನಾಗಿ ಮಾಡುವ ಸಾಧ್ಯತೆ ಹೆಚ್ಚು. ಪರಿಸ್ಥಿತಿಯ ದುರ್ಲಾಭ ಪಡೆಯುವ ನಾಯಕರಿಗೆ ತಿವಿಯಲು, ಭರವಸೆಗಳ ಮಳೆಸುರಿಸಿ ದೂರವಾಗುವವರಿಗೆ ಬುದ್ಧಿ ಕಲಿಸಲು ಈಗ ಮತ್ತೊಮ್ಮೆ ಕಾಲ ಬಂದಿದೆ ಇದನ್ನು ಸಮರ್ಥವಾಗಿ ವಿಶ್ಲೇಷಿಸಿ ನಿಭಾಯಿಸಿದರೆ ಮಾತ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುವಾಗುತ್ತಾರೆ. ಇಲ್ಲದಿದ್ದರೆ ಪ್ರಭುತ್ವದ ಅಡಿಯಾಳುಗಳಾಗುತ್ತಾರೆ.

ಗಣ್ಯರ ವಿಷಯ ಹಾಗಿರಲಿ, ನಮ್ಮಂತವರ ಪಾಡೇನು?

ಭಾರತೀಯರ ಪಾಸ್‌ಪೋರ್ಟ್ ನೋಡುತ್ತಿದ್ದಂತೆ ಶ್ರೀಮಂತ ದೇಶಗಳ ವಿಮಾನಯಾನ ಸಿಬ್ಬಂದಿ ಮೈಗೆ ಮುಳ್ಳು ಹತ್ತಿದವರಂತೆ ವರ್ತಿಸುತ್ತಿರುತ್ತಾರೆ. ಭಾರತೀಯರ ಬಗ್ಗೆ ಅವರ ನಿಕೃಷ್ಟ ಮನೋಭಾವಕ್ಕೆ ಕಾರಣ ಗೊತ್ತಿಲ್ಲ. ಜಗತ್ತಿನ ವಿeನಿ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನೇ ಶಿಷ್ಟಾಚಾರ ಉಲ್ಲಘಿಸಿ ತಪಾಸಣೆಗೊಳಪಡಿಸಿದ ಅಮೆರಿಕದ ವಿಮಾನಯಾನ ಸಂಸ್ಥೆಯೊಂದು ನಂತರ ಕ್ಷಮೆ ಯಾಚಿಸಿತ್ತು. ಅಂಥ ಘಟನೆ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ನೆವಾರ್ಕ್‌ನ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ಅವಮಾನಿಸಲಾಗಿದೆ. ಭಾರತೀಯ ನಟರಿಗೆ ಅವಮಾನವಾಗುತ್ತಿರುವುದು, ಅವರನ್ನು ಎರಡನೇ ದರ್ಜೆಯಲ್ಲಿ ತಪಾಸಣೆಗೊಳಪಡಿಸುವುದು ಇದೇ ಮೊದಲೇನಲ್ಲ. ಆಮೀರ್‌ಖಾನ್, ಇರ್ಫಾನ್‌ಖಾನ್,ಮಮ್ಮುಟ್ಟಿ ಮುಂತಾದವರು ಇದೇ ರೀತಿಯ ಕಿರಿಕಿರಿಯನ್ನು ಈ ಹಿಂದೆಯೂ ಅನುಭವಿಸಿದ್ದಾರೆ. ಈ ವಿಚಾರಗಳು ಕೆಲವು ಸಲ ಭಾರೀ ಪ್ರಚಾರ ಪಡೆದು ತಣ್ಣಗಾಗುತ್ತವೆ, ಮತ್ತೆ ಕೆಲವು ಗೊತ್ತೇ ಆಗುವುದಿಲ್ಲ. ಒಟ್ಟಿನಲ್ಲಿ ಭಾರತೀಯರು ಮರ್ಯಾದೆಗೆ ಯೋಗ್ಯರಲ್ಲ ಎನ್ನುವಂಥ ಮೂರ್ಖ ಕಲ್ಪನೆಗಳು ಶ್ರೀಮಂತ ರಾಷ್ಟಗಳಲ್ಲಿವೆ ಎನ್ನುವುದು ಇಂಥ ಅವಘಡಗಳು ಪದೇ ಪದೆ ಘಟಿಸುತ್ತಿರುವುದರಿಂದ ಎಲ್ಲರಿಗೂ ಮನವರಿಕೆಯಾಗುತ್ತದೆ.
ನನ್ನ ಹೆಸರಿನ ಮುಂದೆ ‘ಖಾನ್’ ಎಂದು ಇದ್ದದ್ದೇ ಈ ತಪಾಸಣೆಗೆ, ಕಿರಿಕಿರಿಗೆ ಕಾರಣವಿರಬಹುದು ಎಂದು ಬಾಲಿವುಡ್‌ನ ಐಕಾನ್ ಶಾರುಖ್ ಖಾನ್ ಹೇಳಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಸತ್ಯ ಇರಬಹುದು. ಕೆಲವು ಸಂದರ್ಭಗಳಲ್ಲಿ ಹೆಸರುಗಳೂ ಕೂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಂಥ ಕಿರಿಕಿರಿಗೆ ದಾರಿಮಾಡಿಕೊಡುತ್ತವೆ. ಅನೇಕ ಸಂದರ್ಭದಲ್ಲಿ ಬೇರೆ ದೇಶದವರಿಗೆ ಭಾರತೀಯರ ಹೆಸರನ್ನು ಉಚ್ಛರಿಸಲು ಬರುವುದೇ ಇಲ್ಲ. ಹಾಗೂ ಉಚ್ಛರಿಸಿದರೆ ಅಕ್ಷರಗಳು ಎಲ್ಲೆಲ್ಲೋ ಸೇರಿಬಿಡುತ್ತವೆ. ಅದನ್ನು ಗಮನಿಸುತ್ತ ನಾವೇ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹೆಸರೊಂದೇ ಈ ರೀತಿಯ ತಪಾಸಣೆಗೆ ಕಾರಣ ಆಗಿರಲಾರದು ಎನ್ನುವುದು ನನ್ನ ಸ್ವಂತ ಅನುಭವದ ಅಭಿಪ್ರಾಯ. ಭಾರತ, ಶ್ರೀಲಂಕಾ, ಚೀನಾ, ಪಾಕಿಸ್ತಾನ, ಅಫಘಾನಿಸ್ತಾನ ಅಥವಾ ಏಷ್ಯಾದ ಕೆಲವು ರಾಷ್ಟ್ರದ ಸಾಮಾನ್ಯ ಪ್ರಜೆ ಅಥವಾ ನಾಯಕರು ಹೋದರೂ ಸಾಮ್ರಾಜ್ಯ ಶಾಹಿ ದೇಶಗಳಲ್ಲಿ ಇಂಥ ಕಿರಿಕಿರಿಯನ್ನು ಅನುಭವಿಸಿಯೇ ಇರುತ್ತಾರೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ಮಾಡುವುದು ಸರಿ, ಆದರೆ ತಪಾಸಣೆಯ ನೆಪದಲ್ಲಿ ಕಿರುಕುಳ, ಹಿಂಸೆ ಕೊಡುವುದು. ಸರಿಯೇ ಎನ್ನುವುದು ಪ್ರಶ್ನೆ. ಅಬ್ದುಲ್ ಕಲಾಂ, ಶಾರುಖ್ ಖಾನ್‌ರಂಥ ಖ್ಯಾತ ನಾಮರದ್ದೇ ಈ ಸ್ಥಿತಿಯಾದರೆ ಇನ್ನು ಸಾಮಾನ್ಯ ಪ್ರಜೆಗಳ ಪಾಡು ಹೇಳತೀರದು.
ಕಳೆದ ವರ್ಷ (೨೦೦೮)ಮೂರೂವರೆ ತಿಂಗಳ ಕಾಲ ನಾನು ಯುರೋಪ್ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೆ ಕೃಷಿ ಅಧ್ಯಯನಕ್ಕಾಗಿ ಹೋಗಿದ್ದೆ. ಸ್ವಿಟ್ಜರ್‌ಲೆಂಡಿನ ಜಿನಿವಾ ನಗರದಲ್ಲಿ ಕೆಲವು ದಿನ ಇದ್ದು ನಂತರ ಬ್ರೆಜಿಲ್ ದೇಶದ ಸಾವ್‌ಪಾವ್ಲೊ ನಗರಕ್ಕೆ ಹೋಗಬೇಕಾಗಿತ್ತು. ಪ್ಯಾರಿಸ್ ಮೂಲಕ ಹೋಗಲು ವಿಮಾನ ಗೊತ್ತು ಮಾಡಿಕೊಂಡಿದ್ದೆ. ಅಕ್ಟೋಬರ್ ೨೧ರಂದು ನನ್ನ ಪ್ರಯಾಣ ನಿಗದಿಯಾಗಿತ್ತು. ವಿಮಾನ ನಿಲ್ದಾಣಕ್ಕೆ ಹೋದಾಗ ಅಲ್ಲಿಯ ಇಮಿಗ್ರೆಶನ್ ಅಕಾರಿಗಳ ವರಸೆ ಬೇರೆಯಾಗಿತ್ತು. ಅದೇನೆಂದರೆ ನೀವು ಪ್ಯಾರಿಸ್ ನಗರ ಪ್ರವೇಶ ಮಾಡಬೇಕೆಂದರೆ ‘ಫ್ರಾನ್ಸ್ ವಿಸಾ ಪಡೆಯುವುದು ಕಡ್ಡಾಯ’ ಎಂದು. ನಾನು ಪ್ಯಾರಿಸ್ ನಗರ ಪ್ರವೇಶ ಮಾಡುವುದಿಲ್ಲ. ವಿಮಾನ ಬದಲಿಸುತ್ತೇನೆ ಅಷ್ಟೇ ಅದಕ್ಕೆ Transit Visa ದಲ್ಲಿ ಅವಕಾಶವಿದೆ ಎಂದು ಹೇಳಿದೆ. ಅದಕ್ಕೆ ಅಲ್ಲಿನ ಕಾರಿಗಳು ಒಪ್ಪಲಿಲ್ಲ. (Transit Visa ಎಂದರೆ ನಾವು ತಲುಪಬೇಕಾದ ದೇಶದ ವಿಸಾ ಇದ್ದರೆ ನಡುವೆ ಬರುವ ದೇಶದ ಗಡಿ ದಾಟುವ ಮತ್ತು ವಿಮಾನ ಬದಲಿಸುವ ಅವಕಾಶ. ಉದಾಹರಣೆಗೆ ಸ್ವಿಟ್ಜರ್‌ಲೆಂಡ್ ವಿಸಾ ಪಡೆದರೆ ಫಿನ್‌ಲೆಂಡಿನ ಹೆಲ್ಸಿಂಕಿಯಲ್ಲಿ ವಿಮಾನ ಬದಲಿಸಬಹುದು. ಮೂರ್ನಾಲ್ಕು ಗಂಟೆಗಾಗಿ ಫಿನ್‌ಲೆಂಡ್ ದೇಶದ ವಿಸಾ ಪಡೆಯಬೇಕಾಗಿಲ್ಲ.) ಈ ಅವಕಾಶವಿದೆ ಎಂದು ತಿಳಿಸಿದರೂ ಅವರು ಸಮ್ಮತಿಸಲಿಲ್ಲ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನನ್ನ ಪಾಸ್‌ಪೋರ್ಟ್ ತನಿಖೆ ಮಾಡಿ ಹಿಂತಿರುಗಿಸಿದರು. ಅಲ್ಲಿಗೆ ಅಂದಿನ ನನ್ನ ಪ್ರವಾಸ ಮೊಟಕುಗೊಂಡಿತು.
ಲಂಡನ್ ಮೂಲಕ ಹೋಗುವಂತೆ ಟಿಕೆಟ್ ಕಾಯ್ದಿರಿಸುವ ಏಜೆಂಟ್ ಸಲಹೆ ನೀಡಿದ್ದರಿಂದ ಅ. ೨೨ರಂದು ಪ್ರಯಾಣ ಬೆಳೆಸಲು ನಿರ್ಧರಿಸಿ ಲಂಡನ್‌ಗೆ ತೆರಳಲು ಬ್ರಿಟಿಷ್ ಏರ್‌ವೇಸ್ ನಿಗದಿ ಮಾಡಿಕೊಂಡೆ. ಸಂಜೆ ೪.೨೫ ಕ್ಕೆ ವಿಮಾನ ಇದ್ದುದರಿಂದ ೩ ಗಂಟೆಗೇ ನನ್ನ ಬ್ಯಾಗ್‌ಗಳನ್ನು ಲಗೇಜ್ ಕ್ಯಾಬಿನ್‌ನಲ್ಲಿ ಹಾಕಿ ಜಿನಿವಾದ cointrain ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆದು ಲಂಡನ್‌ನ Heathrow ನಿಲ್ದಾಣಕ್ಕೆ ಹೊರಡಲು ಕಾಯುತ್ತ ಕುಳಿತ್ತಿದ್ದೆ. ವಿಮಾನ ಹತ್ತಲು ಸೂಚನೆ ಬರುತ್ತಿದ್ದಂತೆ ಸಾಲಿನಲ್ಲಿ ನಿಂತಿದ್ದಾಗ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ನನ್ನ ಪಾಸ್‌ಪೋರ್ಟ್ ಚೆಕ್ ಮಾಡಿ, (ಎರಡನೇ ದರ್ಜೆ ತನಿಖೆ) ಭಾರತೀಯರು ಲಂಡನ್ ಪ್ರವೇಶ ಮಾಡವುದಾದರೆ ವಿಸಾ ಕಡ್ಡಾಯ ಎಂದರು. ನಾನು ಲಂಡನ್ ನಗರ ಪ್ರವೇಶ ಮಾಡುವುದಿಲ್ಲ, ಬ್ರೆಜಿಲ್‌ನ ಸಾವ್‌ಪಾವ್ಲೊಗೆ ಹೋಗುವುದರಿಂದ ವಿಮಾನ ಬದಲಾವಣೆಗೆ Transit Visa ದಲ್ಲಿ ಅವಕಾಶವಿದೆ ಎಂದು ವಾದಿಸಿದೆ. ಅದಕ್ಕೆ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ಒಪ್ಪಲಿಲ್ಲ. ನನ್ನ ಪಾಸ್‌ಪೋರ್ಟ್ ಹಿಡಿದು ಅರ್ಧ ಗಂಟೆಗೂ ಹೆಚ್ಚು ಕಾಲ ಹಿರಿಯ ಅಕಾರಿಗಳೊಂದಿಗೆ ಚರ್ಚಿಸಿ, ಗೂಗಲ್ ವೆಬ್‌ಸೈಟ್‌ನಲ್ಲಿ ನೋಡಿ, ಸಹ ಸಿಬ್ಬಂದಿಯೊಂದಿಗೆ ಚರ್ಚಿಸಿ ಕೊನೆಗೆ ಒಂದು ಪಟ್ಟಿಯನ್ನು ತಂದು ನನ್ನ ಮುಂದೆ ಹಿಡಿದರು. ಅದರಲ್ಲಿ ಕೆಲವು ದೇಶಗಳ ಹೆಸರನ್ನು ಕೆಂಪು ಅಕ್ಷರದಲ್ಲಿ, ಮತ್ತೆ ಕೆಲವನ್ನು ಹಸಿರು ಅಕ್ಷರದಲ್ಲಿ ಮುದ್ರಿಸಲಾಗಿತ್ತು. ‘ಈ ಕೆಂಪು ಅಕ್ಷರದಲ್ಲಿರುವ ದೇಶದ ಪ್ರಜೆಗಳು ಲಂಡನ್ ಪ್ರವೇಶ ಅಥವಾ ಬ್ರಿಟಿಷ್ ಏರ್‌ವೇಸ್‌ನಲ್ಲಿ ಪ್ರಯಾಣ ಮಾಡಬೇಕೆಂದರೆ ವಿಸಾ ಕಡ್ಡಾಯ. ಉಳಿದವರು ಪಡೆಯದಿದ್ದರೂ ಆದೀತು’ ಎಂದರು. ಭಾರತವನ್ನು ಕೆಂಪು ಅಕ್ಷರಗಳಲ್ಲಿ ಗುರುತಿಸಲಾಗಿತ್ತು. ‘ನಾನು ಭಾರತೀಯ ಪತ್ರಕರ್ತ, ಕೃಷಿ ಅಧ್ಯಯನಕ್ಕಾಗಿ ಹೋಗುತ್ತಿದ್ದೇನೆ. ಅವಕಾಶ ನೀಡಲೇಬೇಕು’ ಎಂದು ಪಟ್ಟು ಹಿಡಿದೆ. ಯಾವ ಕಾರಣಕ್ಕೆ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದ್ದೀರಿ ಇದನ್ನು ಮೊದಲೇ ಏಕೆ ತಿಳಿಸಲಿಲ್ಲ ಎಂದೆಲ್ಲ ಏರು ಧ್ವನಿಯಲ್ಲಿ ಕೇಳಿದೆ. ಅದಕ್ಕೆ ಸರಿಯಾಗಿ ಉತ್ತರ ನೀಡದ ಅವರು 'We will not allow Indians' ನಮಗೆ ಸರಕಾರದ ಆದೇಶವೇ ಹೀಗಿದೆ ಅದನ್ನು ನಾವು ಪಾಲಿಸುತ್ತೇವೆ’ ಎಂದು ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಕೊಡುತ್ತ ನನ್ನ ಪಾಸ್‌ಪೋರ್ಟ್ ಕೈಗಿಟ್ಟು ಸಾಗ ಹಾಕಿದರು. ಅಂದೂ ನನ್ನ ಬ್ರೆಜಿಲ್ ಪ್ರಯಾಣದ ಉದ್ದೇಶ ಈಡೇರಲಿಲ್ಲ.
ಭಾರತದ ಸಂಪತ್ತನ್ನೆಲ್ಲ ನೆಕ್ಕಿ ನೀರು ಕುಡಿದು ಶ್ರೀಮಂತರಾದ ಬ್ರಿಟಿಷರು ಇಂದು ಬೌದ್ಧಿಕ ದಬ್ಬಾಳಿಕೆ ಆರಂಭಿಸಿದ್ದಾರೆ ಎಂದು ಮನಸ್ಸಿಗೆ ಪಿಚ್ ಎನಿಸಿತು. ಸಾವ್‌ಪಾವ್ಲೊಗೆ ಬೇರೆ ಮಾರ್ಗಗಳಿದ್ದರೆ ಹಾಗೆಯೇ ಹೋಗಬೇಕು, ಲಂಡನ್ ಮೂಲಕ ಹೋಗುವುದಾದರೆ ಪ್ರವಾಸವನ್ನೇ ರದ್ದುಪಡಿಸಿ ಭಾರತಕ್ಕೆ ಹಿಂತಿರುಗಬೇಕು. ಬ್ರಿಟಿಷ್ ನೆಲ ತುಳಿಯ ಕೂಡದೆಂದು ನಿರ್ಧರಿಸಿ ಮರುದಿನ ಜರ್ಮನಿ (ಫ್ರಾಂಕ್ ಫುರ್ಟ್) ಮೂಲಕ ಸಾವ್ ಪಾವ್ಲೊ ತಲುಪಿದೆ. ವಸಾಹತು ಶಾಹಿ ದೇಶಗಳು ಭಾರತಿಯರನ್ನು ನಡೆಸಿಕೊಳ್ಳುವ ಪರಿ ಇದು. ದೇಶದ ಪ್ರಜೆಗಳಿಗೆ ಆಗುವ ಅಂತಾರಾಷ್ಟಿಯ ಮಟ್ಟದ ಕಿರುಕುಳಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ಅವಮಾನಿಸಿದಾಗಲೇ ಬಿಗಿ ನಿಲುವು ತಾಳಿದ್ದಿದ್ದರೆ ಇಂಥ ಘಟನೆಗಳು ಪುನರಾವರ್ತನೆಯಾಗುತ್ತಿರಲಿಲ್ಲ. ತಪ್ಪು ಮಾಡಿದ ದೇಶದಿಂದ ಒಂದು ಕ್ಷಮಾಪಣೆ ಪತ್ರಬಂದರೆ ಅಥವಾ ಪತ್ರಿಕಾಹೇಳಿಕೆ ಬಂದರೆ ತೃಪ್ತವಾಗುವ ಅಲ್ಪತೃಪ್ತಿ ಮನಸ್ಥಿತಿಯಿಂದ ಭಾರತ ಸರಕಾರ ಹೊರಬಂದು ಕಠಿಣ ನಿಲುವು ತಾಳಬೇಕು. ಇಲ್ಲದಿದ್ದರೆ ಭಾರತೀಯರ ಮಾನ ಮೂರು ಕಾಸಿಗೆ ಹರಾಜಾಗುತ್ತಲೇ ಇರುತ್ತದೆ.
ಅಂತೂ ಬ್ರಿಟಿಷ್ ದೇಶಕ್ಕೆ ಹೋಗಲಾಗದಿದ್ದಕ್ಕೆ ಅತಿಯಾದ ಸಂತೋಷವೂ, ಅವರ ದುರ್ವರ್ತನೆಗೆ ಬೇಸರವೂ ಆಯಿತು. ವಿಮಾನ ನಿಲ್ದಾಣ ಪ್ರವೇಶ ಮಾಡುವುದು ಒಂದು ಸಮಸ್ಯೆಯಾದರೆ ವಿಸಾ ಮತ್ತಿತರ ಕಾರಣಗಳಿಂದ ಹೊರಬರುವುದು ಇನ್ನೊಂದು ಸವಾಲು. ಪ್ರಯಾಣ ಮೊಟಕುಗೊಳಿಸಿ ಹೊರಗೆ ಬರೋಣವೆಂದರೆ, ಪ್ರವೇಶ ಮಾಡಿದ ಯಾವುದೇ ಮಾರ್ಗದಿಂದ ಹೊರಬರಲು ಸಾಧ್ಯವೇ ಇಲ್ಲ. ಫ್ರೆಂಚ್ ಬಿಟ್ಟರೆ ಅಲ್ಲಿನ ಪೊಲೀಸರಿಗೆ ಬೇರೆ ಯಾವುದೇ ಭಾಷೆ ಗೊತ್ತಾಗುವುದಿಲ್ಲ. ಈ ಸಮಸ್ಯೆ ತಿಳಿಸೋಣವೆಂದರೆ ಕೇಳುವ ವ್ಯವಧಾನವೂ ಅವರಿಗಿರುವುದಿಲ್ಲ. ಹೊರಗೆ ಹೋಗಲು ಕೇಳಿದರೆ ಭದ್ರತಾ ಕೊಠಡಿಗಳಲ್ಲಿ ಪೊಲೀಸರು ವಾಪಸ್ ಕಳಿಸುತ್ತಾರೆ. ಸ್ವಲ್ಪ ಅನುಮಾನ ಬಂದರೂ ಕ್ಯಾಮರಾದಲ್ಲಿ ಸುತ್ತುತ್ತಿರುವ ಪೊಲೀಸ್ ಕಣ್ಣುಗಳು ಬಂಸಿಯಾವು ಎನ್ನುವ ಭಯ. ಒಟ್ಟಾರೆ ವಿಮಾನ ನಿಲ್ದಾಣದ ಒಳಗೆ ಹೋದವರು ಸಣ್ಣ ಕಾರಣಗಳಿಗೂ ಹೊರಗೆ ಬರುವುದು ಎಂದರೆ ಚಕ್ರವ್ಯೂಹ ಭೇದಿಸಿದಂತೆ.
ಎಷ್ಟೇ ಪ್ರಯತ್ನ ಮಾಡಿದರೂ ನಾನು ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಅಲ್ಲಿ ಸಹಾಯಕ್ಕೆ ಯಾರೂ ಇರುವುದಿಲ್ಲವಾದ್ದರಿಂದ ಗಲಿಬಿಲಿ ಶುರುವಾಗಿತ್ತು. ಕೊನೆಗೆ ಕೌಂಟರ್‌ವೊಂದರಲ್ಲಿ ಕುಳಿತಿದ್ದ ಮಹಿಳೆಯ ಹತ್ತಿರ ಈ ವಿಚಾರ ತಿಳಿಸಿದೆ. ಆಕೆ ಬಂದು ನನ್ನನ್ನು ನಿಲ್ದಾಣದಿಂದ ಹೊರಗೆ ಬರಲು ಸಹಾಯ ಮಾಡಿದಳು. ಅಷ್ಟೊತ್ತಿಗೆ ನಾನು ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತಾಗಿದ್ದೆ.
ಖ್ಯಾತನಾಮರಿಗೆ ಅವಮಾನವಾದರೆ ಎರಡು ದೇಶಗಳ ರಾಯಭಾರಿಗಳೇ ಎಚ್ಚೆತ್ತುಕೊಳ್ಳುತ್ತಾರೆ. ಕೆಲಸಕ್ಕೆ, ಅಧ್ಯಯನಕ್ಕೆ, ಪ್ರವಾಸಕ್ಕೆ ಹೋದವರು ಇಂಥ ಅವಮಾನವನ್ನು ನಿರಂತರ ಅನುಭವಿಸುತ್ತಿರುತ್ತಾರೆ. ಜಗತ್ತಿನ ಸಾಂಸ್ಕೃತಿಕ ರಾಯಭಾರಿ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿ ಅವಮಾನಿಸುವ ದೇಶಗಳನ್ನು ಭಾರತವೂ ಕೆಂಪು ಪಟ್ಟಿಗೆ ಸೇರಿಸಿ ಎಲ್ಲ ಭದ್ರತಾ ನಿಯಮಗಳನ್ನೂ ಅನುಸರಿಸಬೇಕು. ಅತಿಥಿಗಳಂತೆ ಸ್ವಾಗತಿಸುವ ಪರಿಪಾಠವನ್ನು ನಿಲ್ಲಿಸಿ ತೃತೀಯ ದರ್ಜೆ ಸ್ವಾಗತ ನೀಡದಿದ್ದರೆ ಭಾರತೀಯರ ಸಂಪನ್ನತೆಯನ್ನು ದೌರ್ಭಲ್ಯ ಎಂದು ಭಾವಿಸುವ ಸಾಧ್ಯತೆ ಇದೆ. ಕ್ರಮಕ್ಕೆ ಮುಂದಾಗದಿದ್ದರೆ ಶ್ರೀಮಂತ ದೇಶಗಳ ದೌರ್ಜನ್ಯ ಎನ್ನುವುದು ಸಾಮಾನ್ಯ ಸಂಗತಿಯಾಗುತ್ತದೆ.

ವಿದೇಶದಲ್ಲೂ ಹೂಡಿಕೆಯಾಗುತ್ತಿದೆ ‘ಶೂನ್ಯ ಬಂಡವಾಳ’

ಶ್ರೀಲಂಕಾದಲ್ಲೂ ‘ಪಾಳೇಕಾರಿಕೆ’
ಸಹಜ, ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಪದ್ಧತಿಗಳು ಹಿಂದಿನಿಂದ ಇದ್ದವಾದರೂ, ಕೃಷಿ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಇವೆಲ್ಲ ಅಪರಿಚಿತ ಎನ್ನುವಂತೆ ಮಾಡಿವೆ. ಬಂಡವಾಳ ಅಥವಾ ಆಧುನಿಕ ಕೃಷಿ ನೀತಿಯಿಂದ ರೋಗಗ್ರಸ್ತವಾಗಿರುವ ಭಾರತೀಯ ಸಮಾಜವನ್ನು ಆರೋಗ್ಯ ಪೂರ್ಣಗೊಳಿಸಲು ಸುಭಾಷ್ ಪಾಳೇಕಾರ್ ಆರಂಭಿಸಿರುವ ‘ಶೂನ್ಯ ಬಂಡವಾಳ’ ಕೃಷಿ ಈಗ ನೆರೆ ರಾಷ್ಟ್ರ ಶ್ರೀಲಂಕಾದಲ್ಲೂ ಹೆಚ್ಚು ಪ್ರಚಾರ ಪಡೆಯುತ್ತಿದೆ.
ಕೃಷಿ ಕಲುಷಿತವಾದರೆ ಇಡೀ ಸಮಾಜ ರೋಗಪೀಡಿತವಾಗುತ್ತದೆ ಎಂಬ ಅರಿವು ಕ್ರಮೇಣ ಜನರಲ್ಲಿ ಮೂಡತೊಡಗಿದೆ. ಆದ್ದರಿಂದ ಅಡ್ಡ ಪರಿಣಾಮವಿಲ್ಲದ ಆಹಾರಗಳತ್ತ ಜನ ಯೋಚಿಸುತ್ತಿದ್ದಾರೆ. ಇದಕ್ಕೆ ದೇಶ, ಭಾಷೆಯ ಗಡಿ ಇಲ್ಲ. ಈ ‘ಆರ್ಗ್ಯಾನಿಕ್ ಆಹಾರ’ವನ್ನೇ ಹಳೇ ತಲೆಮಾರಿನ ಜನ ‘ರೋಗವಿಲ್ಲದ ಆಹಾರ’ ಎಂದಿದ್ದರು. ಹೆಚ್ಚು ಇಳುವರಿ, ಹೆಚ್ಚು ಲಾಭ ಎಂಬ ಭ್ರಮೆಯಿಂದ ಸಹಜ ಆಹಾರ, ಸಹಜ ಜೀವನದತ್ತ ರೈತರು, ಬಳಕೆದಾರರು ಮರಳುತ್ತಿದ್ದಾರೆ.
ಭಾರತದಾದ್ಯಂತ ಸುದ್ದಿ ಮಾಡಿರುವ ಪಾಳೇಕಾರರ ‘ಶೂನ್ಯ ಬಂಡವಾಳ’ ಈಗ ಶ್ರೀಲಂಕಾದಲ್ಲೂ ಹೂಡಿಕೆಯಾಗುತ್ತಿದೆ. ಕೊಲಂಬೋದ ವಿeನಿ, Center for sustainable agirculture research and development ಸಂಸ್ಥೆಯ ಸಹಯೋಗದಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಭೂಮಿ ಮತ್ತು ಕೃಷಿ ಸುಧಾರಣಾ ಆಂದೋಲನ ರಾಷ್ಟ್ರೀಯ ಸಂಚಾಲಕ ಡಾ. ಲಿಯೊನೆಲ್ ವಿರಾಕೂನ್ ನಾಗಪುರದಲ್ಲಿ ಪಾಳೇಕಾರರನ್ನು ಭೇಟಿ ಮಾಡಿ, ಶೂನ್ಯ ಬಂಡವಾಳ ಕೃಷಿಯ ಮಾಹಿತಿ ಪಡೆದರು. ನೀರಿನ ಮಿತಬಳಕೆ, ಕಡಿಮೆ ಖರ್ಚು, ಜೀವ ವೈವಿಧ್ಯಕ್ಕೆ ಧಕ್ಕೆಯಾಗದ ಈ ಕೃಷಿ ಪದ್ಧತಿಯಿಂದ ಪ್ರಭಾವಿತರಾಗಿ, ತಮ್ಮ ದೇಶದಲ್ಲೂ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಶೂನ್ಯ ಬಂಡವಾಳ ಕೃಷಿ ಕುರಿತು ಅವರು ಮಾತನಾಡಿದ್ದು ಹೀಗೆ: ರಾಸಾಯನಿಕ ಕೃಷಿಯಿಂದ ರೈತ ಸಮುದಾಯ ನಷ್ಟ ಮಾತ್ರ ಅನುಭವಿಸುತ್ತಿಲ್ಲ. ಸಾಲ ಬಾಧೆ ತಾಳದೆ ಆತ್ಮಹತ್ಯೆಗೂ ಶರಣಾಗುತ್ತಿದೆ. ಇದಕ್ಕೆ ಕಾರಣ, ಕೃಷಿಗೆ ತೊಡಗಿಸುತ್ತಿರುವ ಬಂಡವಾಳ ಹಿಂತಿರುಗುತ್ತಿಲ್ಲ. ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರದಿಂದ ಭೂಮಿಯೂ ವಿಷವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಂಡವಾಳವಿಲ್ಲದ, ಜೈವಿಕ ಕ್ರಿಯೆಗೆ ಧಕ್ಕೆಯಾಗದಂಥ ಕೃಷಿ ಪದ್ಧತಿ ಅನಿವಾರ್ಯ. ಆದ್ದರಿಂದ ಭಾರತದಲ್ಲಿ ಪಾಳೇಕಾರ್ ಆರಂಭಿಸಿರುವ ಶೂನ್ಯ ಬಂಡವಾಳ ಕೃಷಿಯನ್ನು ಅರಿಯಲು ಮೂರು ದಿನ ನಾಗಪುರದಲ್ಲಿದ್ದೆ. ನಿಜಕ್ಕೂ ಅದೊಂದು ಅದ್ಭುತ ಕೃಷಿ ಪದ್ಧತಿ. ಅದನ್ನು ನಾವೂ ನಮ್ಮ ಸಂಸ್ಥೆಯ ಮೂಲಕ ಜಾರಿಗೆ ತರಲು ನಿರ್ಧರಿಸಿದ್ದೇವೆ.
೧೫ ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮ ಸಂಸ್ಥೆಯಲ್ಲಿ ಐದು ಸಾವಿರ ಸದಸ್ಯರಿದ್ದು, ೩,೫೦೦ ಮಂದಿ ಈಗಾಗಲೇ ಸುಸ್ಥಿರ ಕೃಷಿಯಲ್ಲಿ ತೊಡಗಿ ಉತ್ತಮ ಫಲ ಪಡೆದಿದ್ದಾರೆ. ಶೂನ್ಯ ಬಂಡವಾಳ ಕೃಷಿಯಲ್ಲೂ ಅವರನ್ನು ತೊಡಗಿಸುವ ಯೋಚನೆ ಇದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪಾಳೇಕಾರರನ್ನು ನಮ್ಮ ದೇಶಕ್ಕೆ ಕರೆಸುವುದೋ ಅಥವಾ ನಮ್ಮ ರೈತರನ್ನು ಭಾರತಕ್ಕೆ ಕಳಿಸುವುದೋ ಎನ್ನುವುದನ್ನು ಸಂಸ್ಥೆಯ ಸದಸ್ಯರೆಲ್ಲ ಸೇರಿ ತೀರ್ಮಾನಿಸುತ್ತೇವೆ.
ಹಸಿರು ಕ್ರಾಂತಿಯಿಂದ ಬಂಡವಾಳ ಕೃಷಿ ಆರಂಭವಾಯಿತು. ಇದರಿಂದ ದೇಶಿ ಕೃಷಿ ಪದ್ಧತಿ, ಪಾರಂಪರಿಕ eನ ನಿರ್ಲಕ್ಷ್ಯಕ್ಕೊಳಗಾಯಿತು. ಅದರ ಪುನರುತ್ಥಾನಕ್ಕೆ ಸುಸ್ಥಿರ ಕೃಷಿ ಪದ್ಧತಿಯಂಥ ಮಾರ್ಗಗಳು ಅನಿವಾರ್ಯ ಎಂಬುದನ್ನು ಮನಗಂಡಿದ್ದೇವೆ. ಜಾಗತೀಕರಣವನ್ನು ವಿಶ್ವ ವಾಣಿಜ್ಯ ಸಂಸ್ಥೆ ಮೂಲಕ ಬಡ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಯಿತು. ಈಗಲೂ ಅಂಥ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು ತೊಂದರೆಗೊಳಗಾಗಿದ್ದಾರೆ. ಅನೇಕ ಸಂದರ್ಭದಲ್ಲಿ ಸರಕಾರದ ಯೋಜನೆಗಳೂ ರೈತ ವಿರೋಯಾಗಿರುತ್ತವೆ. ಇದರಿಂದ ಆಗುವ ಅನ್ಯಾಯಗಳಬಗ್ಗೆ ರೈತರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಜೈವಿಕ ಇಂಧನ ಬಳಕೆಯಂಥ ವಿಚಾರಗಳಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ನಮ್ಮೊಂದಿಗೆ ಸಹಕಾರ ನೀಡುತ್ತಿದೆ. ಇದರಿಂದ ವಾತಾವರಣ ಕಲುಷಿತವಾಗದಂತೆ ತಡೆಯುವ ಕುರಿತು ಹಲವಾರು ಕಾರ್ಯಕ್ರಮಗಳನ್ನೂ ಮಾಡಿದ್ದೇವೆ.
ಬಹುರಾಷ್ಟ್ರೀಯ ಕಂಪನಿಗಳ ಬೀಜದಿಂದ ಆಗುತ್ತಿರುವ ತೊಂದರೆಗಳು, ಕುಲಾಂತರಿ ವಂಶವಾಹಿಗಳು ಮನುಷ್ಯನ ಮೇಲೆ ಬೀರುವ ದುಷ್ಪರಿಣಾಮ ಕುರಿತು ಅಧ್ಯಯನ ನಡೆಸಿ ಜಾಗೃತಿ ಮೂಡಿಸುವುದು,ರಾಸಾಯನಿಕಗಳ ಬಳಕೆಯಿಂದ ಜೀವ ವೈವಿಧ್ಯ ನಾಶ ಕುರಿತು ಮಾಹಿತಿ ನೀಡುವುದು,ಆಹಾರ ಸಾರ್ವಭೌಮತ್ವ, ಭೂಮಿ ಮೇಲಿನ ರೈತರ ಹಕ್ಕು ಕುರಿತು ಮಾಹಿತಿ ನೀಡುತ್ತಿದ್ದೇವೆ. ರಾಷ್ಟ್ರೀಯ ಕೃಷಿಕರ ಒಕ್ಕೂಟದಡಿಯ ೪೦೦ ಸರಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ನಮ್ಮ ಜತೆ ಕೈ ಜೋಡಿಸಿವೆ.
ಕೇವಲ ೧೦ ಸಂಸ್ಥೆಗಳು ವಿಶ್ವಕ್ಕೇ ಬೀಜ ಸರಬರಾಜು ಮಾಡುತ್ತಿವೆ. ಇದರಿಂದ ಕೃಷಿ ಕ್ಷೇತ್ರ ಕೆಲವೇ ಜನರ ಸ್ವತ್ತಾಗುವ, ಏಕಸ್ವಾಮ್ಯಕ್ಕೆ ಒಳಗಾಗುವ ಅಪಾಯಗಳನ್ನು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಬಂಡವಾಳಶಾಹಿಗಳ ಹಿಡಿತದಿಂದ ಕೃಷಿ ಕ್ಷೇತ್ರವನ್ನು ಪಾರು ಮಾಡಲು ಹಂಚಿಕೊಳ್ಳುವ ವ್ಯವಸ್ಥೆ ಅಥವಾ ಕೊಡು ಕೊಳು ಪದ್ಧತಿಯ ಪುನರ್ ಸ್ಥಾಪನೆ ಪ್ರಯೋಗ ಯಶಸ್ಸು ಸಾಸಿದೆ. ಹೆಚ್ಚು ಜನಸಂಖ್ಯೆಯಿರುವ ಹಳ್ಳಿಗಳೇ ಹೆಚ್ಚು ಬಳಕೆದಾರರನ್ನೂ ಹೊಂದಿದ್ದು, ವ್ಯಾಪಾರಿ ಮತ್ತು ಬಳಕೆದಾರರ ನಡುವೆ ಇದ್ದ ದಲ್ಲಾಳಿಗಳ ಹಾವಳಿ ತಡೆದಿದ್ದೇವೆ. ಇದರಿಂದ ಗ್ರಾಹಕರು ಮತ್ತು ರೈತರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು, ಹಳ್ಳಿಗಳು ಆರ್ಥಿಕವಾಗಿ ಸದೃಢವಾಗುತ್ತಿವೆ.
ಭಾರತದಲ್ಲೂ ಶೂನ್ಯ ಬಂಡವಾಳ ಕೃಷಿಯಿಂದ ಆನೇಕರು ಆರ್ಥಿಕ ಸ್ವಾವಲಂಬಿಗಳಾಗಿರುವುದನ್ನು ಕಂಡಿದ್ದೇವೆ. ಇಂಥ ಪರಿಸರ ಸ್ನೇಹಿ ಕೃಷಿಯಿಂದ ಮಾತ್ರ ರೈತರು ಆತ್ಮಗೌರವದಿಂದ ಬದುಕಲು ಸಾಧ್ಯ. ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ಈ ಪದ್ಧತಿಯಲ್ಲಿ ಬೆಳೆದ ಭತ್ತ, ರಾಗಿ, ಜೋಳ, ಕಬ್ಬು, ಬದನೆ, ಬೆಂಡೆ ಮತ್ತಿತರ ಬೆಳೆ ನೋಡಿದಾಗ ನನಗೆ ಆಶ್ಚರ್ಯವಾಯಿತು. ಬಹು ಸಾಲು ಪದ್ಧತಿಯನ್ನೂ ಅಳವಡಿಸಿಕೊಂಡಿರುವುದು ಇದರ ವಿಶೇಷ. ಈ ಕ್ರಮಗಳನ್ನು ಶ್ರೀಲಂಕಾದಲ್ಲೂ ಅಳವಡಿಸುತ್ತೇವೆ. ಇಂಥ ಪರ್ಯಾಯ ದಾರಿಗಳ ಮೂಲಕವಷ್ಟೇ ರೈತರು ಜಾಗತೀಕರಣದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂದರು. ಒಟ್ಟಿನಲ್ಲಿ ಸರಳ ಕೃಷಿ ಪದ್ಧತಿಗಳು ಎಲ್ಲೆಡೆ ಬಳಕೆಗೆ ಬರುತ್ತಿರುವುದು ಸಂತೋಷದ ವಿಚಾರ.

ದಾಸ್ಯದ ನಾಡಿನ ಮಾನವತೆಯ ಮುಖವಾಣಿ

ದೇವರುಗಳು ಬಡಜನರ ಬದುಕನ್ನು ಮೌಢ್ಯ, ಭಯ, ತಲ್ಲಣಗಳಿಂದ ನಿಯಂತ್ರಿಸುತ್ತವೆ. ಅವರ ಸಾಹಸೋನ್ಮುಖತೆ, ಹಿರಿಮೆಗಳಿಗೆ ತಡೆಯೊಡ್ಡುತ್ತವೆ. ಮಾನವನನ್ನು ಕುಬ್ಜನನ್ನಾಗಿಸಿ, ದಾಸನನ್ನಾಗಿ ಮಾಡಿಕೊಂಡಿವೆ. ಆದ್ದರಿಂದ ದೇವರುಗಳೇ ಕುಬ್ಜರ ಶತ್ರುಗಳು ಎಂಬ ನಿರ್ಧಾರಕ್ಕೆ ಬಂದಿದ್ದ. ‘ಚಿತ್ರಹಿಂಸೆ ಇಲ್ಲವೆ ಪಿಸ್ತೂಲಿನಿಂದ ಧರ್ಮಶ್ರದ್ಧೆಯನ್ನು ಖರೀದಿಸಬಲ್ಲ ಅಥವಾ ನಮ್ಮ ನೆತ್ತರನ್ನು ಉರಿಸಬಲ್ಲ ದೇವರುಗಳವರೆಲ್ಲರೂ....’ ಎಂದು ದೇವರ ಹೆಸರಿನಲ್ಲಿ ನಡೆಯುವ ಕೃತ್ರಿಮತೆಯನ್ನೂ, ಅವುಗಳ ಮೂಲಕ ಸಮಾಜದಲ್ಲಿ ಸೃಷ್ಟಿಯಾಗುವ ಕುತರ್ಕಗಳನ್ನು ಟೀಕಿಸಿದ. ಕಲ್ಪಿತ ದೇವರುಗಳ ಮೌಢ್ಯವನ್ನು ಪ್ರಶ್ನಿಸಿದ. ಅವನ ಹೆಸರು ಪಾಬ್ಲೊ ನರೂಡ. ದೇಶ ಚಿಲಿ, ಭಾಷೆ ಸ್ಪ್ಯಾನಿಷ್.
ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ೧೨ ಜುಲೈ ೧೯೦೪ರಂದು ಜನಿಸಿದ ಈತ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಾಯ್ನಾಡಿನ ಜನರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅರಿವಿಗಾಗಿ ತನ್ನನ್ನು ಸಮರ್ಪಿಸಿಕೊಂಡ. ಈತನ ನಿಜವಾದ ಹೆಸರು ನೆಫ್ತಾಲಿ ರಿಕಾರ್ಡೋ. ಜಕೊಸ್ಲಾವಾಕಿಯಾದ ಸಾಹಿತಿ ಜಾನ್ ನೆರೂಡನ ಕೃತಿಗಳಿಂದ ಪ್ರಭಾವಿತನಾಗಿದ್ದರಿಂದ ತನ್ನ ಕಾವ್ಯ ನಾಮವನ್ನು ಪಾಬ್ಲೊ ನೆರೂಡ ಎಂದು ಇಟ್ಟುಕೊಂಡಿದ್ದ.
ಚಿಲಿಯ ವಸಾಹತುಶಾಯಿ ಯುಗದ ಡಿ ಲಾ ಕೈಜ್ ನಂತರ ಬಂದ ನವೀನ ಪಂಥದ ಕವಿ ರುಬೆನ್ ಡೇರಿಯೊ ಸಮಾಜದ ಓರೆ ಕೊರೆಗಳನ್ನು ತಿದ್ದಲು ವಿಫಲನಾದ ಸನ್ನಿವೇಶದಲ್ಲಿ ನೆರೂಡ ಕಾವ್ಯಲೋಕ ಪ್ರವೇಶಿಸಿದ. ಸಾಮಾಜಿಕ ಜಾಗೃತಿಯೇ ಇಲ್ಲದ ನಾಡಿನಲ್ಲಿ ನೆರೂಡನ ಪ್ರವೇಶ ಕತ್ತಲ ಸಾಮ್ರಾಜ್ಯದಲ್ಲಿ ಬೆಳಕಿನ ಕಿಂಡಿಯೊಂದನ್ನು ಕಂಡಂತಾಯಿತು. ನವೀನಪಂಥದ ಏಕತಾನತೆ ಜನರ ಸ್ವಾಭಿಮಾನ ಆತ್ಮಗೌರವವನ್ನು ಹೊಡೆದೆಬ್ಬಿಸದ ಕಾರಣ ಫ್ರಾನ್ಸ್, ಜರ್ಮನಿ, ಪೋರ್ಚುಗೀಸ್ ಇನ್ನಿತರ ಐರೋಪ್ಯ ರಾಷ್ಟ್ರಗಳ ಉಸ್ತುವಾರಿ ನಾಯಕತ್ವವನ್ನು ಪ್ರಶ್ನಿಸಲಾಗದಷ್ಟು ಜನರ ಮನಸುಗಳು ಜಡ್ಡುಗಟ್ಟಿದ್ದವು. ಅವರಿಗೆ ದಾಸ್ಯಕ್ಕೂ ಸ್ವಾತಂತ್ರ್ಯಕ್ಕೂ ನಡುವಿನ ವ್ಯತ್ಯಾಸವೇ ಗೊತ್ತಾಗದಂಥ ಅಂಧಕಾರ ಕವಿದಿತ್ತು. ನೆರೂಡನ ಬರವಣಿಗೆಗಳು ಅವರನ್ನು ಕೆಣಕಿದವು. ಸ್ವ ಎಚ್ಚರದ ಪಾಠ ಹೇಳಿದವು. ಅವನ ಅತಿಯಾದ ಉತ್ಸಾಹ, ಸ್ವಾತಂತ್ರ್ಯ, ಜೀವನ ಪ್ರೀತಿ ಆರಂಭದಲ್ಲಿ ದಕ್ಷಿಣ ಅಮೆರಿಕನ್ನರೇ ಅನುಮಾನದಿಂದ ನೋಡುವಂತೆ ಮಾಡಿದ್ದವು. ಅದೇವೇಳೆಗೆ ಸಾಮ್ರಾಜ್ಯಶಾಹಿಗಳು ಅದನ್ನು ಪ್ರೇರೇಪಿಸಲು ಸಂಚು ರೂಪಿಸಿದ್ದರು ಆದರೆ ಫಲಿಸಲಿಲ್ಲ.
ನಂತರ ಆತ ಚಿಲಿಯ ರಾಜಕೀಯ, ಕಡುಬಡವರ ಗುಲಾಮಗಿರಿ, ಅವಮಾನದ ಬದುಕನ್ನು ತನ್ನ ಕಾವ್ಯದಲ್ಲಿ ಅಭಿವ್ಯಕ್ತಿಸಿದ. ಇದರಿಂದ ಎಚ್ಚರಗೊಂಡ ಚಿಲಿ ರಾಷ್ಟ್ರೀಯತೆಯ ಭಾಗವಾಗಿ ನೆರೂಡ ಹೊರಹೊಮ್ಮಿದ. ಕಾವ್ಯಲೋಕದಲ್ಲಿ ಉತ್ತುಂಗಕ್ಕೇರುತ್ತಿದ್ದ ಕಾಲದಲ್ಲಿ ಆತ ತನ್ನ ಹಳ್ಳಿ ಪೈರಾಟ್ ಬಿಟ್ಟು ಚಿಲಿಯ ಪ್ರಮುಖ ನಗರ ಸ್ಯಾಂಟಿಯಾಗೊಗೆ ಬಂದು ಅಲ್ಲಿನ ಸಾಹಿತಿಗಳನ್ನು, ಕಲಾವಿದರನ್ನು ಭೇಟಿ ಮಾಡಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ. ಆಗಲೇ ಆತ ಹರ್ಷೋತ್ಸವದ ಹಾಡು (La cancion dela Fiesta) ಬರೆದ. ಇದರಿಂದ ದೇಶದ ಆಂತರಿಕ ಜಾಗ್ರತೆಯನ್ನು ಗಮನಿಸಿದ ಅಲ್ಲಿನ ವಿದ್ವಾಂಸರು ‘ದಾಸ್ಯದಲ್ಲಿರುವ ದೇಶದ ಮಾನವತೆಯ ಮುಖವಾಣಿ’ ಎಂದು ಬಣ್ಣಿಸಿದ್ದರು. ಇದನ್ನು ತಿಳಿದ ಸರ್ವಾಕಾರಿಗಳು ದಕ್ಷಿಣ ಅಮೆರಿಕ ಇತಿಹಾಸದ ಅಂಚಿನಲ್ಲಿದೆ ಎಂದು ಟೀಕಿಸಿದ್ದರು.
ಲೋಕಾಂತದ ಜಿನುಗನ್ನು, ಏಕಾಂತದ ಮೊರೆತಗಳನ್ನು ಗ್ರಹಿಸುವಷ್ಟು ಸೂಕ್ಷ್ಮ ಮತೀಯನಾಗಿದ್ದ ನೆರೂಡ, ರಾಜಕಾರಣದ ಆಳವನ್ನು, ಸಾಹಿತ್ಯದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಂಡಿದ್ದ. ಆದ್ದರಿಂದಲೇ ಅನೇಕ ಬಾರಿ ಜಗತ್ತನ್ನು ಸುತ್ತಿದ. ಅವನಷ್ಟು ಲೋಕ ಸುತ್ತಿದ ಕವಿ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ ಎಂದು ಹೇಳುತ್ತಾರೆ. ಸ್ವಾತಂತ್ರ್ಯದ ಉಲ್ಲಾಸ ಉನ್ಮಾದದಲ್ಲಿದ್ದ ದೇಶಗಳಿಗೆ ಭೇಟಿ ನೀಡಿದಾಗ ತನ್ನ ನಾಡಿನ ಜನರ ಬೌದ್ಧಿಕ ದಾರಿದ್ರ್ಯ ಕಂಡು ಮರುಗುತ್ತಿದ್ದ. ಪೌರ್ವಾತ್ಯ ದೇಶಗಳು ತನ್ನ ದೇಶದ ಜನರಲ್ಲಿ ಧಾರ್ಮಿಕ ಕಲ್ಪನೆಗಳನ್ನು, ದೇವರ ಅಸ್ತಿತ್ವವನ್ನು ತುಂಬಿ ಬೌದ್ಧಿಕ ಗುಲಾಮಗಿರಿಗೆ ವೊಡ್ಡಿದ್ದನ್ನು ಕಂಡು ಸಿಡಿಮಿಡಿಗೊಳ್ಳುತ್ತಿದ್ದ. ದೇವರು ಧರ್ಮದ ಹೆಸರಿನಲ್ಲಿ ಮನುಷ್ಯ ಆತ್ಮಹೀನನೂ, ವಿಚಾರಹೀನನೂ ಆಗುತ್ತಿರುವುದಕ್ಕೆ ಬೇಸರಿಸುತ್ತಿದ್ದ.
ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಹಗಲಿರುಳು ದುಡಿದ. ಬಾಹ್ಯ ಕ್ರಿಯೆಗಳಿಗೂ ಆಂತರಿಕ ಎಚ್ಚರಕ್ಕೂ ನಡುವೆ ಇದ್ದ ಕಂದರವನ್ನು ಗುರುತಿಸುತ್ತ ಸಾರ್ವಜನಿಕ ವೇದಿಕೆಗಳಲ್ಲಿ ಜನರಿಗೆ ಅದನ್ನೇ ಬೋಸಿದ. ದೇಶದ ಬಡತನವನ್ನೇ ಬಿಂಬಿಸಿ ೧೯೫೦ರಲ್ಲಿ ‘ವಿಶ್ವಗೀತೆ’ ಕೃತಿ ಪ್ರಕಟಿಸಿದ. ಅದನ್ನು ದಕ್ಷಿಣ ಅಮೆರಿಕದ ಬೈಬಲ್ ಎಂದೇ ಹೇಳಲಾಗುತ್ತಿದೆ. ಇದರಲ್ಲಿ ನೆರೂಡ ಇತಿಹಾಸವನ್ನು ಕಾರ್ಲ್ ಮಾರ್ಕ್ಸ್‌ನ ದೃಷ್ಟಿಯಲ್ಲಿ ವ್ಯಾಖ್ಯಾನಿಸಿದ್ದಾನೆ. ಇದು ಭೂತದ ಹಳಹಳಿಕೆಯಲ್ಲಿ ಭವಿಷ್ಯದ ಉದಯೋನ್ಮುಖತೆಯ ಅಭಿವ್ಯಕ್ತಿ ಎಂದೂ ಹೇಳಲಾಯಿತು.
ಜೀವನವನ್ನು, ದೇಶವನ್ನು, ಸರಳತೆಯನ್ನು ಮೌನವನ್ನು, ಯೌವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಈ ಕವಿ ದುರಂತವನ್ನು ಅರಗಿಸಿಕೊಂಡು ನಗೆಬೀರಬಲ್ಲವನಾಗಿದ್ದ. ೧೯೩೬ರಲ್ಲಿ ಸ್ಪೇಯಿನ್ ದೇಶದ ರಾಜಧಾನಿ ಮ್ಯಾಡ್ರಿಡ್ ಹತ್ತಿ ಉರಿಯತೊಡಗಿತು. ಆಧುನಿಕ ಜನಪರ ಶಕ್ತಿಗಳು ಶೋಷಕ ಶಕ್ತಿಗಳ ಹೋರಾಟದಲ್ಲಿ ಫ್ರಾಂಕೊ ಎಂಬ ಸರ್ವಾಕಾರಿ ಅಕಾರಕ್ಕೆ ಬಂದ. ಆಗ ನೆರೂಡನ ಆಪ್ತಮಿತ್ರ ಮತ್ತು ಶ್ರೇಷ್ಠ ಕವಿ ಲೋರ್ಕಾನನ್ನು ಗಲ್ಲಿಗೇರಿಸಲಾಯಿತು. ಅದು ನೆರೂಡಗೆ ಆಘಾತವಾಯಿತು. ಅದುವರೆಗೆ ಮನುಷ್ಯನ ನೀಚ ಕೃತ್ಯಗಳನ್ನು ಅರ್ಥ ಮಾಡಿಕೊಂಡಿರದ ನೆರೂಡ ‘ಪ್ರಪಂಚ ಬದಲಾಗಿದೆ, ನನ್ನ ಕಾವ್ಯ ಕೂಡ ಬದಲಾಗಿದೆ. ಒಂದೇ ಒಂದು ಹನಿ ರಕ್ತ ಕಾವ್ಯದ ಸಾಲಿನ ಮೇಲೆ ಬಿದ್ದರೂ ಅದು ಅಲ್ಲಿ ಚಿರಂತನವಾಗುತ್ತಾ, ಅಳಿಸಲಾರದ ಪ್ರೇಮದಂತೆ ಸದಾ ಇರುತ್ತದೆ’ ಎಂದು ಬರೆದ.
೧೯೬೨ರಲ್ಲಿ ಇವನ ಸಮಗ್ರ ಕಾವ್ಯ ಬೆಳಕು ಕಂಡಿತು. ಸುಮಾರು ಎರಡು ಸಾವಿರ ಪುಟಗಳ ಈ ಕಾವ್ಯ ಅನೇಕ ಬಾರಿ ಮರು ಮುದ್ರಣ ಕಂಡಿದೆ. ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡಿದ್ದಾನೆಂದೂ, ಅವರ ವಾದದ ಸಮರ್ಥ ಪ್ರತಿಪಾದಕನೆಂದೂ ಈತನಿಗೆ ಅಮೆರಿಕ ತನ್ನ ದೇಶದಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿತ್ತು. ಇದಕ್ಕೆ ಜಗತ್ತಿನ ನಾನಾ ದೇಶಗಳ ಸಾಂಸ್ಕೃತಿಕ ಜೀವಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಫಲವಾಗಿ ೧೯೬೬ರಲ್ಲಿ ದೇಶ ಪ್ರವೇಶಕ್ಕೆ ಅಮೆರಿಕ ಅವಕಾಶ ನೀಡಿತು. ಇದೇ ವೇಳೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಆಗಿನ ಬ್ರಿಟಿಷ್ ಪ್ರಧಾನಿ ಮ್ಯಾಕ್ ಮಿಲನ್, ನೆರೂಡನನ್ನು ಆಹ್ವಾನಿಸಿ ಗೌರವ ಡಿ.ಲಿಟ್ ಪದವಿ ನೀಡಿ ಸನ್ಮಾನಿಸಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ದಕ್ಷಿಣ ಅಮೆರಿಕದ ಪ್ರಜೆಗೆ ಆ ಗೌರವ ದೊರೆತದ್ದು ಅದೇ ಮೊದಲು. ೧೯೭೧ರಲ್ಲಿ ಆತನಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಅದರ ಗೌರವ ಸನ್ಮಾನಗಳೆಲ್ಲ ಲ್ಯಾಟಿನ ಅಮೆರಿಕದ ಪ್ರಜೆಗಳಿಗೆ ಸಲ್ಲಬೇಕು ಎಂದು ಅರ್ಪಿಸಿದ. ಅದೇ ಹೊತ್ತಿನಲ್ಲಿ ನಡೆದ ಚುನಾವಣೆಯಲ್ಲಿ ಆತ ಬೆಂಬಲಿಸುತ್ತಿದ್ದ ಸೋಷಲಿಸ್ಟ್ ಪಾರ್ಟಿ ಬಹುಮತ ಪಡೆದಿತ್ತು ಅಧ್ಯಕ್ಷರಾಗುವಂತೆ ನೆರೂಡನನ್ನು ಆಹ್ವಾನಿಸಿತು. ಅದಕ್ಕೆ ಒಪ್ಪದೆ ತನ್ನ ಮಿತ್ರ, ಶ್ರೇಷ್ಠರಾಜಕಾರಣಿ ಅಯೆಂಡೆಯನ್ನು ಅಧ್ಯಕ್ಷನಾಗಲು ಬೆಂಬಲಿಸಿದ. ೧೯೭೩ರಲ್ಲಿ ಅಮೆರಿಕ ಪಿತೂರಿ ನಡೆಸಿ ಅಯೆಂಡೆಯನ್ನು ಕೊಲ್ಲಿಸಿ ಸರ್ವಾಕಾರ ಸ್ಥಾಪಿಸಿತು. ರಾಷ್ಟ್ರೀಯವಾದಿ ಚಿಲಿಯನ್ನರಿಗೆ ಮತ್ತು ಸರ್ವಾಕಾರಿಗಳ ನಡುವೆ ಮತ್ತೊಮ್ಮೆ ಸಂಘರ್ಷ ಆರಂಭವಾಯಿತು.
ಅದೇ ಹೊತ್ತಿಗೆ ನೆರೂಡ ಫ್ರಾನ್ಸ್‌ನಿಂದ ಚಿಲಿಗೆ ಮರಳಿದ್ದ. ಈ ಸಂಘರ್ಷದಲ್ಲಿ ಅಮೆರಿಕದ ಸಿ.ಐ.ಎ. ಕೈವಾಡವಿರುವುದನ್ನು ಮನಗಂಡು ಮತ್ತೊಮ್ಮೆ ಸಾರ್ವಜನಿಕ ರಂಗಕ್ಕೆ ಧುಮುಕಿದ. ಆಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ನೆರೂಡ, ಅಧ್ಯಯನ, ಅನಾರೋಗ್ಯ ಮರೆತು ರಾಷ್ಟ್ರೀಯವಾದಿ ಚಿಲಿ ಮುಖಂಡರನ್ನು ಭೇಟಿ ಮಾಡಿ ನಾಡಿನ ಉಳಿವು ಅಳಿವಿನ ಬಗ್ಗೆ ಮನದಟ್ಟು ಮಾಡಿಕೊಟ್ಟ. ಆದರೂ ಪ್ರಯೋಜನವಾಗಲಿಲ್ಲ. ಕೆಲವೇ ದಿನಗಳಲ್ಲಿ ನೌಕಾಪಡೆ ಮತ್ತು ಭೂಸೇನೆ ರಾಷ್ಟ್ರೀಯವಾದಿ ಚಿಲಿಯರ ಮಾರಣಹೋಮ ನಡೆಸಿದವು. ೧೯೭೩ ಸೆಪ್ಟೆಂಬರ್ ೨೩ರಂದು ಸರ್ವಾಕಾರಿಗಳ ಕುತಂತ್ರಕ್ಕೆ ನೆರೂಡ ಬಲಿಯಾದ. ತೀವ್ರ ‘ಅಸ್ವಸ್ಥತೆಯಿಂದ ನಿಧನ’ರಾದರೆಂದು ಸರಕಾರ ಹೇಳಿತು. ಅದೇ ಸಂದರ್ಭದಲ್ಲಿ ಸ್ಯಾಂಟಿಯಾಗೋದಲ್ಲಿದ್ದ ಕವಿಯ ಮನೆಯನ್ನು ಸರಕಾರ ನೆಲಸಮ ಮಾಡಿತು. ಆತನ ಅಪ್ರಕಟಿತ ಲೇಖನಗಳು, ಕೃತಿಗಳನ್ನು ಬೆಂಕಿ ಹಚ್ಚಿ ಸುಟ್ಟು ಆತನ ಕುರುಹುಗಳನ್ನು ನಾಶಮಾಡಿತು. ದಾಸ್ಯವಿಮೋಚನೆಗೆ ಜೀವನ ಪರ್ಯತ ಶ್ರಮಿಸಿದ ನೆರೂಡಾನ ಚಿಂತನೆಗಳು ಯಾವುದೋ ಒಂದು ದೇಶಕ್ಕೆ, ಭಾಷೆಗೆ, ಕಾಲಕ್ಕೆ ಸೀಮಿತವಲ್ಲ, ಅವು ಸಾರ್ವಕಾಲಿಕ.
ತನ್ನ ಮಿತ್ರ ಸಿಜರ್ ವ್ಯಾಲೇಜೋ ಕುರಿತು ನೆರೂಡ ಬರೆದ ಕವನವೊಂದರ ಸಾಲುಗಳು ಹೀಗಿವೆ ಇವು ಆತನಿಗೂ ಅನ್ವಯವಾದದ್ದು ವಿಪರ್ಯಾಸ.
ಆ ಮಹಾ ಪಾತಕವನ್ನು,
ನಂಜಿನೌತಣವನ್ನು,
ಬುಡಮಟ್ಟ ಶೋಸುವ ಒಬ್ಬನೂ ಸಿಕ್ಕಿಲ್ಲ.
ಮತ್ತೆಂದೂ ಮುಗುಳ್ನಗದ ಮಹತ್ತೊಂದು ಮರೆಯಾಯ್ತು;
ಮಡಿದು ಮನ್ವಂತರಗಳಲ್ಲಿ ಒಂದಾದ ಆತ.

ಸುಬ್ಬಣ್ಣಗೆ ರಂಗಶ್ರದ್ಧಾಂಜಲಿ

ಹೆಗ್ಗೋಡಿನ ನೀನಾಸಂ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ದೈಹಿಕವಾಗಿ ನಮ್ಮನ್ನಗಲಿ ಇದೇ ಜುಲೈ ೧೬ಕ್ಕೆ ಮೂರು ವರ್ಷಗಳು ಮುಗಿದು ಹೋಗಲಿವೆ. ಭಾರತದ ಗ್ರಾಮೀಣ ಸಂಸ್ಕೃತಿಗೆ ಜಗತ್ತನ್ನು ಪರಿಚಯಿಸಿದ ಅಥವಾ ಜಗತ್ತಿಗೆ ಭಾರತದ ಗ್ರಾಮಗಳನ್ನು ಪರಿಚಯಿಸಿದ ಸುಬ್ಬಣ್ಣನವರಿಗೆ ಪ್ರತೀ ವರ್ಷ ರಂಗ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ.
ಆಧುನಿಕತೆಯ ಅಬ್ಬರದಲ್ಲಿ, ಸಿನಿಮಾಗಳು ರಂಗಭೂಮಿಯನ್ನು ಮಸುಕುಗೊಳಿಸುತ್ತಿವೆ ಎನ್ನುವ ಹೊತ್ತಿನಲ್ಲಿ ‘ನೀನಾಸಂ ತಿರುಗಾಟ’ ಆರಂಭಿಸಿದ ಸುಬ್ಬಣ್ಣ ನಿಂತ ನೀರಾಗಿದ್ದ ಕರ್ನಾಟಕದ ರಂಗ ಭೂಮಿಗೆ ಚಲನಶೀಲತೆಯನ್ನು, ಹೊಸತನವನ್ನು ತಂದುಕೊಟ್ಟರು. ಜಗತ್ತಿನ ಪ್ರಮುಖ ನಾಟಕಗಳನ್ನು ಕನ್ನಡಿಗರಿಗೆ, ಕನ್ನಡಕ್ಕೆ ತಂದುಕೊಟ್ಟು ರಂಗಭೂಮಿಯ ಹೊಸ ಸಾಧ್ಯತೆಗಳನ್ನು ಪರಿಚಯಿಸಿದರು ವಿಶ್ವ ವಿದ್ಯಾಲಯಗಳಿಗೆ ಸೀಮಿತವಾಗಿದ್ದ ವಿಚಾರಗೋಷ್ಠಿಗಳನ್ನು ಹಳ್ಳಿಯಲ್ಲಿ ಆರಂಬಿಸಿ ಶ್ರೀಸಾಮಾನ್ಯನೂ ಭಾಗವಹಿಸುವಂತೆ ಮಾಡಿದರು.
ಗ್ರಾಮ ಭಾರತದ ಎಲ್ಲ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಪರಿಣಾಮಗಳನ್ನು ತಿಳಿಸುವ ಕೆಲಸಕ್ಕೆ ಮುಂದಾದ ಸುಬ್ಬಣ್ಣ, ಅದಕ್ಕಾಗಿ ಚರ್ಚೆಗಳನ್ನೇರ್ಪಡಿಸಿ ಹೊಸ ಸವಾಲುಗಳನ್ನು ಎದುರಿಸುವ ದಾರಿ ತೋರಿದರು. ಉದಾರೀಕರಣದ ಸಾಧಕ ಬಾಧಕಗಳನ್ನು ಅರಿಯುವ ಹೊಸ ಪಡೆಯನ್ನೇ ಅಣಿಗೊಳಿಸಿದರು. ಜನಾಶಯಗಳ ಸೂಕ್ಷ್ಮಗಳನ್ನು ಅರಿತು ಯೋಜನೆ ರೂಪಿಸಿ, ಹೆಗ್ಗೋಡು ಮತ್ತು ಸುತ್ತ ಮುತ್ತಲ ಗ್ರಾಮಗಳ ಯುವಕರಲ್ಲಿ ರಂಗಭೂಮಿಯ ಅಭಿರುಚಿ ಬೆಳೆಸಿದ್ದಾರೆ. ಆ ಕಾರಣದಿಂದಲೇ ಜಗತ್ತಿನ ಪ್ರಮುಖ ನಾಟಕಕಾರರು, ನಿರ್ದೇಶಕರು ಇಂದಿಗೂ ತಮ್ಮೂರಿನವರಂತೆ, ಪಕ್ಕದ ಮನೆಯವರಂತೆ ಸದಾ ಚೆರ್ಚೆಗೊಳಗಾಗುತ್ತಿರುತ್ತಾರೆ. ಅಂಥ ರಂಗ ಜಂಗಮನಿಗೆ ಪ್ರತಿ ವರ್ಷ ಹೆಗ್ಗೋಡು ಮತ್ತು ಸುತ್ತಮುತ್ತಲ ಗ್ರಾಮದ ಯುವಕರು ನಾಟಕದ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತ ಬಂದಿದ್ದಾರೆ. ಅವರ ನೆನಪಿಗಾಗಿ ಚರ್ಚಾಗೋಷ್ಠಿಗಳೂ ನಡೆಯುತ್ತಿವೆ.
ಅಂದು ಬೆಳಗ್ಗೆ ‘ಸತ್ಯದ ಪರಿಕಲ್ಪನೆಗಳು’ ಕುರಿತು ಚರ್ಚೆ ಏರ್ಪಡಿಸಲಾಗಿದೆ. ವಿಜಯಶಂಕರ್ ಮತ್ತು ಓ.ಎಲ್. ನಾಗಭೂಷಣ ಸ್ವಾಮಿ ಅವರು ಮಾತನಾಡಲಿದ್ದಾರೆ. ಮಧ್ಯಾಹ್ನ ಚಲನಚಿತ್ರ ಪ್ರದರ್ಶನವಿದೆ. ಸಂಜೆ ಸ್ಥಳೀಯ ಹವ್ಯಾಸಿ ಕಲಾವಿದರಿಂದ ‘ಆಕಾಶ ಬುಟ್ಟಿ’ ನಾಟಕ ಪ್ರದರ್ಶನವಿದೆ. ಜಯಂತ ಕಾಯ್ಕಿಣಿಯವರು ತಮ್ಮ ಅಮೃತಬಳ್ಳಿ ಮತ್ತು ಕಷಾಯ ಕಥಾ ಸಂಕಲನದಿಂದ ‘ಪ್ರಕಾಶ ವರ್ಷ, ಅಂತಪುರದೊಳಗೆ, ಮಿಥುನ್ ನಂ.೨’ ಕಥೆಗಳನ್ನು ಆಯ್ದುಕೊಂಡು ನಾಟಕ ರಚಿಸಿದ್ದಾರೆ. ಮುಂಬೈ ಜೀವನದ ಸುಖ-ದುಃಖಗಳನ್ನೇ ವಸ್ತುವಾಗಿಸಿಕೊಂಡಿರುವ ನಾಟಕವನ್ನು ರಘುನಂದನ ನಿರ್ದೇಶಿಸುತ್ತಿದ್ದಾರೆ.
ಶಿಕ್ಷಣ ಎನ್ನುವುದು ನಗರದ ಶ್ರೀಮಂತಿಕೆ ಅನುಭವಿಸಲು ಎನ್ನುವ ಹೊತ್ತಿನಲ್ಲೇ ಗಾಂ ಕನಸಿನ ಗ್ರಾಮ ಸ್ವರಾಜ್ಯದ ಹಾದಿ ತುಳಿದು ಹಳ್ಳಿಯ ಮೆಟ್ಟಿಲಲ್ಲೇ ಜಾಗತಿಕ ಸವಾಲುಗಳಿಗೆ ಮುಖಾಮುಖಿಯಾಗುವ ಮೂಲಕ ಕನ್ನಡಕ್ಕಿರುವ ಶಕ್ತಿಯನ್ನು ಪರಿಚಯಿಸಿದ ಸುಬ್ಬಣ್ಣ ಭೌತಿಕವಾಗಿ ನಮ್ಮನ್ನಗಲಿದರೂ ಕನ್ನಡದ ಎಲ್ಲ ಚಿಂತನೆಗಳಲ್ಲಿ ಇದ್ದಾರೆ. ಅಂಥ ಸುಬ್ಬಣ್ಣನನ್ನು ನೆನೆಯಲು ಅಂದು ನೀನಾಸಂಗೆ ನೀವೂ ಬನ್ನಿ.

ವಿಶ್ವ ವಾಣಿಜ್ಯ ಸಂಘಟನೆ

ದಿಲ್ಲಿಯಲ್ಲಿ ಎರಡು ದಿನ (ಸೆ. ೩,೪)ನಡೆದ ವಿಶ್ವ ವ್ಯಾಪಾರಿ ಸಂಘಟನೆಯ (ಡಬ್ಲ್ಯೂಟಿಒ) ವಾಣಿಜ್ಯ ಸಚಿವರ ಮಟ್ಟದ ಅನೌಪಚಾರಿಕ ಸಭೆ ಮುಕ್ತಾಯಗೊಂಡಿದೆ. ದೋಹಾ ಸುತ್ತಿನ ಸಂಧಾನ ಮಾತುಕತೆಗೆ ಸಂಬಂಸಿದಂತೆ ರಾಜಕೀಯ ಪ್ರಕ್ರಿಯೆ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು ಎಂಬುದು ವಾಣಿಜ್ಯ ಸಚಿವ ಆನಂದ ಶರ್ಮ ಅವರ ಅಂಬೋಣ. ಅಮೆರಿಕ, ಯೂರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ, ಬ್ರೆಜಿಲ್ ಸೇರಿದಂತೆ ೩೫ ಸದಸ್ಯ ರಾಷ್ಟ್ರಗಳ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಜುಲೈನಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಈ ಸಭೆ ಏರ್ಪಡಿಸಲಾಗಿತ್ತು. ಬರುವ ನವೆಂಬರ್ ೩೦ರಿಂದ ಡಿಸೆಂಬರ್ ೨ರವರೆಗೆ ಜಿನೀವಾದಲ್ಲಿ ಮತ್ತೆ ಮಾತುಕತೆಗಳು ಪುನಾರಂಭಗೊಳ್ಳಲಿವೆ.
ಈ ಮಾತುಕತೆಯಲ್ಲಿ ಭಾರತ ಪಾಲ್ಗೊಳ್ಳದಂತೆ ನಾನಾ ಜನಪರ ಸಂಘಟನೆಗಳು ಒತ್ತಾಯಿಸಿದ್ದವು. ಇದನ್ನು ಲೆಕ್ಕಿಸದೆ ಪ್ರತಿಭಟಿಸಿದ್ದ ಸಾವಿರಾರು ರೈತ ಮುಖಂಡರನ್ನು ಬಂಸಿ ಸಭೆ ನಡೆಯಿತು. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಈ ಮಾತುಕತೆಗಳಿಗೆ ಮೊದಲು ನಿರೀಕ್ಷಿಸಿದಷ್ಟು ಮಹತ್ವ ಬರಲಿಲ್ಲ ಮತ್ತು ಮಾಧ್ಯಮಗಳೂ ಕೂಡ ಈ ‘ಮಾತನ್ನು’ ಗಟ್ಟಿಯಾಗಿ ಕೇಳಿಸಿಕೊಂಡಂತೆ ಕಾಣಲಿಲ್ಲ. ಜಾಗತೀಕರಣದ ಬಲೆಯಲ್ಲಿ ಎಲ್ಲ ದೇಶಗಳನ್ನು ಹಿಡಿದಿಟ್ಟುಕೊಳ್ಳಲು ಸಂಚು ರೂಪಿಸಿರುವ ಬಲಾಢ್ಯ ದೇಶಗಳು ಮೊದಲಿನಷ್ಟು ಶಕ್ತಿಯುತವಾಗಿ ಉಳಿಯದಿರುವುದನ್ನು ಇದು ಸಾಂಕೇತಿಸುತ್ತದೆ.
ಆರಂಭದಲ್ಲಿ ಕೃಷಿಯನ್ನು ಗ್ಯಾಟ್‌ನಿಂದ ಹೊರಗಿಡುವಂತೆ ಒತ್ತಾಯಿಸಿದ್ದ ಅಮೆರಿಕ ನಂತರ ಅದನ್ನು ಗ್ಯಾಟ್ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿತ್ತು. ಹಾಗೇನಾದರೂ ಆಗದಿದ್ದರೆ ತಾನು ಗ್ಯಾಟ್‌ನಿಂದಲೇ ಹೊರಗಿರುವುದಾಗಿ ಮೊಂಡಾಟ ಮಾಡಿತ್ತು. ಇಲ್ಲಿ ಇನ್ನೊಂದು ದೇಶದ ಹಿತ ಕಾಯುವುದಾಗಿ ಹೇಳುವುದು ಬರೀ ಬೊಗಳೆ. ಸಂಪೂರ್ಣ ಲೆಕ್ಕಾಚಾರ ಇರುವುದು ಲಾಭ ನಷ್ಟದಲ್ಲಿ ಮಾತ್ರ. ಗ್ಯಾಟ್‌ನಿಂದ ಕೃಷಿಯನ್ನು ಹೊರಗಿಟ್ಟರೆ ಭಾರತ, ಚೀನಾ ಅಥವಾ ಬಡ ದೇಶಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು ಎನ್ನುವ ಭಯದಲ್ಲಿ ಹಾಗೆ ಮಾಡಿತ್ತು!
ಜಾಗತೀಕರಣ ಎಂದರೇನು?
ಜಾಗತೀಕರಣದ ಒಪ್ಪಂದ, ಅದರ ವ್ಯಾಪ್ತಿ, ವಿಸ್ತಾರ, ಕುಟಿಲತೆಗಳನ್ನು ಬಿಡಿಸಿ ಹೇಳುವುದು ಸ್ವಪ್ಪ ಕಷ್ಟ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಡರಾಷ್ಟ್ರಗಳ ಮೇಲೆ ಹಿಡಿತ ಸಾಸಲು ಲೂಟಿಕೋರ ದೇಶಗಳು ರೂಪಿಸಿಕೊಂಡಿರುವ ಒಂದು ಜಾಲ ಅಥವಾ ಯಜಮಾನ ಸಂಸ್ಕೃತಿಯ ಭಾಗ! ಇಂಥ ಯಜಮಾನ ಸಂಸ್ಕೃತಿಯನ್ನು ರೂಪಿಸಿದವರು ಬಡದೇಶದ ಪ್ರತಿನಿಗಳೇನಲ್ಲ. ಯಾವ ರಾಷ್ಟ್ರಗಳನ್ನು ತಮ್ಮ ವಸಾಹತಾಗಿ ಮಾಡಿಕೊಂಡು ಅಲ್ಲಿನ ಸಂಪತ್ತಿನ ರುಚಿ ಕಂಡಿದ್ದರೋ ಆ ದೇಶಗಳ ನಾಯಕರು ಮತ್ತೆ ಮತ್ತೆ ರಚಿ ನೋಡಲು ರೂಪಿಸಿದ ಕುತಂತ್ರ ಇದು. ಎರಡನೇ ಮಾಹಾ ಯುದ್ಧದ ನಂತರ ಬಂಡವಾಳ ಬರಿದು ಮಾಡಿಕೊಂಡಿದ್ದ ಶ್ರೀಮಂತ ದೇಶಗಳು ಅದನ್ನು ತುಂಬಿಕೊಳ್ಳು ಜಾಗತೀಕರಣದಂಥ ಬಲೆ ಬೀಸಿ ಜಗತ್ತನ್ನೇ ತಮ್ಮ ವಸಾಹತಾಗಿಸಿಕೊಳ್ಳುತ್ತಿವೆ. ಅದಕ್ಕೆ ಒಪ್ಪದಿದ್ದರೆ ಯುದ್ಧದಂಥ ಅಸ್ತ್ರಗಳನ್ನು ಪ್ರಯೋಗಿಸುತ್ತವೆ. ಇತ್ತೀಚಿನ ಉದಾಹರಣೆ ಎಂದರೆ ಕೊಲ್ಲಿ ರಾಷ್ಟ್ರಗಳಲ್ಲಿನ ತೈಲಕ್ಕಾಗಿ ಅಮೆರಿಕ ನಡೆಸಿದ ಯುದ್ಧ ಮತ್ತು ಸದ್ದಾಂ ಹುಸೇನ್‌ಗೆ ಗಲ್ಲು. ಇವೆಲ್ಲ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದೌರ್ಜನ್ಯಗಳು. ಶ್ರೀಮಂತ ದೇಶಗಳಿಗೆ ಇಂಥ ದೌರ್ಜನ್ಯದ್ದೇ ಒಂದು ಕರಾಳ ಇತಿಹಾಸವಿದೆ ಅದರ ಒಂದು ಭಾಗವೇ ಜಾಗತೀಕರಣ.
ಫುಲ್‌ಸ್ಟಾಪ್ ಇಲ್ಲದ ಮಾತುಗಳು:
ಕಾನ್‌ಕುನ್, ಉರುಗ್ವೆ, ಬ್ಲೆರ್‌ಹೌಸ್ ಒಪ್ಪಂದ, ಗ್ಯಾಟ್ ಒಪ್ಪಂದ, ಡಂಕೆಲ್ ಪ್ರಸ್ತಾವ, ದೋಹಾ ಮಾತುಕತೆ... ಹೀಗೆ ಒಂದಲ್ಲಾ ಒಂದು ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ಇವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ದೇಶಗಳ ಖಾಸಗಿ ವಿಚಾರಗಳಂತಾಗಿವೆ. ರಫ್ತು ಮತ್ತು ಆಮದಿಗೆ ಸಂಬಂಸಿದಂತೆ ಮಾತುಕತೆಗಳು ನಡೆಯುತ್ತಿವೆ. ಇಂಥ ವಿಚಾರದಲ್ಲಿ ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿರುವ ಭಾರತ ಅಥವಾ ತೃತೀಯ ಜಗತ್ತಿನ ದೇಶಗಳು ಕೋಲೇ ಬಸವನಂತೆ ತಲೆ ಅಲ್ಲಾಡಿಸದೆ ಸಾಮ್ರಾಜ್ಯಶಾಹಿ ದೇಶಗಳ ಕೃಷಿ ವಿರೋ ಧೋರಣೆಗಳನ್ನು ಖಂಡಿಸಬೇಕು.
ಜಾಗತೀಕರಣದ ಸರಿ ತಪ್ಪುಗಳು ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಭಾರತ ಸಹಿ ಹಾಕಿದ್ದರಿಂದ ಕೃಷಿ ಕ್ಷೇತ್ರ ಹಲವಾರು ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಮತ್ತು ಜಾಗತಿಕ ನಿಯಮಗಳೆಂಬ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಮೆರಿಕ ಮತ್ತು ಯೂರೋಪಿನ ಶ್ರೀಮಂತ ದೇಶಗಳು ತಮ್ಮ ದೇಶದ ರೈತರಿಗೆ ಶಕ್ತಿ ಮೀರಿ ಸಬ್ಸಿಡಿ ನೀಡುತ್ತಿವೆ. ಅದೇ ಭಾರತ ನೀಡಿದರೆ ಚಕಾರ ಎತ್ತುತ್ತವೆ. ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕದಂಥ ನಿಯಮಗಳನ್ನು ರೂಪಿಸಬೇಕಿದೆ.
ಸಂಕುಚಿತ ಅಮೆರಿಕ:
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಮೆರಿಕದ ಒತ್ತಡಕ್ಕೆ ಮಣಿದು ಕೃಷಿ ಸಬ್ಸಿಡಿ ಕಡಿತ ಮಾಡುತ್ತಿವೆ. ಪ್ರತಿ ವರ್ಷ ತನ್ನ ರೈತರಿಗೆ ೩೦ ಸಾವಿರ ಶತಕೋಟಿ ಡಾಲರ್ ಮೊತ್ತದ ಸಬ್ಸಿಡಿ ನೀಡುತ್ತಿರುವ ಅಮೆರಿಕ, ಇತರೆ ದೇಶಗಳು ಸಬ್ಸಿಡಿ ನೀಡದಂತೆ ಆದೇಶ ರವಾನಿಸುತ್ತದೆ. ಈ ಕಾರಣದಿಂದ ಸಣ್ಣ ಸಣ್ಣ ರಾಷ್ಟ್ರಗಳು ಕೃಷಿಯಲ್ಲಿ ಸ್ವಾವಲಂಬನೆ ಸಾಸಲು ಸಾಧ್ಯವಾಗದೆ ತತ್ತರಿಸುತ್ತಿವೆ. ಇದರಿಂದ ಯಾರಿಗಾದರೂ ಅರ್ಥವಾಗುತ್ತದೆ ಜಾಗತೀಕರಣದ ಗುರಿಗಳೇನು ಎನ್ನುವುದು. ಭಾರತ ಅಥವಾ ಸಮಾನ ಮನಸ್ಕ ರಾಷ್ಟ್ರಗಳು ಸಬ್ಸಿಡಿ ವಿಚಾರದಲ್ಲಿ ಅಮೆರಿಕದ ಅಣತಿಯಂತೆ ನಡೆಯುವ ಬದಲು ಅದರ ಕುತಂತ್ರಗಳನ್ನು ವಿಶ್ವ ವ್ಯಾಪಾರಿ ಸಂಘಟನೆಯ ಸಭೆಗಳಲ್ಲಿ ಪ್ರಶ್ನಿಸಬೇಕು.
ಅಮೆರಿಕದಲ್ಲಿ ಸಾಕುವ ಪ್ರತಿ ಹಸುವಿಗೆ ೧೦ ಹೆಕ್ಟೇರ್ ಭೂಮಿ ಮೀಸಲಿದೆ. ಭಾರತದಲ್ಲಿ ಪ್ರತಿ ಕುಟುಂಬಕ್ಕೆ ೧.೪೭ ಹೆಕ್ಟೇರ್ ಭೂಮಿ ಇದೆ. ಯೂರೋಪಿನಲ್ಲಿ ಸಾಕುವ ಪ್ರತಿ ಹಸುವಿಗೆ ದಿನವೊಂದಕ್ಕೆ ೧೫೦ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ದಿನದ ಆದಾಯ ೫೦ ರೂ. ಮೀರುವುದಿಲ್ಲ. ಇಂಥ ಅಸಮಾನತೆಗಳು ತುಂಬಿ ತುಳುಕುತ್ತಿರುವ ಸನ್ನಿವೇಶದಲ್ಲಿ ಭಾರತೀಯರನ್ನು ಭಾರತದ ನೆಲೆಯಲ್ಲೇ ಯೋಚಿಸಬೇಕು. ತಲಾ ಆದಾಯದ ವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಬ್ರಿಟಿಷ್ ವಸಾಹತು ಮೂಲಕ ದೇಶ ಪ್ರವೇಶ ಮಾಡಿದ ಕೈಗಾರಿಕೀಕರಣ ಕೆಲವು ಕೇಡಿನ ಅಂಶಗಳನ್ನು ದೇಶದ ಆರ್ಥಿಕತೆಯ ಮೇಲೆ ಹೇರಿತು. ಆಗಲೇ ಕೆಲವು ಕುಲಕಸುಬುಗಳು ಸ್ವಲ್ಪ ಪ್ರಮಾಣದಲ್ಲಿ ನಲುಗಿದವು. ಆದರೆ ಇಂದಿನ ಮುಕ್ತ ಮಾರುಕಟ್ಟೆ ನೀತಿ ಕೃಷಿಯನ್ನು ಲಾಭದಾಯಕ ಉದ್ಯಮ ಮಾಡುವ ಹೆಸರಿನಲ್ಲಿ ಸಂಪೂರ್ಣ ನಾಶ ಮಾಡುತ್ತಿದೆ. ಅದಕ್ಕಾಗಿ ಶ್ರೀಮಂತ ವಿಶ್ವ ವಾಣಿಜ್ಯ ಸಂಘಟನೆಯನ್ನು ಸ್ಥಾಪಿಸಿಕೊಂಡಿವೆ. ಇದು ಜನಸಾಮಾನ್ಯರಿಗೆ ಗೊತ್ತಾಗದಂಥ ಗುಲಾಮಗಿರಿ.
ಎಣ್ಣೆ ಕಾಳು ವ್ಯಾಪಾರಕ್ಕೆ ಸಂಬಂಸಿದಂತೆ.೧೯೯೨ರಲ್ಲಿ ಅಮೆರಿಕ ಮತ್ತು ಯೂರೋಪ್ ನಡುವೆ ಏರ್ಪಟ್ಟಿದ್ದ ಕದನವನ್ನು ಸರಿಪಡಿಸಿಕೊಳ್ಳಲು ಮಾಡಿಕೊಂಡ ಒಪ್ಪಂದವನ್ನು ಇಂದು ಎಲ್ಲ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಸ್ಥಳೀಯ ಪಾನೀಯಗಳನ್ನು ನಾಶಮಾಡಿ ಪೆಪ್ಸಿ ,ಕೊಕಾಕೋಲಾದಂಥ ವಿಷ ಕುಡಿಸುವ ನೀತಿಗಳಿಗೆ ಮಾರಕವಾಗದಂತೆ ಕಾಯ್ದುಕೊಳ್ಳುವುದು ಮುಕ್ತ ಮಮಾರುಕಟ್ಟೆಯ ಉದ್ದೇಶ. ಇವೆಲ್ಲ ಕೃಷಿ ಸಾರ್ವಭೌಮತ್ವಕ್ಕೆ ತಡೆಯೊಡ್ಡುತ್ತಿರುವುದರಿಂದ ಇವುಗಳ ಸಮಸ್ಯೆಗಳ ಚರ್ಚೆಯೇ ಡಬ್ಲ್ಯೂಟಿಒ ಸಭೆಯ ಮುಖ್ಯ ವಿಷಯವಾಗಬೇಕು.

ಮಸನಬು ಫುಕೋಕಾ- ಇದು ಒಂದು ಹುಲ್ಲಿನ ಕ್ರಾಂತಿ

ಕೃಷಿಯೇ ಬದುಕಿನ ವಿಶ್ವ ವಿದ್ಯಾಲಯ. ಅದರಿಂದಲೇ ಬದುಕಿನ ಎಲ್ಲ ಸತ್ಯಗಳ ಅರಿವು ಸಾಧ್ಯ ಎಂದು ಪ್ರತಿಪಾದಿಸಿದವರು ಜಪಾನಿನ ಸಹಜ ಕೃಷಿಯ ಪಿತಾಮಹ ಮಸನಬು ಫುಕೋಕಾ.
ಮನುಷ್ಯ ಮತ್ತು ಕೃಷಿ ಅಥವಾ ಸಹಜ ಜೀವ ವೈವಿಧ್ಯಗಳನ್ನು, ವೈರುದ್ಯಗಳನ್ನು ಗಮನಿಸಿ ಐದು ದಶಗಳ ಹಿಂದೆಯೇ ಸಹಜ ಕೃಷಿ ಎಂಬ ಜೀವಪರ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದವರು ಮತ್ತು ಅದರೊಂದಿಗೆ ಬದುಕು ಕಟ್ಟಿಕೊಂಡವರು ಫುಕೋಕಾ.
ಪ್ರಕೃತಿ ಮತ್ತು ಮನುಷ್ಯನ ನಡುವೆ ಇದ್ದ ಸಹಜ ಸಂಬಧಗಳು ನಾಶವಾಗುತ್ತಿರುವ, ರಾಸಾಯನಿಕ ವಿಷ ಕಂದಕಗಳು ಸೃಷ್ಟಿಯಾಗುತ್ತಿರುವುದನ್ನು ತಡೆಯಬೇಕಾದರೆ ಅದು ಸಹಜ ಕೃಷಿಯಿಂದ ಮಾತ್ರ ಸಾಧ್ಯ ಎಂದು ಸಾರಿದ್ದವರು ಫುಕೋಕಾ. ತನ್ನ ಜೀವಿತದುದ್ದಕ್ಕೂ ರಾಸಾಯನಿಕ ಕೃಷಿಯನ್ನು ವಿರೋಸುತ್ತ ಸಹಜ ಕೃಷಿಗಾಗಿ ದುಡಿದ.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ್ದ ಫುಕೋಕಾ ಅಸಾಮಾನ್ಯ ಚಿಂತನೆಯ ತತ್ತ್ವಜ್ಞಾನಿಯಾಗಿ ಬೆಳೆದ. ಸಹಜ ಕೃಷಿಯ ಸಾಂದರ್ಭಿಕತೆಯನ್ನು ಅರಿತು ಅದನ್ನು ಸಾರ್ವತ್ರೀಕರಿಸುವತ್ತ ಹೆಜ್ಜೆಹಾಕಿದ. ಅದರಿಂದ ಅನೇಕಬಾರಿ ಎಡವಿ ಸೋತು ಮರುಗಿದ. ಜಗತ್ತು ಸಾಗುವ ದಿಕ್ಕನ್ನು ತಾನು ಗಮನಿಸುತ್ತಿಲ್ಲ ಎಂದು ಹತಾಶನಾದ. ಆದರೆ ಗುರಿಯಿಂದ, ನಂಬಿದ ಸಿದ್ಧಾಂತಗಳಿಂದ ವಿಮುಖನಾಗಲಿಲ್ಲ. ಸೋಲು ಗೆಲುವಿನ ಏರಿಳಿತಗಳನ್ನು ಸಮಾನವಾಗಿಯೇ ಸ್ವೀಕರಿಸಿ ಹಂತಹಂತವಾಗಿ ದೊರೆತ ಗೆಲುವನ್ನು ಮೆಟ್ಟಿಲಾಗಿ ಬಳಸಿಕೊಂಡು ಅಲ್ಲೇ ವಿಜಯ ಸಾಸಿದ. ನಿರ್ಲಕ್ಷ್ಯಕ್ಕೊಳಗಾಗಿದ್ದ ಸಹಜ ಕೃಷಿಯತ್ತ ಎಲ್ಲರೂ ಬರುವಂತೆ ಮಾಡಿದ ಅದಕ್ಕಾಗಿ ‘ಒಂದು ಹುಲ್ಲಿನ ಕ್ರಾಂತಿ’ ಎಂಬ ಪುಸ್ತಕ ಬರೆದು ತಾನು ಇಟ್ಟ ಗೆಲುವಿನ ಹೆಜ್ಜೆಗಳನ್ನು ಅದರಲ್ಲಿ ದಾಖಲಿಸಿದ. ಓದಿದ ಅನೇಕರು ಪ್ರಭಾವಿತರಾಗಿ ಸಹಜ ಕೃಷಿಯತ್ತ ಹೊರಳಿದರು.
ಬೇಸಾಯ ಮಣ್ಣಿನಲ್ಲಿರುವ ಅಸಂಖ್ಯ ಜೀವರಾಶಿಯನ್ನು ನಾಶಮಾಡುತ್ತದೆ ಭೂಮಿಗೆ ಉಳುಮೆ ಅನಗತ್ಯ, ರಸಾಯನಿಕ ಗೊಬ್ಬರವಂತೂ ಬಳಸಲು ಯೋಗ್ಯವೇ ಅಲ್ಲ ಎಂದು ಪ್ರತಿಪಾದಿಸಿದ ಅದರಂತೆ ತಾನೂ ನಡೆದು ಯಶಸ್ವಿಕೃಷಿನನೆನಿಸಿಕೊಂಡ ಅಂದಿನಿಂದ ಹೊಸ ‘ಸಹಜ ಕೃಷಿ’ ಪದ್ಧತಿಯನ್ನು ಜಾರಿಗೆ ತಂದ. ಅದೇ ಇಂದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ.
ಮೂಲತಃ ಕೃಷಿಕನಲ್ಲದಿದ್ದರೂ ಕೃಷಿಯ ಅನ್ವೇಷಕನಾಗಿ,ಅದರ ಆಳ ವಿಸ್ತಾರಗಳನ್ನು ತಿಳಿಸು ಜನರಿಗೆ ಹೇಳುತ್ತ ತತ್ವಜ್ಞಾನಿಯಾಗಿ ಕಂಗೊಳಿಸಿದ. ವರ್ತಮಾನದ ಜಗತ್ತಿಗೆ ಅನೇಕ ದೃಷ್ಟಿ ಕೋನದಿಂದ ಒಪ್ಪಿತವಾಗುವ ಸಿದ್ಧಾಂತ ಆತನದು.
ಹಲವಾರು ರೋಗ ರುಜಿನಗಳಿಂದ ಬಳಲುತ್ತಿರುವ, ಆಹಾರವೇ ವಿಷವಾಗುತ್ತಿರುವ ಈ ಹೊತ್ತಿನಲ್ಲಿ ಜಗತ್ತು ತಾನು ತಪ್ಪಿದ ದಾರಿಯನ್ನು ಹುಡುಕುತ್ತಿದೆ. ಅದಕ್ಕೆ ಫುಕೋಕ ಸಿದ್ದಾಂತಗಳಲ್ಲಿ ಉತ್ತರವಿದೆ. ‘ಆಸೆಗಳ ಜೈಲಿನಲ್ಲಿ ನಿಂತ ಮನುಷ್ಯ ಸಹಜ ಬದುಕನ್ನು ಮಾರಿಕೊಳ್ಳುತ್ತಾನೆ. ಅದರಿಂದ ಹೊರಬರಬೇಕಾದರೆ ಪ್ರಕೃತಿಯ ಸಹಜ ಸೌಂದರ್ಯದಿಂದ ಮಾತ್ರ ಸಾಧ್ಯ, ಪ್ರಕೃತಿಯನ್ನು ಕಲುಷಿತವಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಎಲ್ಲರದೂ’ ಎಂದು ಪ್ರತಿಪಾದಿಸಿದ್ದ ಉದಾತ್ತ ಜೀವಿಯನ್ನು ಇಂದು ಜಗತ್ತು ಸ್ಮರಿಸುತ್ತಿದೆ.

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ


ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ
ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!