Monday, October 12, 2009

ಗಾಂಧಿ ಎಂಬ ಚಲನೆ ಮತ್ತು ಧರ್ಮದ ಆರ್ತನಾದ

ಜಾಗತೀಕರಣದಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೂ ಗಾಂಧಿ ಚಿಂತನೆಗಳೇ ಸಹಕಾರಿ. ನಾವು ಯಾವ ಒತ್ತಡಗಳಿಗೂ ಮಣಿಯದೆ ದೇಶಿ ಮಾರ್ಗದಲ್ಲಿ ನಡೆದರೆ ಹೊರಗಿನ ಸವಾಲುಗಳನ್ನು ಬಹಳ ಸುಲಭವಾಗಿ ಎದುರಿಸಬಹುದು ಎಂಬ ನಂಬಿಕೆಯೇ ಗಾಂವಾದದ ತಿರುಳು. ಜಾಗತೀಕರಣದ ತೆರೆದ ದಿಡ್ಡಿ ಬಾಗಿಲಿನಲ್ಲಿ ತಿರುಕನ ಕನಸುಕಂಡ ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳು ಇಂದಿನ ಆರ್ಥಿಕ ಹಿಂಜರಿತದಿಂದ ಯಾವ ಸಾಮ್ರಾಜ್ಯಶಾಹಿ ದೇಶಗಳ ಕಸದ ತೊಟ್ಟಿಗೆ ಸೇರುವೆವೂ ಎಂಬ ತಳಮಳ ಎದುರಿಸತೊಡಗಿವೆ.

‘ಮಂದಿರದಲ್ಲಿ ನಾನು ಪ್ರಭು ಶ್ರೀರಾಮನನ್ನು ಕಂಡಿಲ್ಲ, ಈ ದೇಶದ ಕೋಟಿ ಕೋಟಿ ಬಡವರ ಸೇವೆಯಲ್ಲಿ ಅವನನ್ನು ಕಂಡಿದ್ದೇನೆ’ ಎಂದಿದ್ದರು ಮಹಾತ್ಮ ಗಾಂಧಿ .
ಗಾಂಧಿ ಎಂಬುದು ಈಗ ಒಂದು ವ್ಯಕ್ತಿಯಾಗಿ ಹೆಸರಾಗಿ ಮಾತ್ರ ಉಳಿದಿಲ್ಲ. ಹಾಗೆಯೇ ಬುದ್ಧ, ಬಸವ, ಅಂಬೇಡ್ಕರ್, ಮಾರ್ಕ್ಸ್ ಯಾರೂ ಕೂಡ ವ್ಯಕ್ತಿಗಳಾಗಿ, ಸಿದ್ಧಾಂತವಾಗಿ ಉಳಿದಿಲ್ಲ. ಅದರಾಚೆಗಿನ ಜಾತಿಯಾಗಿ, ಅದನ್ನೂ ಮೀರಿ ಈಗ ರಾಜಕೀಯದ ಸಂಕೋಲೆತೊಟ್ಟು ವರ್ತಮಾನದ ರಾಜಕೀಯದ ತುರ್ತು ನಾಯಕರಾಗಿ ಸ್ಪಂದಿಸತೊಡಗಿದ್ದಾರೆ.
ರಾಜಕೀಯ ಕೂಡ ತತ್ತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಸಾಮಾಜಿಕ ಪಿಡುಗಿನಂತೆ ಕೆಲಸಮಾಡುತ್ತಿರುವುದರಿಂದ ಅದನ್ನು ಯಾವದಿಕ್ಕಿನಲ್ಲಿ ನೋಡಬೇಕೆನ್ನುವುದು ತಿಳಿಯದಂತಾಗಿದೆ. ಯಾರಿಗೆ ಯಾವ ಸಿದ್ಧಾಂತದ ಮೇಲೆ ನಂಬಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅವೆಲ್ಲವನ್ನೂ ರಾಜಕೀಯವಾಗಿ ಬಳಸಿಕೊಳ್ಳುವ ವಿಚಾರದಲ್ಲಿ ಎಲ್ಲದನ್ನೂ ಮರೆತು ಅಕಾರದ ಅಗತ್ಯಗಳನ್ನು ಪೂರೈಸಿಕೊಳ್ಳುವ ವಿದ್ಯೆಯಲ್ಲಿ ಮಾತ್ರ ಪರಿಣತರಾಗಿದ್ದಾರೆ. ಇದಕ್ಕೆ ಪಕ್ಷ, ಜಾತಿ, ಧರ್ಮ ಎಂಬುದು ಬರೀ ತೋರಿಕೆ. ಗಾಂಯ ದೇಶಿ ಚಿಂತನೆಗಳು ಬಹು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಹಲವು ವಿತಂಡವಾದಗಳನ್ನು ಮುಂದಿಟ್ಟ ಜನ ಅವೆಲ್ಲವನ್ನೂ ಅಲ್ಲಗಳೆಯಲು ಮುಂದಾಗಿದ್ದರು. ಅದಕ್ಕೆ ಪರ್ಯಾಯವಾಗಿ ಕೆಲವು ಹಳಸಲು ಸಿದ್ಧಾಂತವನ್ನು ಮಂಡಿಸಿದ್ದರು. ಆಗಲೂ ಗಾಂಧಿ ಮರೆಯಾಗಲಿಲ್ಲ. ಗಾಂಗೆ ಸಮನಾಗಿ ಕೆಲವು ನಾಮಗಳು ದೇಶಾದ್ಯಂತ ಚಾಲ್ತಿಗೆ ಬಂದಾಗಲೂ ಸಾಬರಮತಿಯ ಸಂತನ ಹೆಸರು ತೇಜಸ್ಸು ಕಳೆದುಕೊಳ್ಳಲಿಲ್ಲ, ಬ್ರಿಟಿಷರ ಸೂಟು ಬೂಟಿನ ಎದುರು ಗಾಂಯ ಪಂಚೆ ಚಿಕ್ಕದು ಅಥವಾ ದೊಡ್ಡದಾಗಲಿಲ್ಲ, ಕೋಲು ಆಕಾರ ಕಳೆದುಕೊಳ್ಳಲಿಲ್ಲ. ಎಲ್ಲ ಸಾರಿಗೆ ಸವಲತ್ತು ಬಳಸುವ ಅವಕಾಶವಿದ್ದಾಗಲೂ ಅವರ ನಡೆದಾಡುವ ಮನಸ್ಥಿತಿ ಬದಲಾಗಲಿಲ್ಲ. ಬಹಳ ಮುಖ್ಯವಾಗಿ ಜಾಗತೀಕರಣದ ಹೊತ್ತಿನಲ್ಲಿ ಮತ್ತು ಆ ನಂತರದಲ್ಲೂ ಗಾಂಧಿ ಎಂಬ ಅಪ್ಪಟ ದೇಶಿ ಅಜ್ಜನ ಸಿದ್ಧಾಂತಗಳು ಮಸುಕಾಗಲಿಲ್ಲ ! ಇವು ಸಿದ್ಧಾಂತದ ಗಟ್ಟಿತನಕ್ಕೆ ಮತ್ತು ಅವುಗಳ ಸಾರ್ವಕಾಲಿಕತೆಗೆ ಸಾಕ್ಷಿ. ದೇಶೀತನ ಎಂಬುದುಗಾಂಧಿ ತೋರುಂಬ ಲಾಭವಾಗಿರದೆ ಅದೇ ಜೀವನ ಶೈಲಿಯಾಗಿತ್ತು. ಅದರಾಚೆಗಿನ ಆಡಂಬರ ಬೂಟಾಟಿಕೆಯಾಗಿತ್ತು. ಇದೆಲ್ಲಕ್ಕೂ ಅವರು ಬದುಕಿದ ಮತ್ತು ಬದುಕಿನ ರೀತಿಯೇ ಆಧಾರ. ಅದಕ್ಕೆ ಅವರೇ ಒಂದುಕಡೆ ಹೇಳಿದ್ದಾರೆ ‘ನನ್ನ ಜೀವನವೇ ನನ್ನ ಸಿದ್ಧಾಂತ’ ಎಂದು. ಇದು ಸತ್ಯಕೂಡ. ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ದೇಶಿ ಉತ್ತರ ನೀಡಿದ ಗಾಂ ಭಾರತವನ್ನು ಹಳ್ಳಿಗಳ ದೃಷ್ಟಿಯಿಂದ ನೋಡಿದ್ದರು. ಅದಕ್ಕಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಬೋಸಿದರು. ‘ಭಾರತದ ಆತ್ಮ ನಗರಗಳಲ್ಲ, ಹಳ್ಳಿಗಳು’ ಎಂದಿದ್ದರು. ಹೀಗೆ ಇಡೀ ದೇಶದ ಚಲನೆಯನ್ನು ಬಹಳ ಸೂಕ್ಷ್ಮವಾಗಿ ಅರ್ಥೈಸುತ್ತ ಅದರ ಸಮಗ್ರತೆಗೆ ಧಕ್ಕೆಯಾಗದಂತೆ ಕಾಯ್ದುಕೊಳ್ಳುವ ಎಚ್ಚರವನ್ನು ಬೋಸಿದ್ದಾರೆ. ಆದ್ದರಿಂದಲೇ ಗಾಂ ಭಾರತ ಭೂತ-ಭವಿಷ್ಯ ಮತ್ತು ವರ್ತಮಾನ. ಜಾಗತೀಕರಣದಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೂ ಗಾಂಧಿ ಚಿಂತನೆಗಳೇ ಸಹಕಾರಿ. ನಾವು ಯಾವ ಒತ್ತಡಗಳಿಗೂ ಮಣಿಯದೆ ದೇಶಿ ಮಾರ್ಗದಲ್ಲಿ ನಡೆದರೆ ಹೊರಗಿನ ಸವಾಲುಗಳನ್ನು ಬಹಳ ಸುಲಭವಾಗಿ ಎದುರಿಸಬಹುದು ಎಂಬ ನಂಬಿಕೆಯೇ ಗಾಂವಾದದ ತಿರುಳಾಗಿರುವುದರಿಂದ ಅದರ ಪಾಲನೆ ಸರಿಯಾಗಿ ಆಗಲಿಲ್ಲ. ಆ ಚಿಂತನೆಯ ಆಳಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಜಾಗತೀಕರಣದ ತೆರೆದ ದಿಡ್ಡಿ ಬಾಗಿಲಿನಲ್ಲಿ ತಿರುಕನ ಕನಸುಕಂಡ ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳು ಇಂದಿನ ಆರ್ಥಿಕ ಹಿಂಜರಿತದಿಂದ ಯಾವ ಸಾಮ್ರಾಜ್ಯಶಾಹಿ ದೇಶಗಳ ಕಸದ ತೊಟ್ಟಿಗೆ ಸೇರುವೆವೂ ಎಂಬ ತಳಮಳ ಎದುರಿಸತೊಡಗಿವೆ. ಈಗ ಮತ್ತೆ ಗಾಂಧಿ ಪ್ರಸ್ತುತವಾಗತೊಡಗಿದ್ದಾರೆ. ಗಾಂ ಯಾವಾಗಲೂ ಅಪ್ರಸ್ತುತ ಅಲ್ಲ ಆದರೆ ಜಾಗತೀಕರಣದ ಆಸೆಬುರುಕ ಆಲೋಚನೆಗಳು ಅವರನ್ನು ಪರದೆಯ ಹಿಂದೆ ಸರಿಸಿದಂತೆ ಮಾಡಿದರೂ ಅವರನ್ನು ಮರೆ ಮಾಡಲಿಲ್ಲ. ಅದಕ್ಕೆ ರಾಜಕೀಯ ಕಾರಣಗಳೇ ಬಹುಮುಖ್ಯ ! ಒಂದು ಪಕ್ಷದವರು ಗಾಂಯನ್ನು ಗುತ್ತಿಗೆ ಹಿಡಿದಿದ್ದರೆ ಮತ್ತೊಬ್ಬರು ಧರ್ಮದ ಗುತ್ತಿಗೆದಾರರಾಗಿದ್ದಾರೆ. ಇನ್ನೊಬ್ಬರು ಮಾರ್ಕ್ಸ್‌ನ ಭಜನೆ ಮಾಡುತ್ತಿದ್ದಾರೆ. ಇವೆಲ್ಲವೂ ರಾಜಕೀಯ ಕಾರಣಗಳೇ ಹೊರತು ಇಲ್ಲಿ ಮಾನವೀಯತೆ, ಅಂತಃಕರಣ ಅಥವಾ ಒಟ್ಟುಗೂಡಿಕೆ ಎನ್ನುವುದು ತೋರಿಕೆಯಷ್ಟೆ.
ಈಗ ಜಗತ್ತಿನ ಆರ್ಥಿಕ ಹಿಂಜರಿಕೆ ಆರಂಭವಾಗಿದೆ. ಅಮೆರಿಕದ ಆರ್ಥಿಕ ಕುಸಿತ ಇಡೀ ಜಗತ್ತಿನ ಕುಸಿತವಾಗಿ ಕಾಣುತ್ತಿದೆ. ಇದಕ್ಕೆ ಕಾರಣ ಸಂಪತ್ತಿನ ಕ್ರೋಡೀಕರಣ. ರಕ್ತ ಮತ್ತು ಹಣ ಒಂದುಕಡೆ ನಿಲ್ಲಬಾರದು. ಅದು ಚಲನೆಯಲ್ಲಿದ್ದರೆ ಮಾತ್ರ ಮನುಷ್ಯ ಮತ್ತು ದೇಶದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಸತ್ಯ ಈಗ ಜಗತ್ತಿಗೆ ಅರಿವಾಗಿದೆ. ಒಂದು ಕಾಲದಲ್ಲಿ ಜಗತ್ತಿನ ಎಲ್ಲ ದೇಶಗಳು ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಗುಲಾಮಗಿರಿ ಅನುಭವಿಸಿದ್ದವು. ಈಗ ಅವು ಜಾಗತೀಕರಣದ ಮೂಲಕ ಆರ್ಥಿಕ ಗುಲಾಮಗಿರಿ ಎದುರಿಸುತ್ತಿವೆ. ಎರಡನೇ ಮಹಾ ಯುದ್ಧದ ನಂತರ ಒಟ್ಟುಗೂಡಿದ ಎಲ್ಲ ಸಾಮ್ರಾಜ್ಯಶಾಹಿ ದೇಶಗಳು ತಮ್ಮ ಸಾಮ್ರಾಜ್ಯದ ಮರುಸ್ಥಾಪನೆಗೆ ಬೀಸಿದ ಜಾಗತೀಕರಣದ ಜಾಲದಲ್ಲಿ ಅಲ್ಪ ಸುಖದ ಕನಸುಕಂಡ ಬಡದೇಶಗಳು ಆರ್ಥಿಕ ಕುಸಿತದಿಂದ ತತ್ತರಗೊಂಡಿವೆ. ಈ ವಿಷವರ್ತುಲ ಅದೆಂಥ ಭೀಕರ ಪರಿಣಾಮ ಬೀರಬಹುದು ಎಂಬ ಬಗ್ಗೆ ತಜ್ಞರಲ್ಲೇ ಒಮ್ಮತದ ಅಭಿಪ್ರಾಯಗಳಿಲ್ಲ. ಕೆಲವೇ ಶ್ರೀಮಂತರ ಸಂಪತ್ತನ್ನು ಒಟ್ಟು ದೇಶದ ಆದಾಯ ಎಂದು ಬಿಂಬಿಸಿದ ಬಾಡಿಗೆ ಅರ್ಥ ಚಿಂತಕರು ಈಗ ಮಾಡನಾಡುತ್ತಿಲ್ಲ. ದೇಶದ ಒಟ್ಟು ವರಮಾನ (ಜಿಡಿಪಿ) ಏರುತ್ತಿದೆ ೯ಕ್ಕೆ ತಲುಪಿದ್ದೇವೆ ೧೦ಕ್ಕೆ ತಲುಪಿದ್ದೇವೆ ಎಂದು ಹೊಗಳಲು ಯಾರಿಂದ ಏನೇನು ತಿಂದರೋ ಗೊತ್ತಿಲ್ಲ ಅಂತೂ ಈಗ ಆ ಭಟ್ಟಂಗಿಗಳು ಮಾತು ನಿಲ್ಲಿಸಿದ್ದಾರೆ. ಈ ಆರ್ಥಿಕ ಕುಸಿತಕ್ಕೆ ಕಾರಣಗಳೇನು ಎಂದು ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಈ ಬಾಲಬಡುಕರಿಂದ ಸಾಧ್ಯವಾಗುತ್ತಿಲ್ಲ.
ಗಾಂಯ ಗುತ್ತಿಗೆದಾರರು, ಧರ್ಮದ ವಾರಸುದಾರರು, ಮಾರ್ಕ್ಸ್‌ನ ಅನುಯಾಯಿಗಳು ಯಾರ ಬತ್ತಳಿಕೆಯಲ್ಲೂ ಈ ಆರ್ಥಿಕ ಹಿಂಜರಿತ ತಡೆಯುವ ಅಸ್ತ್ರಗಳಿಲ್ಲ ಎನ್ನುವುದು ಈಗ ಎಲ್ಲರಿಗೂ ಮನವರಿಕೆಯಾಗಿದೆ. ಹಿಂದೆಂದಿಗಿಂತಲೂ ಗಾಂ ಹೆಚ್ಚು ಹೆಚ್ಚು ಪ್ರಸ್ತುತವಾಗತೊಡಗಿದ್ದಾರೆ. ಅನೇಕ ಗಾಂಗಳನ್ನು ಬೆನ್ನಿಗೆ ಕಟ್ಟಿಕೊಂಡಿರುವ ಕಾಂಗ್ರೆಸ್ ಅದನ್ನೇ ತನ್ನ ರಾಜಕೀಯ ಜೀವಾಳ ಮಾಡಿಕೊಂಡಿದೆ. ಮಾರ್ಕ್ಸ್‌ನ ಅನುಯಾಯಿಗಳು ಮೌನಕ್ಕೆ ಶರಣಾಗಿದ್ದಾರೆ ಧರ್ಮದ ವಕ್ತಾರರು ಈಗ ಗಾಂಯ ಕಡೆಗೆ ವಾಲಿದಂತೆ ಮತ್ತೆ ವಾಲದಂತೆ ದ್ವಂದ್ವದಲ್ಲಿದ್ದಾರೆ. ಇತ್ತೀಚೆಗೆ ನಾಗಪುರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ‘ವಿಶ್ವ ಎದುರಿಸುತ್ತಿರುವ ಆರ್ಥಿಕ ಹಿಂಜರಿತ ತಡೆಯೊಡ್ಡಲು ಬಾಪೂಜಿ ಚಿಂತನೆ ಅನಿವಾರ್ಯ ಎಂದಿದ್ದಾರೆ. ಬಂಡವಾಳ ಶಾಹಿ ವ್ಯವಸ್ಥೆಯಿಂದ ನಾವು ಹೊರಬರಲು ಗಾಂಯ ದೇಶಿ ಚಿಂತನೆ ಇಂದು ಹೆಚ್ಚು ಪ್ರಸ್ತುತ ಎಂದಿದ್ದರು. ಮರುದಿನವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಮ್ಮ ಮುಂದಿನ ಗುರಿ ಎಂದರು. ಮಂದಿರದಲ್ಲಿ ರಾಮನನ್ನು ಕಾಣದೆ ಕೋಟಿ ಕೋಟಿ ಬಡವರ ಸೇವೆಯಲ್ಲಿ ರಾಮನನ್ನು ಕಂಡ ಗಾಂ ವಿಚಾರಧಾರೆ ಇವರ ಗುರಿಯೋ ಅಥವಾ ಧರ್ಮದ ಹೆಸರಿನಲ್ಲಿ ರಾಮನಿಗೊಂದು ಮಂದಿರ ನಿರ್ಮಿಸುವುದು ಇದರ ಉದ್ದೇಶವೋ ಗೊತ್ತಿಲ್ಲ. ಅಂತೂ ಗುತ್ತಿಗೆದಾರರಿಂದ ಮೂಲ ಗಾಂಯನ್ನು ಕಿತ್ತುಕೊಳ್ಳಲು ಪ್ರಥಮ ಬಾರಿಗೆ ಬಿಜೆಪಿ ಮುಂದಾಗಿದೆ. ಈಗ ದೇಶಿ ಅಥವಾ ಗಾಂಧಿ ಎನ್ನುವುದು ಆಂತರಿಕ ಬದ್ಧತೆಯಾಗಿ ಕಾಣುತ್ತಿಲ್ಲ. ಬದಲಾಗಿ ಬಾಹ್ಯ ಘೋಷಣೆಯಾಗಿ ಗೋಚರಿಸತೊಡಗಿದೆ.
೧೯೯೨ರ ಹೊತ್ತಿಗೆ ನಾವು ಜಾಗತೀಕರಣಕ್ಕೆ ಪ್ರವೇಶ ಪಡೆದಾಗ ಎಲ್ಲ ದೇಶಿ, ವಿದೇಶಿ ಚಿಂತನೆಯ ನಾಯಕರು ಲೋಕ ಸಭೆಯಲ್ಲಿದ್ದರು. ಅಷ್ಟೊತ್ತಿಗಾಗಲೇ ಜಾಗತೀಕರಣ ಎಂದರೆ ಗೊತ್ತಾಗಿತ್ತು, ಇದೊಂದು ಸಾಮ್ರಾಜ್ಯಶಾಹಿಯ ಮರುಸ್ಥಾಪನೆಯ ಹುನ್ನಾರ ಎಂದು. ಆಗ ಯಾರೂ ಮಾತನಾಡಲೇ ಇಲ್ಲ. ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡ ಪ್ರತಿಯೊಬ್ಬರೂ ಉದಾರೀಕರಣ ನೀತಿಯನ್ನು ಒಪ್ಪಿಕೊಂಡವರೆ! ‘ನಾವು ಈಗ ಒಪ್ಪಿಗೆ ಸೂಚಿಸದಿದ್ದರೆ ಆರ್ಥಿಕವಾಗಿ ಹಿಂದೆ ಉಳಿಯುತ್ತೇವೆ. ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಗೆ ಜಾಗತೀಕರಣ ಒಂದೇ ದಾರಿ....’ ಮುಂತಾದ ಅರ್ಥಹೀನ ವಾದಗಳನ್ನು ಮಂಡಿಸಿದವರು ಇಂದು ಉಸಿರೇ ಹೊರ ಬರದಂತಾಗಿದ್ದಾರೆ. ಈ ಜಾಗತೀಕರಣದಿಂದ ವಿದೇಶಿ ಕಾರು ದೇಶಿ ಮಾರುಕಟ್ಟೆಗೆ ಬಂದವು. ಐಷಾರಾಮಿ ವಸ್ತುಗಳು ನಮ್ಮ ಮನೆ ಬಾಗಿಲಿಗೇ ಬಂದವು. ಇದರಿಂದ ನಾವೂ ಶ್ರೀಮಂತಿಕೆಯನ್ನು ಅನುಭವಿಸುವಂತಾಯಿತು ಎಂದು ಮಧ್ಯಮ ವರ್ಗಗಳು ಅಲ್ಪ ತೃಪ್ತಿ ವ್ಯಕ್ತಪಡಿಸಿದ್ದನ್ನು ಹೊರತುಪಡಿಸಿದರೆ ನಾವು ಇಲ್ಲಿ ಪಡೆದಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ವಿದೇಶಿ ಬೀಜಗಳಿಂದ ನಮ್ಮ ದೇಶಿ ಬಿತ್ತನೆ ಬೀಜಗಳು ನಾಶವಾದವು, ಗೊಬ್ಬರ, ಔಷಧ ಪ್ರವೇಶದಿಂದ ಆಹಾರದಲ್ಲಿ ವಿಷ ಬೆರೆಯಿತು. ಮಣ್ಣು ವಿಷವಾಯಿತು, ಬೃಹತ್ ಕೈಗಾರಿಕೆಗಳ ಪ್ರವೇಶದಿಂದ ದೇಶಿ ಕೈಗಾರಿಕೆಗಳು, ಗುಡಿಕೈಗಾರಿಕೆಗಳು ಮುಚ್ಚಿಹೋದವು.
ನಿರಾಯುಧನಾದ ಕರ್ಣ ಯುದ್ಧ ಭೂಮಿಯಲ್ಲಿ ಗುರುವಿನ ಮಂತ್ರ ನೆನಪು ಮಾಡಿಕೊಂಡಂತೆ ಎಲ್ಲವನ್ನೂ ಮರೆತಿರುವ ನಾವು ಈಗ ಗಾಂವಾದಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇವೆ. ಆಧುನಿಕತೆಯ ಅಬ್ಬರದಲ್ಲೂ ಮತ್ತೆ ಮತ್ತೆ ನೆನಪಾದಗಾನ್ ಎಲ್ಲ ಪಕ್ಷಗಳ ಚುನಾವಣೆಯ ಪ್ರಣಾಳಿಕೆಗೆ ಸೀಮಿತವಾಗದೆ ನಮ್ಮ ಅಂತರಂಗದ ಸಾಕ್ಷಿಪ್ರಜ್ಞೆಯಾಗಬೇಕು, ನಮ್ಮ ಬದ್ಧತೆಯಾಗಬೇಕು.

No comments: