Monday, October 12, 2009

ಇದು ಬ್ರ್ಯಾಂಡೆಡ್ ಭಾರತ

ಒಂದು ವೇಳೆ ಜಿ.ಎಂ. ತಂತ್ರeನ ಆಧಾರಿತ ಬೆಳೆಗಳಿಗೆ ಅವಕಾಶ ನೀಡಿದರೆ ಅದು ರಫ್ತಿಗೆ ದೊಡ್ಡ ಪೆಟ್ಟು ನೀಡುತ್ತದೆ. ಯೂರೋಪ್ ಹಾಗೂ ಇತರ ದೇಶಗಳು ಜಿ.ಎಂ. ಮುಕ್ತ ತಂತ್ರeನದಿಂದ ಬೆಳದದ್ದು ಎಂಬ ಕಾರಣಕ್ಕೆ ಭಾರತದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿವೆ
-ಅಭಿಜಿತ್ ಸೇನ್, ಕೃಷಿ ಆರ್ಥಿಕ ತಜ್ಞ

ಬೀಜ ವಿಧೇಯಕ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತದೆ. ರೈತರು ಹೈಬ್ರಿಡ್ ಬೀಜಗಳಿಗೆ ರಾಜಧನ ಪಾವತಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದೇಶದಲ್ಲಿ ಕುಲಾಂತರಿ ಬೀಜಗಳನ್ನು ತಯಾರಿಸುವ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗುತ್ತದೆ. ಈ ವಿಧೇಯಕಕ್ಕೆ ಅಂಗೀಕಾರ ನೀಡಿದರೆ ದೇಶದ ಆಹಾರ ಸುರಕ್ಷತೆ ಅಪಾಯಕ್ಕೆ ಸಿಲುಕಲಿದೆ.
ನಾನಾ ಕೃಷಿಪರ ಸಂಘಟನೆಗಳು
೨೯ ಜೂನ್ ೦೯ರಂದು ಸರಕಾರಕ್ಕೆ ಸಲ್ಲಿಸಿದ ಮನವಿ

ನಾವು ಇನ್ನು ಮುಂದೆ ಬ್ರ್ಯಾಂಡೆಡ್ ಭಾರತೀಯರಾಗಲಿದ್ದೇವೆ. ಕಾರಣ, ತಿನ್ನುವ ಕೆಲವು ತರಕಾರಿಗಳು ತಮ್ಮ ಮೇಲೊಂದು ಬ್ರ್ಯಾಂಡ್ ಅಂಟಿಸಿಕೊಂಡು ನಮ್ಮ ಮುಂದೆ ಪ್ರತ್ಯಕ್ಷವಾಗಲಿವೆ. ಅದೂ ಜಿ. ಎಂ. Genetically modified ಕುಲಾಂತರಿ ಬ್ರ್ಯಾಂಡ್! ಅದಕ್ಕಾಗಿ ಭಾರತೀಯ ಬೀಜ ಕಾಯಿದೆಯನ್ನು ತಿದ್ದಿ ನಮಗೆ ಬೇಕಾದಂತೆ ಬದಲಾಯಿಸಿಕೊಡಿ ಎನ್ನುವಂಥ ಹೀನ ಬೇಡಿಕೆಯನ್ನೂ ಬಹುರಾಷ್ಟ್ರೀಯ ಬೀಜ ಕಂಪನಿಗಳು ಸರಕಾರದ ಮುಂದಿಟ್ಟಿವೆ. ಜನಪರ ಹೋರಾಟಗಾರರು ಹಾಗೂ ಅಲ್ಲಲ್ಲಿ ಇರುವ ರಾಜಕೀಯ ಮುತ್ಸದ್ಧಿಗಳು ಇದನ್ನು ತಡೆದಿದ್ದಾರೆ ಅಷ್ಟರಮಟ್ಟಿಗೆ ನಮ್ಮ ಸಾಮಾಜಿಕ ಸ್ವಾಸ್ತ್ಯ ಹಾಳಾಗಿಲ್ಲ ಎನ್ನುವುದು ಸಂತೋಷ ವಿಚಾರ.
ಈ ವರ್ಷದ ಕೊನೆ ಹೊತ್ತಿಗೆ ನಾವು ಖಾಸಗಿ ಕಂಪನಿ ಬೀಜದಿಂದ ಬೆಳೆದ ಕುಲಾಂತರಿ ಬದನೆಯನ್ನು ತಿನ್ನಬೇಕಾಗುತ್ತದೆಂದು ಎಂದು ಕೆಲವು ಬಾಡಿಗೆ ಭಟ್ಟಂಗಿಗಳು ಭಾರತದಾಧ್ಯಂತ ಹರಿಬಿಡುತ್ತಿದ್ದಾರೆ. ಈ ದಲ್ಲಾಳಿಗಳ ಬೂಟಾಟಿಕೆಯ ಹಿಂದಿನ ಕಟು ಸತ್ಯಗಳು ಈಗಾಗಲೇ ಭಾರತೀಯ ಮತ್ತು ತೃತೀಯ ಜಗತ್ತಿನ ಬಹುತೇಕ ದೇಶಗಳ ರೈತರಿಗೆ ಅರ್ಥವಾಗಿದೆ. ಆದರೂ ಈ ಬಾಡಿಗೆ ಚಿಂತಕರು ತಮ್ಮ ಪುಂಗಿ ಊದುವುದನ್ನು ನಿಲ್ಲಿಸಿಲ್ಲ ಎನ್ನುವುದು ನಾಚಿಕೆಗೇಡು.
ಭಾರತೀಯ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ, ಅವರ ಬಾಳಿಗೆ ನೆಮ್ಮದಿಯನ್ನು ತಂದುಕೊಡುವ ಪಾಠವನ್ನು ಈಗ ಈ ಬೀಜ ಕಂಪನಿಗಳ ದಲ್ಲಾಳಿ ಚಿಂತಕರು ಬೋಸುತ್ತಿದ್ದಾರೆ. ಅದಕ್ಕೆ ಕೆಲವು ಭಾರತೀಯ ಕೋಡಂಗಿಗಳೂ ದನಿಗೂಡಿಸಿವೆ. ರೈತರು ಆರ್ಥಿಕ ಅಭದ್ರರಾದದ್ದೇ ಈ ಕಂಪನಿಗಳ ವಾಣಿಜ್ಯ ಕೃಷಿ ನೀತಿಗಳಿಂದ ಎನ್ನುವ ಅರಿವು ಈ ಮಧ್ಯವರ್ತಿ ಕಂಪನಿಗಳಿಗೆ ಮತ್ತು ಅವುಗಳ ಬಾಲಂಗೋಚಿಗಳಿಗೆ ಅರ್ಥವಾಗದ್ದು ವಿಪರ್ಯಾಸ.
ಈ ಕುಲಾಂತರಿ ತರಕಾರಿಗಳನ್ನು ಮಾರುಕಟ್ಟೆಗೆ ಬಿಡಲು ೨೦೦೪ರಲ್ಲೇ ಸಿದ್ಧವಾಗಿದ್ದವು. ಹಲವಾರು ರೀತಿಯಲ್ಲಿ ವಿರೋಧ ವ್ಯಕ್ತವಾದ ಕಾರಣ ಮುಂದೂಡುತ್ತ ಬಂದು ಈಗ ಹೇಗಾದರೂ ಮಾಡಿ ತಮ್ಮ ಕೊಳಕು, ಜೀವ ವಿರೋ ಆಹಾರವನ್ನು ಜನರಿಗೆ ತಿನಿಸಲು ತುದಿಗಾಲಲ್ಲಿ ನಿಂತಿವೆ. ಪ್ರವೇಶಕ್ಕಾಗಿ ಬದನೆಯನ್ನು ನಂತರದಲ್ಲಿ ಮೆಕ್ಕೆ ಜೋಳ, ಆಲೂಗಡ್ಡೆ, ಬೆಂಡೆ, ಕೋಸು, ಬತ್ತ ಮುಂತಾದವನ್ನು ಬಿಡುಗಡೆಗೆ ಸಿದ್ಧತೆ ನಡೆಸಿವೆ. ಈ ಕುರಿತು ಸಮಗ್ರ ಮಾಹಿತಿ ನೀಡುವಂತೆಯೂ, ಮನುಷ್ಯ ಮತ್ತು ಜೀವ ವೈವಿದ್ಯಕ್ಕೆ ಧಕ್ಕೆಯಾಗದಂಥ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸದಸ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಆದೇಶ ದೊರೆತರೆ ದೇಶದ ಹನ್ನೊಂದು ಪ್ರದೇಶಗಳಲ್ಲಿ ಬಿ.ಟಿ. ತರಕಾರಿಗಳನ್ನು ಬೆಳೆಯಲು ಅವಕಾಶ ನೀಡುವ ಸಾಧ್ಯತೆ ಇದೆಯಂತೆ. ಅದರಲ್ಲಿ ಮೊದಲನೆಯದು ಬದನೆ. ಚೀನಾವನ್ನು ಬಿಟ್ಟರೆ ಭಾರತವೇ ಅತಿ ಹೆಚ್ಚು ಬದನೆ ಬೆಳೆಯುವ ದೇಶ. ಭಾರತದಲ್ಲಿ ಪ್ರತೀ ವರ್ಷ ೪,೭೨,೦೦೦ ಹೆಕ್ಟೇರ್ ಪ್ರದೇಶದಲ್ಲಿ ೭.೬ ಮಿಲಿಯನ್ ಟನ್ ಬದನೆ ಬೆಳೆಯಲಾಗುತ್ತಿದೆ. ಅಂದರೆ ಹೆಕ್ಟೇರ್‌ಗೆ ಸರಾಸರಿ ೧೬.೩ ಟನ್. ಒರಿಸ್ಸಾ, ಬಿಹಾರ, ಕರ್ನಾಟಕ, ಪಶ್ಚಿಮ ಬಮಗಾಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚು ಬದನೆ ಬೆಳೆಯಲಾಗುತ್ತಿದೆ. ಕುಲಾಂತರಿ ಬೀಜಗಳ ಮಾರುಕಟ್ಟೆಗೆ ಅವಕಾಶ ನೀಡಿದರೆ ಈ ರಾಜ್ಯಗಳಲ್ಲೆಲ್ಲಾ ಸ್ಥಳೀಯ ಪಾರಂಪರಿಕ ಬೀಜಗಳು ಇಲ್ಲವಾಗುತ್ತವೆ. ಇದರಿಂದ ರೈತರ ಬೀಜ ಸ್ವಾತಂತ್ರ್ಯದ ಹಕ್ಕು, ಭಾರತದ ಜೀವ ವೈವಿಧ್ಯನಾಶ, ಜನರ ಆರೋಗ್ಯ ಹಾಳಾಗುವ ಕುರಿತು ಸರಕಾರೇತರ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿವೆ. ಕೇಂದ್ರ ಪರಿಸರ ಖಾತೆ ಸಚಿವ ಜಯರಾಂ ರಮೇಶ್ ಕೂಡ ಜಿ.ಎಂ. ಬೆಳೆಗಳ ಬಗ್ಗೆ ಆಸಕ್ತಿ ತೋರದಿರುವುದು ಮತ್ತು ಸ್ಥಳೀಯ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಕುರಿತು ಮಾತನಾಡುತ್ತಿರುವುದು ಬೀಜ ಕಂಪನಿಗಳಿಗೆ ಹಿನ್ನೆಡೆಯಾಗುತ್ತಿದೆ.
ಭಾರೀ ಇಳುವರಿ, ಬಡತನ ನಿರ್ಮೂಲನೆ ಎಂದು ಪಾಠ ಹೇಳುತ್ತಿರುವ ಬೊಗಳೇ ಕಂಪನಿಗಳು ತಮ್ಮ ಬೀಜಗಳಿಂದ ಭಾರತದ ರೈತರು ಈ ಹಿಂದೆ ಅನುಭವಿಸಿದ ಸಂಕಟಗಳನ್ನು ಹೇಳುತ್ತಿಲ್ಲ. ೨೦೦೨-೨೦೦೮ರ ಅವಯಲ್ಲಿ ಭಾರತದ ಶೇ. ೮೦ರಷ್ಟು ಹತ್ತಿ ಬೆಳೆಯುವ ಭೂಮಿಯನ್ನು ( ೭.೬ ಮಿಲಿಯನ್ ಹೆಕ್ಟೇರ್ ಪ್ರದೇಶ) ಆವರಿಸಿಕೊಂಡವು ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗದೆ ರೈತರು ಆತ್ಮಹತ್ಯೆಗೆ ಶರಣಾದರು. ಕಾರಣ ಉತ್ಪಾದನೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿದರೆ ಅದರ ನಿರ್ವಹಣೆ ವೆಚ್ಚ ಬಹುತೇಕ ಎರಡರಷ್ಟಾಯಿತು. ಅಂದರೆ ಉತ್ಪಾದನೆಯ ಬಹುಪಾಲು ಹಣ ನಿರ್ವಹಣೆಗೆ ಹೋಯಿತು. ಮತ್ತೆ ರೈತರು ಬರಿಗೈಯಾದರು. ದೇಶದ ಅತಿಹೆಚ್ಚು ಹತ್ತಿ ಬೆಳೆಯುವ ರಾಜ್ಯವಾದ ಮಹಾರಾಷ್ಟ್ರದ ವಿದರ್ಭ ಸೇರಿದಂತೆ ನೇಕ ಕಡೆ ಸಾಲುಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಹಾಗಾದರೆ ಭಾರೀ ಲಾಭದ ಉದ್ದೇಶಗಳು ಏನಾದವು? ಕಂಪನಿಯ ಬೀಜಗಳನ್ನೇ ನಂಬಿದ್ದರಿಂದ ಈಗ ಅಲ್ಲಿ ಸ್ಥಳೀಯ ಹತ್ತಿ ಬೀಜಗಳೇ ಇಲ್ಲ. ರೈತರು ಅನಿವಾರ್ಯವಾಗಿ ಕಂಪನಿ ಬೀಜಗಳನ್ನು ಖರೀದಿಸಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೀಜ ಕಂಪೆನಿಗಳ ಉದ್ದೇಶವೇ ಅದು. ರೈತರ ಕೈಯಲ್ಲಿದ್ದ ಸ್ಥಳೀಯ ಅಸ್ತ್ರಗಳನ್ನು ಕಿತ್ತುಕೊಂಡು ಕೊನೆಗೆ ತಮಗಾಗಿ ಕಾಯುವಂತೆ ಮಾಡುವುದು ಬೀಜದ ಅವಲಂಬನೆ ಶುರುವಾದರೆ ಕೃಷಿ ಸಂಪೂರ್ಣ ಪರಾವಲಂಬಿಯಾಗುತ್ತದೆ. ಇದು ಹತ್ತಿ ಮಾತ್ರವಲ್ಲ, ಭಾರತೀಯ ಆಹಾರ ಸಾರ್ವಭೌಮತ್ವದ ಮೇಲೆ ಭಾರೀ ಪರಿಣಾಮ ಬೀರಲಿದ್ದು ಭವಿಷ್ಯದಲ್ಲಿ ಆಹಾರಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಬೇಕಾಗುವ ಅಪಾಯ ಎರಾಗಲಿದೆ.
ಪ್ರಕೃತಿ, ಪ್ರಾಣಿ, ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮವಿಲ್ಲದಂತೆ ಕುಲಾಂತರಿ ಆಹಾರವಿದೆ ಎನ್ನುವುದನ್ನು ದೃಢ ಪಡಿಸಲು ೨೯ ಭದ್ರತಾ ನಿಯಮಗಳನ್ನು ಪಾಲಿಸಬೇಕಾಗಿದೆ. ಆದರೆ ಆರಂಭದಲ್ಲಿ ಇದು ಸರಿಯಾಗೇ ನಡೆಯಬಹುದು ಎಂದಿಟ್ಟುಕೊಳ್ಳೋಣ. ಭವಿಷ್ಯದಲ್ಲಿ ಭ್ರಷ್ಟ ಕಾರಣಿಗಳು, ಅಕಾರಿಗಳು ಮನಸೋ ಇಚ್ಛೆ ಆದೇಶ ನೀಡಿದರೆ ಇಡೀ ದೇಶವೇ ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಮದ್ಯಪ್ರದೇಶದ ಭೂಪಾಲ್ ಅನಿಲ ದುರಂತದಂಥ ಕ್ರೂರ ಹುನ್ನಾರಗಳನ್ನು ಗರ್ಭೀಕರಿಸಿಕೊಂಡಿರುವ ಕಂಪೆನಿಗಳು ಆಹಾರದ ಮೂಲಕ ದೇಶಪ್ರವೇಶ ಮಾಡಿದರೆ ಆಗಬಹುದಾದ ಅನಾಹುತವನ್ನು ಊಹಿಸಲೂ ಅಸಾಧ್ಯ. ಶ್ರೀಮಂತ ದೇಶಗಳಿಂದ ಬಂದ ಹಂದಿ ಜ್ವರ ಇಡೀ ಜಗತ್ತನ್ನೇ ಆವರಿಸಿದೆ. ಅದಕ್ಕೆ ಔಷಧ ತಯಾರಿಸಲು ಸಂಸ್ಥೆಗಳು ನಾ ಮುಂದೆ ತಾ ಮುಂದೆ ಎಂದು ಬಂದು ನಿಂತಿವೆ ಇನ್ನು ಆಹಾರವೇ ವಿಷವಾದರೆ ಮುಂದೊಂದು ದಿನ ದೇಶವೇ ಆಸ್ಪತ್ರೆಯಾಗುವುದರಲ್ಲಿ ಅನುಮಾನವಿಲ್ಲ. ಹಾಗೆಂದೇ ಕುಲಾಂತರಿ ಆಹಾರ ಬಡ ದೇಶಗಳನ್ನೇ ನಾಶ ಮಾಡಿದರೆ ಆಶ್ಚರ್ಯವಿಲ್ಲ. ಆದ್ದರಿಂದ ಆಹಾರವನ್ನು ಸಹಜವಾಗಿಯೇ ಇರುವಂತೆ ಮಾಡಬೇಕಾದರೆ ಮೊದಲು ಅದರ ಮೇಲೆ ನಡೆಯುತ್ತಿರುವ ಅನಗತ್ಯ ಸಂಶೋಧನೆಗಳು ನಿಲ್ಲಬೇಕು. ಅಕಸ್ಮಾತ್ ಜಿ.ಎಂ. ಆಹಾರ ಬೇಕೇಬೇಕು ಎನ್ನುವುದಾದರೆ ಅದು ಅಮೆರಿಕದಂಥ ದೇಶಗಳಿಗೆ ಸೀಮಿತವಾಗಲಿ. ಅಂಥ ದೈತ್ಯ ದೇಶಗಳು ಮಾತ್ರ ಅದನ್ನು ತಿಂದು ಜೀರ್ಣಿಸಿಕೊಂಡು ಮತ್ತಷ್ಟು ದೈತ್ಯವಾಗಿ ಬೆಳೆಯಲಿ. ರೋಗ ಬಂದವರು ಮಾತ್ರ ಮದ್ದು ಪಡೆಯಬೇಕು ಆದ್ದರಿಂದ ನಾವು ಕೇಳಿಯೇ ಇಲ್ಲದ ಜಿ.ಎಂ. ತಂತ್ರಜ್ಞಾನವನ್ನು ಒತ್ತಾಯಪೂರ್ವಕವಾಗಿ ನೀಡಲು ಬರುವುದರ ಹಿಂದಿನ ಕೈ ಯಾವುದು? ಸಾಮ್ರಾಜ್ಯಶಾಹಿ ದೇಶಗಳು ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳಲು ಬಡದೇಶಗಳನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುತ್ತಿವೆ. ಅದಕ್ಕೆ ಸರಕಾರಗಳು ಅವಕಾಶ ನೀಡಬಾರದು. ನಮ್ಮ ಸ್ಥಳೀಯ ಆಹಾರದಿಂದಲೇ ಹೆಚ್ಚು ಉತ್ಪಾದನೆಗೆ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಅಮೆರಿಕದಂಥ ರಪ್ತು ಪ್ರಧಾನ ದೇಶಗಳಿಂದ ಭಾರತೀಯರು ಕೃಷಿಯ ಪಾಠ ಕಲಿಯುವ ಅಗತ್ಯವಿಲ್ಲ.

No comments: